ಮುಖೇಶ್ ಅಂಬಾನಿ ಕುಟುಂಬಕ್ಕೆ ಜೀವ ಬೆದರಿಕೆ ಕರೆ ಮಾಡಿದ ವ್ಯಕ್ತಿ ಪೊಲೀಸ್ ವಶ!

ನವದೆಹಲಿ: ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಅಧ್ಯಕ್ಷ ಮುಖೇಶ್ ಅಂಬಾನಿ ಮತ್ತು ಅವರ ಕುಟುಂಬಕ್ಕೆ ಬೆದರಿಕೆ ಹಾಕಿದ ವ್ಯಕ್ತಿಯನ್ನು ಮುಂಬೈ ಪೊಲೀಸರು ನಿನ್ನೆ ವಶಕ್ಕೆ ತೆಗೆದುಕೊಂಡಿದ್ದಾರೆ.

 

56 ವರ್ಷದ ವಿಷ್ಣು ಭೌಮಿಕ್ ಎಂದು ಪೊಲೀಸರು ಗುರುತಿಸಿರುವ ವ್ಯಕ್ತಿ. ಕರೆಯಲ್ಲಿ ಅವರು ಅನೇಕ ಹೆಸರುಗಳನ್ನು ಬಳಸಿದ್ದರು, ಅವುಗಳಲ್ಲಿ ಒಂದು ಅಫ್ಜಲ್ ಎಂದು ಮೂಲಗಳು ಹೇಳುತ್ತವೆ.

ಜೀವ ಬೆದರಿಕೆ ನೀಡುವ ಒಟ್ಟು ಎಂಟು ಕರೆಗಳು ಮಾಡಿದ್ದು, ಮೂರು ಗಂಟೆಗಳಲ್ಲಿ ಮುಗಿಸುತ್ತೇನೆ ಎಂದು ನಿನ್ನೆ ಬೆಳಗ್ಗೆ ಮುಂಬೈನ ಗಿರ್ಗಾಂವ್‌ನಲ್ಲಿರುವ ರಿಲಯನ್ಸ್ ಫೌಂಡೇಶನ್ ಆಸ್ಪತ್ರೆಯಲ್ಲಿ ಸ್ಥಿರ ದೂರವಾಣಿ ಸಂಖ್ಯೆಗೆ ಹಲವು ಬಾರಿ ಬೆದರಿಕೆ ಕರೆಗಳನ್ನು ಮಾಡಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈತ ಕರೆ ಮಾಡಿದ್ದ ಫೋನ್ ನಂಬರ್ ಅನ್ನು ಗುರುತಿಸಿದ ಪೊಲೀಸರು ಆರೋಪಿಯನ್ನು ಪತ್ತೆ ಹಚ್ಚಿದ್ದಾರೆ.

ಪ್ರಾಥಮಿಕ ತನಿಖೆಯ ಪ್ರಕಾರ ಕರೆ ಮಾಡಿದವರು ಮಾನಸಿಕವಾಗಿ ಅಸ್ಥಿರರಾಗಿದ್ದಾರೆ ಎಂದು ಅಧಿಕಾರಿಯೊಬ್ಬರನ್ನು ವರದಿ ಮಾಡಿದ್ದಾರೆ. ಪ್ರಕರಣ ದಾಖಲಾಗಿದ್ದು, ಸದ್ಯ ಪೊಲೀಸರು ವ್ಯಕ್ತಿಯನ್ನು ವಿಚಾರಣೆ ನಡೆಸುತ್ತಿದ್ದಾರೆ.

Leave A Reply

Your email address will not be published.