ಸೂರ್ಯ ಈಗ ಮಧ್ಯ ವಯಸ್ಕ, ಆತನ ಅರ್ಧ ಆಯಸ್ಸು ಮುಕ್ತಾಯ – ಯುರೋಪಿಯನ್ ಬಾಹ್ಯಾಕಾಶ ಸಂಸ್ಥೆಯ ವರದಿ ಬಿಚ್ಚಿ ಕೊಟ್ಟ ಇಂಟ್ರೆಸ್ಟಿಂಗ್ ಮಾಹಿತಿ !
ಬ್ರಸೆಲ್ಸ್: ಸೂರ್ಯನಿಗೆ ಈಗ ಮದ್ಯ ವಯಸ್ಸು. ನಮಗೆಲ್ಲ ಶಾಖವನ್ನು ಉಷ್ಣವನ್ನು ಮತ್ತು ಶಕ್ತಿಯನ್ನು ಕೊಡುತ್ತಿರುವ ಸೂರ್ಯನ ಅರ್ಧ ಆಯಸ್ಸು ಮುಕ್ತಾಯಗೊಂಡಿದೆ ಎಂದು ಯುರೋಪಿಯನ್ ಬಾಹ್ಯಾಕಾಶ ಸಂಸ್ಥೆ ತಿಳಿಸಿದೆ.
ಸೂರ್ಯ ಈಗ ಮಧ್ಯ ವಯಸ್ಕ, ಆತನ ವಯಸ್ಸು ಈಗ ಸುಮಾರು 4.57 ಶತಕೋಟಿ ವರ್ಷಗಳಷ್ಟು ತಲುಪಿದ್ದು ಸೂರ್ಯನಿಗೆ ಈಗ ಮಧ್ಯ ವಯಸ್ಸು ಎಂದು ಹೇಳಿದೆ. ಇಎಸ್‌ಎ ಸಂಶೋಧನೆಯ ಪ್ರಕಾರ, ಆಗಾಗ್ಗೆ ಸೂರ್ಯನ ಸೌರ ಜ್ವಾಲೆಗಳು, ಪ್ಲಾಸ್ಮಾದಿಂದ ಹೊರಹೊಮ್ಮುವ ವಿಕಿರಣಗಳು (ಕರೋನಲ್ ಮಾಸ್ಕ್ ಎಜೆಕ್ಷನ್ – ಸಿಎಂಇಎಸ್) ಹಾಗೂ ಸೌರ ಬಿರುಗಾಳಿಯೊಂದಿಗೆ ಹೋಗುತ್ತಿರುವಂತೆ ಕಾಣುತ್ತಿದೆ ಎಂದು ಬಾಹ್ಯಾಕಾಶ ಸಂಸ್ಥೆಯ `ಗಯಾ ಬಾಹ್ಯಾಕಾಶ ನೌಕೆ’ ಬಿಡುಗಡೆ ಮಾಡಿದ ದತ್ತಾಂಶದ ಮೂಲಕ ವಿಶ್ಲೇಷಿಸಲಾಗಿದೆ. ಇದು ಬ್ರಹ್ಮಾಂಡದ ವಿವಿಧ ನಕ್ಷತ್ರಗಳ ಜೀವಿತಾವಧಿಯನ್ನೂ ಪತ್ತೆಹಚ್ಚಲು ಸಹಾಯ ಮಾಡುತ್ತದೆ ಎಂದು ವರದಿ ಹೇಳಿದೆ.
ಗಯಾ ನೌಕೆ ಬಿಡುಗಡೆ ಮಾಡಿದ 3ನೇ ಪ್ರಮುಖ ದತ್ತಾಂಶವೂ ಇದಾಗಿದ್ದು ನೂರಾರು ಮಿಲಿಯನ್ ನಕ್ಷತ್ರಗಳ ಆಂತರಿಕ ಗುಣಲಕ್ಷಣ ಮಾಹಿತಿಗಳ ಪೈಕಿ ಇದು ಒಂದಾಗಿದೆ. ಈ ದತ್ತಾಂಶವು ನಕ್ಷತ್ರಗಳ ತಾಪಮಾನ, ಗಾತ್ರ ಹಾಗೂ ದ್ರವ್ಯ ರಾಶಿಯ ಮಾಹಿತಿಯನ್ನೂ ಒಳಗೊಂಡಿದೆ ಎಂದು ವರದಿಯಾಗಿದೆ.
ನಕ್ಷತ್ರಗಳ ಸ್ಪಷ್ಟ ಹೊಳಪು ಹಾಗೂ ಅವುಗಳ ಬಣ್ಣವನ್ನು ನಿಖರವಾಗಿ ಗಯಾ ನೌಕೆ ಮಾಪನ ಮಾಡುತ್ತದೆ. ಸೂರ್ಯ ಈಗ ಸುಮಾರು 4.57 ಶತಕೋಟಿ ವರ್ಷಗಳ ವಯಸ್ಸಿನೊಂದಿಗೆ ಮಧ್ಯವಯಸ್ಸಿನಲ್ಲಿದ್ದು, ಈ ಅಧ್ಯಯನದಿಂದ ನಕ್ಷತ್ರಗಳನ್ನು ಸರಿಯಾಗಿ ಗುರುತಿಸುವುದು ಮಾತ್ರವಲ್ಲದೇ, ಭವಿಷ್ಯದಲ್ಲಿ ಸೂರ್ಯ ಹೇಗೆ ವಿಕಸನಗೊಳ್ಳುತ್ತದೆ ಎಂಬುದನ್ನು ಅಂದಾಜಿಸಬಹುದು ಎಂದು ವರದಿಯಾಗಿದೆ.
ಸೂರ್ಯನ ಮೇಲ್ಮೈಯಲ್ಲಿ ಬದಲಾವಣೆಗಳು ಕಂಡುಬಂದಂತೆ ಕೆಂಪು ದೈತ್ಯ ನಕ್ಷತ್ರವಾಗಿ ಹೊರಹೊಮ್ಮುತ್ತದೆ. ಈ ವೇಳೆ ಎಷ್ಟು ದ್ರವ್ಯ ರಾಶಿಯನ್ನು ಹೊಂದಿರುತ್ತದೆ ಅದರ ರಾಸಾಯನಿಕ ಸಂಯೋಜನೆಯ ಆಧಾರದ ಮೇಲೆ ತನ್ನ ಮೇಲ್ಮೈ ತಾಪಮಾನವನ್ನು ಕಡಿಮೆ ಮಾಡುತ್ತದೆ ಎಂದು ವಿಜ್ಞಾನಿಗಳು ಅಂದಾಜಿಸಿದ್ದಾರೆ ಎಂದು ವರದಿಯಾಗಿದೆ.
ಸೂರ್ಯನ ವಯಸ್ಸು ಮಧ್ಯ ವಯಸ್ಸು ದಾಟಿದರು ನಮಗೇನು ಸದ್ಯಕ್ಕೆ ಚಿಂತೆ ಇಲ್ಲ ಬಿಡಿ. ಆತನಿಗೆ ಇನ್ನೂ 4.57 ಶತಕೋಟಿ ವರ್ಷಗಳ ಆಯುಷ್ಯವಿದೆ. ಅಲ್ಲಿಯ ತನಕ ಮನುಷ್ಯ ಮತ್ತು ಇತರ ಪ್ರಾಣಿ ಸಂತತಿ ಉಳಿಯುತ್ತದ ಇಲ್ಲವಾ ಎಂಬ ಬಗ್ಗೆಯೇ ಈಗ ಸಂಶಯವಿದ್ದು, ಸದ್ಯ ಸೂರ್ಯನ ಮಧ್ಯವಯಸ್ಸಿನ ಬಗ್ಗೆ ಜನಸಾಮಾನ್ಯರಿಗೆ ಚಿಂತೆ ಬೇಡ.