ಹಾಡಿನ ಜೊತೆಗೆ ಬೆಳಕು ನೀಡುವ ವಿಶೇಷ ಎಲ್ಇಡಿ ಬಲ್ಬ್ | 300 ರೂಪಾಯಿಗಿಂತ ಕಡಿಮೆ ಬೆಲೆಯ ಈ ಬಲ್ಬ್ ನ ವಿಶೇಷತೆ ನೀವೇ ನೋಡಿ

ವಿದ್ಯುತ್ ಬಿಲ್ ಕಡಿಮೆ ಬರೋದಕ್ಕೆ ಉಪಾಯ ಹುಡುಕುತ್ತಲೇ ಇರುತ್ತಾರೆ ಜನ. ಆದ್ರೆ, ದೈನಂದಿನ ಬಳಕೆಗೆ ವಿದ್ಯುತ್ ಬೇಕೇ ಬೇಕು. ಹೆಚ್ಚು ಬಳಸಿದರೆ ಬಿಲ್ ಕೂಡ ಹೆಚ್ಚು ಬರುತ್ತದೆ. ವಿದ್ಯುತ್ ಬಿಲ್ ಕಡಿಮೆ ಮಾಡಲು , ಹೆಚ್ಚಿನ ಜನರು ಎಲ್ಇಡಿ ಬಲ್ಬ್ ಗಳನ್ನು ಬಳಸುತ್ತಾರೆ. ಅವು ಹೆಚ್ಚು ಬೆಳಕನ್ನು ನೀಡುವುದಲ್ಲದೆ, ಕಡಿಮೆ ವಿದ್ಯುತ್ ಅನ್ನು ಬಳಸುತ್ತವೆ.

 

ಅದರಂತೆ ಒಂದು ವಿಶೇಷ ಎಲ್ಇಡಿ ಬಲ್ಬ್ ಬಗ್ಗೆ ಮಾಹಿತಿ ಇಲ್ಲಿದೆ. ಅದುವೇ RSCT Bluetooth Speaker Music Bulb. ಈ ಬಲ್ಬ್ ನಿಂದ ಸಂಗೀತವನ್ನೂ ಕೇಳಬಹುದಾಗಿದೆ. RSCT ಬ್ಲೂಟೂತ್ ಸ್ಪೀಕರ್ ಮ್ಯೂಸಿಕ್ ಬಲ್ಬ್ ಅನ್ನು ಫ್ಲಿಪ್‌ಕಾರ್ಟ್‌ನಿಂದ 300 ರೂಪಾಯಿಗಿಂತ ಕಡಿಮೆ ಬೆಲೆಗೆ ಖರೀದಿಸಬಹುದು. ಈ ಬಲ್ಬ್ ಜೊತೆಗೆ ರಿಮೋಟ್ ಕೂಡ ಲಭ್ಯವಿದೆ.

RSCT Bluetooth Speaker Music Bulb ಬಹುವರ್ಣದಲ್ಲಿ ಬರುತ್ತದೆ. ಇದರಲ್ಲಿ ಬಣ್ಣವು ಸ್ವಯಂಚಾಲಿತವಾಗಿ ಬದಲಾಗುತ್ತದೆ. ಇದರೊಂದಿಗೆ ಬ್ಲೂಟೂತ್ ಸ್ಪೀಕರ್ ಕೂಡ ಲಭ್ಯವಾಗಲಿದೆ. ಅಂದರೆ, ಮೊಬೈಲ್ ಗೆ ಕನೆಕ್ಟ್ ಮಾಡಿಕೊಂಡು ಸಂಗೀತವನ್ನು ಆನಂದಿಸಬಹುದು. ಬಲ್ಬ್ ಸ್ಪೀಕರ್ ಗಳನ್ನೂ ಹೊಂದಿದೆ. ಅದರ ಸಹಾಯದಿಂದ ಸಂಗೀತವನ್ನು ಆನಂದಿಸಬಹುದು. ಅಲ್ಲದೆ, RSCT ಬ್ಲೂಟೂತ್ ಸ್ಪೀಕರ್ ಸಂಗೀತ ಬಲ್ಬ್ ಅನ್ನು ಆಫ್‌ಲೈನ್‌ನಲ್ಲಿಯೂ ಖರೀದಿಸಬಹುದು.

Leave A Reply

Your email address will not be published.