Bigg Boss Kannada OTT: ಬಿಗ್ ಬಾಸ್ ಮನೆಯಲ್ಲಿ ಊಟದ ವಿಷಯಕ್ಕೆ ಬಿಗ್ ಫೈಟ್ | ಅರ್ಜುನ್-ರೂಪೇಶ್ ಶೆಟ್ಟಿ ಜಗಳಕ್ಕೆ ಭಯಗೊಂಡ ಮನೆಮಂದಿ

ಬಿಗ್ ಬಾಸ್ ಮನೆಯಲ್ಲಿ ಸ್ಪರ್ಧಿಗಳು ತಮ್ಮ ಜೀವನ ಅನೇಕ ವಿಚಾರವನ್ನು ಎಳೆ ಎಳೆಯಾಗಿ ಬಿಚ್ಚಿಡುತ್ತಿದ್ದಾರೆ . ಇಲ್ಲಿ ಒಬ್ಬೊಬ್ಬರ ನಿಜ ಮುಖ ಕಾಣಿಸಿಕೊಳ್ಳುತ್ತಿದೆ. ಬಿಗ್ ಬಾಸ್ ಮನೆಯಲ್ಲಿ ಜಗಳ ಆಗುವುದು ಸಹಜ, ಟಾಸ್ಕ್ ವಿಚಾರಕ್ಕೆ ಗಲಾಟೆ ನಡೆದ್ರೆ ಮತ್ತೊಮ್ಮೆ ವೈಯಕ್ತಿಕ ವಿಚಾರಕ್ಕೂ ಜಗಳಗಳು ನಡೀತಾನೆ ಇರುತ್ತೆ.

 

ದೊಡ್ಮನೆಯಲ್ಲಿ ದೊಡ್ಡ ವಾರ್ ನಡೆದಿದೆ. ಕಾರಣವಾಗಿದ್ದು ಮಾತ್ರ, ಊಟದ ವಿಚಾರ. ಹೌದು ಊಟ ವೇಸ್ಟ್ ಮಾಡಿದ್ದಕ್ಕೆ, ಅರ್ಜುನ್ ಹಾಗೂ ರೂಪೇಶ್ ಶೆಟ್ಟಿ ನಡುವೆ ಬಿಗ್ ಫೈಟ್ ನಡೆದಿದೆ.

ಕಸದ ಬುಟ್ಟಿಯಲ್ಲಿ ಬಿಸಾಡಿರೋ ಚಪಾತಿ ನೋಡಿ ಅರ್ಜುನ್ ಸಿಟ್ಟಾಗಿದ್ದಾರೆ. ಆಗ ಊಟ ಬಿಸಾಡಿದ್ದು ಯಾರು ಎಂದು ಪ್ರಶ್ನೆ ಮಾಡಿದ್ದಾರೆ. ನಾನೇ ಎಂದ ರೂಪೇಶ್, ನಂಗೆ ತಿನ್ನಲು ಆಗಿಲ್ಲ ಹೀಗಾಗಿ ಬಿಸಾಡಿದೆ ಎಂದಿದ್ದಾರೆ. ಅವರ ಮಾತಿಗೆ ಕೋಪಗೊಂಡ ಅರ್ಜುನ್ ರಮೇಶ್, ಊಟದ ಬೆಲೆ ಗೊತ್ತಾ? ಎಂದು ಪ್ರಶ್ನೆ ಮಾಡಿದ್ದಾರೆ. ಎಷ್ಟೋ ಜನರು ಹಸಿವಿನಿಂದ ಸಾಯುತ್ತಿರುತ್ತಾರೆ. ನೀನು ಊಟ ಬಿಸಾಡಿದ್ಯಾ ಎಂದು ಅರ್ಜುನ್ ಪ್ರಶ್ನೆ ಮಾಡಿದ್ದಾರೆ. ಇದಕ್ಕೆ ನಿಮ್ ಮಾತು ವಾಪಸ್ ತೆಗೆದುಕೊಳ್ಳಿ ಎಂದು ರೂಪೇಶ್ ಸಿಟ್ಟಲ್ಲಿ ಹೇಳಿದ್ದಾರೆ.

ಪ್ರತಿಸಲ ನಾನು ಬುದ್ಧಿವಾದ ಹೇಳಿಸಿಕೊಳ್ಳುವಷ್ಟು ಸಣ್ಣವನಲ್ಲ ಎಂದು ರೂಪೇಶ್ ಕೂಗಾಡಿದ್ರು. ನನ್ನ ಕ್ಯಾರೆಕ್ಟರ್ ಹಾಳು ಮಾಡ್ತಿದ್ದಾನೆ ಎಂದು ರೂಪೇಶ್ ಕೂಗಾಡಿದ್ದಾರೆ. ಇದಕ್ಕೆ ಯಾರು ಯಾರ ಕ್ಯಾರೆಕ್ಟರ್ ನನ್ನು ಹಾಳು ಮಾಡಲು ಸಾಧ್ಯವಿಲ್ಲ ಎಂದು ಅರ್ಜುನ್ ರಮೇಶ್ ಹೇಳಿದ್ರು.

ಬಿಗ್ ಬಾಸ್ ಮನೆಯಲ್ಲಿ ರಾತ್ರಿ ಊಟದ ಬಳಿಕ ಎಲ್ಲರೂ ಒಳ್ಳೆಯ ನಿದ್ದೆಯ ಮೂಡ್‌ನಲ್ಲಿದ್ದರು, ಆದ್ರೆ ರೂಪೇಶ್ ಹಾಗೂ ಅರ್ಜುನ್ ರಮೇಶ್ ನಡುವಿನ ಗಲಾಟೆ ಸ್ಪರ್ಧಿಗಳ ನಿದ್ದೆಗೆಡಿಸಿದ್ದಂತೂ ನಿಜ.

Leave A Reply

Your email address will not be published.