ಪತಿ ಜತೆ ಮಲಗಲು ಟೈಂ ಸಿಗ್ತಿಲ್ಲ, ಎಂದು ಪತಿಗೆ ಸುಂದರ ಹುಡುಗಿ ಹುಡುಕ್ತಿರೋ ಪತ್ನಿ, ಜಾಹೀರಾತು ನೋಡಿ ಹೊಟ್ಟೆ ಉರ್ಕೊಂಡ ಪುರುಷರು

ಬ್ಯಾಂಕಾಕ್: ಪತಿ ಇನ್ನೊಬ್ಬ ಹೆಣ್ಣಿನತ್ತ ಅದರಲ್ಲಿಯೂ ಸುಂದರವಾಗಿರೋ ಹೆಣ್ಣಿನತ್ತ ಸುಮ್ಮನೆ ಒಂದು ದೃಷ್ಟಿ ಹಾಯಿಸಿದರೆ ಸಾಕು, ಪತ್ನಿಯರಿಗೆ ಹೊಟ್ಟೆಯಲ್ಲಿ ಸಡನ್ ತಳಮಳ ಶುರುವಾಗುತ್ತದೆ. ಜತೆಗೆ ಗಂಡನ ಬಗ್ಗೆ  ಅನುಮಾನವೂ ಪ್ರಾರಂಭವಾಗುತ್ತದೆ. ಕೇವಲ, ನೋಡಿದ, ಕ್ಯಾಷ್ಯುವಲ್ ಆಗಿ ಮಾತಾಡಿದ ಕಾರಣಕ್ಕೆ ದಂಪತಿ ನಡುವೆ ಜಗಳ, ಮನಸ್ತಾಪಗಳೂ ಆಗುತ್ತವೆ. ಆದರೆ ಇಲ್ಲೊಬ್ಬ  ಆದರ್ಶ!! ಪತ್ನಿ ಮಾತ್ರ ಇದಕ್ಕೆ ಸಂಪೂರ್ಣ ತದ್ವಿರುದ್ದಳಾಗಿದ್ದಾಳೆ. ಆಕೆ ಕಣ್ಣಿಗೆ ಎಣ್ಣೆ ಬಿಟ್ಟುಕೊಂಡು ತನ್ನ ಪತಿಗಾಗಿ ಸುಂದರ ಯುವತಿಯನ್ನು ಹುಡುಕುತ್ತಿದ್ದಾಳೆ !

 

ಸುದ್ದಿ ಕೇಳಲು ವಿಚಿತ್ರ ಎನಿಸಿದರೂ ಇದು ನಿಜ ಸ್ವಾಮಿ. 44 ವರ್ಷದ ಪಮಾ ಚಮ್ರಾನ್ ಎಂಬಾಕೆ ಪತಿಯನ್ನ ಪ್ರೀತಿಯಿಂದ ನೋಡಿ ಕೊಳ್ಳಲು ಜನ ಬೇಕೆಂದು ಜಾಹೀರಾತು ನೀಡಿದ್ದಾಳೆ. ಆತನಿಗೆ ಸುಂದರ ಯುವತಿ ಬೇಕು ಎಂದು ಆಕೆ ಜಾಹೀರಾತಿನಲ್ಲಿ ಕೊರಿಕೊಂಡಿದ್ದಾಳೆ.

ಈಕೆ ಕೆಲಸಕ್ಕೆ ಹೋಗುತ್ತಿದ್ದಾಳೆ. ಅದಕ್ಕಾಗಿ ತನ್ನ ಪತಿಗೆ ತನ್ನಿಂದ ಹೆಚ್ಚು ಸಮಯ ಕೊಡಲು ಸಾಧ್ಯವಾಗುತ್ತಿಲ್ಲ ಎನ್ನುವುದು ಪತ್ತೀಮಾ ಕೊರಗು. ಆತನ ಜತೆ ಮನೆಯಲ್ಲಿ ಸಮಯ ಕಳೆಯುವುದು ಸಾಧ್ಯವಾಗುತ್ತಿಲ್ಲ. ಅಷ್ಟೇ ಅಲ್ಲ, ಎಷ್ಟೋ ವೇಳೆ ಮಲಗಲು ಕೂಡ ಆಗುತ್ತಿಲ್ಲ. ತನಗೆ ಅಷ್ಟು ಕೆಲಸದ ಒತ್ತಡ ಇದೆ ಎಂದಿರುವ ಫಾತೀಮಾ, ತನ್ನಿಂದಾಗಿ ತನ್ನ ಪ್ರೀತಿಯ ಗಂಡ ಒಂಟಿತನ ಅನುಭವಿಸುತ್ತಿರುವುದನ್ನು ನಂಗೆ ನೋಡಲು ಆಗ್ತಿಲ್ಲ. ಒಮ್ಮೊಮ್ಮೆ ಬೆಡ್ಡಿನಲ್ಲಿ ನಾನಿಲ್ಲದೆ ಆತ ಮಲಗಿದಲ್ಲೇ ಸುತ್ತುತ್ತಾನೆ. ಅದನ್ನು ನೋಡಲು ನನ್ನಿಂದ ಆಗ್ತಿಲ್ಲ. ಆದ್ದರಿಂದ ನಾನಿಲ್ಲದ ಶಿಫ್ಟ್ ನಲ್ಲಿ ‘ ಕೆಲಸ ‘ ಮಾಡಲು ಸುಂದರ ಹುಡುಗೀರ ಹುಡುಕಾಟಕ್ಕೆ ಇಳಿದಿದ್ದಾರೆ ಆಕೆ.

ಆದ್ದರಿಂದ ಒಂಟಿಯಾಗಿರುವ, ನೋಡಲು ಸುಂದರವಾಗಿರುವ 30-35 ವರ್ಷ ವಯಸ್ಸಿನ ಒಳಗಿರುವ ಮೂವರು ಸ್ತ್ರೀಯರು ಬೇಕಾಗಿದ್ದಾರೆ. ಅವರು ವಿದ್ಯಾವಂತರಾಗಿರಬೇಕು. ಈ ಮೂವರಲ್ಲಿ ಇಬ್ಬರು ನನ್ನ ಕಚೇರಿಯಲ್ಲಿ ದಾಖಲೆಗಳ ಸಿದ್ಧತೆಗಾಗಿ ಮತ್ತು ಮಗುವನ್ನು ನೋಡಿಕೊಳ್ಳಲು. ಆದರೆ  ಇನ್ನೊಬ್ಬಳು ಎಕ್ಸ್ಕ್ಲೂಸಿವ್ ಆಗಿ ನನ್ನ ಪತಿಯನ್ನು ‘ ನೋಡಿ ‘ ಕೊಳ್ಳಲು ಎಂದು ಹೇಳಿದ್ದಾಳೆ. ವಿದ್ಯಾವಂತರು ತನ್ನ ಕಚೇರಿಯ ದಾಖಲೆ ನೋಡಿಕೊಳ್ಳಲು ನೇಮಕ ಮಾಡೋದು. ಅವರಲ್ಲಿ ಸುಂದರಿಯಾಗಿರುವವಳು ಖುದ್ದು ನನ್ನ ಗಂಡನ ಯೋಗಕ್ಷೇಮ, ಸುಖಾಸುಖ ನೋಡಿಕೊಳ್ಳಲು ಎಂದು ಈಕೆ ಹೇಳಿದ್ದಾಳೆ.

ಹಾಗೆ ಜಾಬ್ ಗೆ ಸೇರುವ ಇವರಿಗೆ £342 (ಸುಮಾರು 32,805 ರೂಪಾಯಿ) ವೇತನದ ಜತೆಗೆ ಉಚಿತವಾದ ಊಟ, ವಸತಿ ಇರುವುದಾಗಿ ಹೇಳಿದ್ದಾಳೆ. ಜತೆಗೆ ನಾನು ಪತ್ನಿ ಮನೆಯಲ್ಲಿ ಇರುವಾಗ ಬೇರೊಬ್ಬ ಹೆಣ್ಣು ಬಂದರೆ ಜಗಳ ಮಾಡುತ್ತೇನೆ ಎಂದು ತಿಳಿದುಕೊಳ್ಳಬೇಡಿ. ಯಾವುದೇ ಕಾರಣಕ್ಕೂ ನಮ್ಮ ನಡುವೆ ಜಗಳವಾಗುವುದಿಲ್ಲ ಎನ್ನುವ ಭರವಸೆ ನೀಡುತ್ತೇನೆ. ನನ್ನ ಪತಿ ಏಕಾಂಗಿಯಾಗಿ ಕಷ್ಟಪಟ್ಟು ಕೆಲಸ ಮಾಡುತ್ತಿದ್ದಾರೆ. ನಾನು ಅವನನ್ನು ಸಂತೋಷವಾಗಿಡಲು ಬಯಸುವ ಕಾರಣ ಹೀಗೆ ಮಾಡುತ್ತಿದ್ದೇನೆ ಎಂದಿರುವ ಫಾತೀಮಾ, ಕೆಲಸಕ್ಕೆ ಬರುವವರು ಮಕ್ಕಳನ್ನು ಹೊಂದಿರಬಾರದು, ಉತ್ತಮ ಸಂವಹನ ಕೌಶಲ ಇರಬೇಕು. ನನ್ನ ಪತಿಯನ್ನು ಮೆಚ್ಚಿಸಲು, ಅವನನ್ನು ಸಂತೋಷಪಡಿಸಲು ಹಾಗೂ ಒಡನಾಟದಲ್ಲಿ ಸಮರ್ಥರಾಗಿರಬೇಕೆಂದು ಆಕೆ ಕಂಡೀಷನ್ ಇಟ್ಟಿದ್ದಾಳೆ. ಅಲ್ಲದೆ, ಅವರಿಗೆ ಎಚ್‌ಐವಿ ಪಾಸೀಟಿವ್ ಇಲ್ಲ ಎಂಬ ದಾಖಲೆ ತರಬೇಕು ಎಂಬ ಷರತ್ತು ವಿಧಿಸಿದ್ದಾರೆ. ಆ ಮೂಲಕ ಬರುತ್ತಿರುವ ಸುಂದರ ಹುಡುಗಿ ಗಂಡನ ಜತೆ ಸೆಕ್ಸ್ ಮಾಡಲು ಅಫೀಷಿಯಲ್ ಪರ್ಮಿಷನ್ ನೀಡಿದ್ದಾಳೆ ಮಹಾ ಸತಿ.

ಈಗ ಈ ಹುದ್ದೆಗಳಿಗಾಗಿ ಹುಡುಗಿಯರು ಎದ್ದು ಬಿದ್ದು ಅರ್ಜಿ ಸಲ್ಲಿಸುತ್ತಿದ್ದಾರೆ ಎಂದು ವರದಿಯಾಗಿದೆ. ಈ ಸುದ್ದಿ ಮಾಧ್ಯಮಗಳಲ್ಲಿ ಸುದ್ದಿಯಾಗುತ್ತಲೇ ಹಲವು ರಸಿಕ ಗಂಡಂದಿರು ತಮಗಿಲ್ಲದ ಈ ಭಾಗ್ಯವ ನೆನೆದು, ಇಂಥ ಪತ್ನಿ ತಮಗಾದ್ರೂ ಸಿಗಬಾರದಿತ್ತೆ ಎಂದು ಹೊಟ್ಟೆ ಉರಿ ಬರಿಸಿ ಕೊಳ್ಳುತ್ತಿರುವುದಾಗಿ ಸ್ಥಳೀಯ ಮಾಧ್ಯಮ ಪ್ರಕಟಿಸಿದೆ. ಅಂದಹಾಗೆ, ಇದು ನಮ್ಮೂರಿನಲ್ಲಿ ನಡೆದಿಲ್ಲ, ಇದು ನಡೆದದ್ದು ಜಗತ್ತಿನ ಸೆಕ್ಸ್ ಕ್ಯಾಪಿಟಲ್ ಬ್ಯಾಂಕಾಕ್ ನಲ್ಲಿ !

Leave A Reply

Your email address will not be published.