ತಾನೇ ಎತ್ತಿ ಆಡಿಸಿದ ಮಗುವೇ ಈಗ ಈತನ ಹೆಂಡತಿ!!!ಆಶ್ಚರ್ಯವಾದರೂ ಸತ್ಯ…

ಈ ವಯಸ್ಸು ಎನ್ನುವುದು ಕೇವಲ ಮಾತಿಗಷ್ಟೇ. ಏಕೆಂದರೆ ಈ ವಯಸ್ಸು ಕೇವಲ ನಂಬರ್ ಎಂಬುವುದಕ್ಕೆ ಈ ಘಟನೆಯೇ ಉದಾಹರಣೆ. ಹೌದು, ಬ್ರಿಟನ್‌ನಲ್ಲಿ ವ್ಯಕ್ತಿಯೊಬ್ಬರು ತಮಗಿಂತ 19 ವರ್ಷ ಚಿಕ್ಕ ಹುಡುಗಿಯನ್ನು ಮದುವೆಯಾಗಿದ್ದಾರೆ. ಆದರೆ ಅಚ್ಚರಿಯ ವಿಷಯವೆಂದರೆ ಇಬ್ಬರ ವಯಸ್ಸಿನ ವ್ಯತ್ಯಾಸವಲ್ಲ ಇಲ್ಲಿ ನಾವು ಹೇಳೋಕೆ ಹೊರಟಿರೋದು. ವಿಷಯ ಏನಪ್ಪಾ ಅಂದ್ರೆ, ಮಗುವಾಗಿದ್ದಾಗ ತಾನೇ ಎತ್ತಿ ಆಡಿಸಿದ ಮಗುವನ್ನೇ ಈಗ ಈ ವ್ಯಕ್ತಿ ಮದುವೆಯಾಗಿದ್ದಾರೆ. ಈ ದಂಪತಿಗಳು ಮೊದಲೇ ಭೇಟಿಯಾಗಿದ್ದರು ಎಂದು ತಿಳಿದಾಗ ನಿಜಕ್ಕೂ ಸಂಬಂಧಿಕರೆಲ್ಲರಿಗೂ ಆಶ್ಚರ್ಯವಾಗಿದೆ.

 

ನಾಲ್ಕು ವರ್ಷದ ಹಿಂದೆ ಪಬ್ ನಲ್ಲಿ ಪರಿಚಯವಾದ ಈ ಇಬ್ಬರು ಈಗ ಮದುವೆಯಾಗಿದ್ದಾರೆ. ಕಳೆದ ತಿಂಗಳು ರಿಚ್ ಟಾಮಿನ್ಸನ್ (48) ಎವಿ (29) ಅವರನ್ನು ವಿವಾಹವಾಗಿದ್ದಾರೆ. ಈ ಜೋಡಿ ನಡುವಿನ ಅಂತರ 19 ವರ್ಷ. ಇವರಿಬ್ಬರ ನಡುವೆ ದೊಡ್ಡ ವಯಸ್ಸಿನ ಅಂತರವಿದ್ದರೂ ಇಬ್ಬರೂ ಪರಸ್ಪರ ಪ್ರೀತಿಸುತ್ತಿದ್ದರು. ಆದರೆ ರಿಚ್ ಎವಿಯ ಪೋಷಕರನ್ನು ಭೇಟಿಯಾದಾಗ, ಅವರು ವರ್ಷಗಳ ಹಿಂದೆ ಭೇಟಿಯಾಗಿದ್ದರು ಎಂದು ಗೊತ್ತಾಗಿದೆ. ಇದರೊಂದಿಗೆ, ಅವರು ತಮ್ಮ ಭಾವಿ ಪತ್ನಿಯನ್ನು ಬಾಲ್ಯದಲ್ಲೇ ಭೇಟಿಯಾಗಿರುವುದು ಅರಿವಾಗಿದೆ.

ತಾನು ಮದುವೆಯಾದ ಹೆಂಡತಿ ಮಗುವಾಗಿದ್ದಾಗ ಮೊದಲ ಬಾರಿಗೆ ಭೇಟಿಯಾಗಿದ್ದೆ. ಈಗ ನಾವು ಮಕ್ಕಳ ನಿರೀಕ್ಷೆಯಲ್ಲಿದ್ದೇವೆ ಎಂದು ರಿಚ್ ಹೇಳಿದ್ದಾರೆ. ರಿಚ್ ಟಾಯ್ಕಿನ್ಸನ್ ಸ್ಟಾಫರ್ಡ್‌ಲೈರ್‌ನ ನಿವಾಸಿಯಾಗಿದ್ದು ಸರ್ವೇಯರ್ ಆಗಿ ಕೆಲಸ ಮಾಡುತ್ತಿದ್ದಾರೆ.

“ನಾನು ಬಾಲ್ಯದಲ್ಲಿ ಈವಿಯನ್ನು ಮೊದಲು ಭೇಟಿಯಾಗಿದ್ದೆ ಎಂದು ತಿಳಿದು ನಿಜಕ್ಕೂ ಆಶ್ಚರ್ಯವಾಗಿತ್ತು. ಈ ವಿಷಯ ತಿಳಿದು, ನನಗೆ ನಗು ಬರುತ್ತಿದೆ. ವಯಸ್ಸು ನಮಗೆ ಕೇವಲ ಒಂದು ಸಂಖ್ಯೆ ಮತ್ತು ನೀವು ಯಾರನ್ನು ಪ್ರೀತಿಸುತ್ತೀರಿ ಎಂಬುದನ್ನು ನಿರ್ಧರಿಸಲು ಸಾಧ್ಯವಿಲ್ಲ” ಎಂದು ರಿಚ್ ಹೇಳುತ್ತಾರೆ.
ಅಷ್ಟು ಮಾತ್ರವಲ್ಲದೇ, ಕೆಲವೊಮ್ಮೆ ಜನರು ತಮ್ಮನ್ನು ಎವಿಯ ತಂದೆ ಎಂದು ತಪ್ಪಾಗಿ ಭಾವಿಸುತ್ತಾರೆ ಎಂದು ರಿಚ್ ಹೇಳುತ್ತಾರೆ. 19 ವರ್ಷಗಳ ವಯಸ್ಸಿನ ಅಂತರವು ತನಗೆ ಸಮಸ್ಯೆಯಲ್ಲ ಎಂದು ಅವರು ಹೇಳುತ್ತಾರೆ. ಎವಿಯನ್ನು ಮದುವೆಯಾಗುವುದು ತಮ್ಮ ಜೀವನದ ಅತ್ಯುತ್ತಮ ದಿನ ಎಂದು ಅವರು ಹೇಳಿದ್ದಾರೆ. ನಾನು ಬಾಲ್ಯದಿಂದಲೂ ಅವಳೊಂದಿಗೆ ಸಂಬಂಧ ಹೊಂದಿದ್ದೇನೆ ಎಂದು ಸಂತೋಷವಾಗುತ್ತಿದೆ ಎಂದು ರಿಚ್ ಹೇಳಿದ್ದಾರೆ.

ಇವಿ ಪ್ರಕಾರ, “2018 ರ ಜುಲೈನಲ್ಲಿ ಬಾರ್‌ನಲ್ಲಿ ಅವರನ್ನು ಭೇಟಿಯಾದೆ. ಮೊದಲ ಭೇಟಿಯಿಂದಲೇ ನಾನು ರಿಚ್‌ನತ್ತ ಸೆಳೆಯಲ್ಪಟ್ಟೆ” ಎಂದು ಹೇಳಿದ್ದಾರೆ.

ರಿಚ್ ಎವಿಯ ತಾಯಿ ಸಾರಾಳನ್ನು ಭೇಟಿಯಾದಾಗ 90 ರ ದಶಕದಲ್ಲಿ ಕೆಲಸ ಮಾಡುವಾಗ ಒಬ್ಬರನ್ನೊಬ್ಬರು ಭೇಟಿಯಾಗಿದ್ದರು‌‌ ಎಂಬುದು ಗೊತ್ತಾಗಿದೆ. ನಂತರ ರಿಚ್ ತಮ್ಮ ಭಾವಿ ಹೆಂಡತಿನ್ನೂ ಆವಾಗಲೇ ಎತ್ತಿ ಆಡಿಸಿದ್ದೇನೆ ಎಂಬ ವಿಷಯ ತಿಳಿದಿದೆ. ಕಳೆದ ವರ್ಷವೇ ಇವರಿಬ್ಬರು ಮದುವೆಯಾಗಲು ಬಯಸಿದ್ದರು, ಆದರೆ ಕೊರೋನಾದಿಂದಾಗಿ ಸಾಧ್ಯವಾಗಲಿಲ್ಲ. ಈ ವರ್ಷ ಜುಲೈನಲ್ಲಿ ವಿವಾಹವಾದ ಅವರು ಜನವರಿಯಲ್ಲಿ ಮಗುವಿನ ನಿರೀಕ್ಷೆಯಲ್ಲಿದ್ದಾರೆ.

Leave A Reply

Your email address will not be published.