ಮಂಗಳೂರು : ಅಬ್ಬಕ್ಕನ ನಾಡಿನಲ್ಲಿ 110 ಅಡಿ ಎತ್ತರದ ರಾಷ್ಟ್ರಧ್ವಜವನ್ನು ಧ್ವಜಾರೋಹಣಗೈದ ಯು.ಟಿ ಖಾದರ್ !!!

ಉಳ್ಳಾಲ: ದಕ್ಷಿಣ ಕನ್ನಡ ಜಿಲ್ಲೆಯಲ್ಲಿರುವ ಮಂಗಳೂರು ಹೊರವಲಯದ ಅತ್ಯಂತ ಎತ್ತರ ಧ್ವಜಸ್ತಂಭದಲ್ಲಿ ಇಂದು ಬೃಹತ್ ರಾಷ್ಟ್ರ ಧ್ವಜಾರೋಹಣ ನೆರವೇರಿತು.

ತೊಕ್ಕೊಟ್ಟುವಿನ ಓವರ್ ಬ್ರಿಡ್ಜ್ ಬಳಿ ನಿರ್ಮಾಣಗೊಂಡ 110 ಅಡಿ ಎತ್ತರದ ಧ್ವಜ ಸ್ಥಂಭದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಶಾಸಕ ಯುಟಿ ಖಾದರ್ “ಈ ಧ್ವಜ ಶಾಶ್ವತವಾಗಿ ಇರಲಿದೆ. ಈ ಧ್ವಜ ರಾಷ್ಟ್ರದ ಸಂಕೇತವಾಗಿ ಹಾರಾಡಲಿದೆ. ಮುಂದಿನ ಪೀಳಿಗೆಗೆ ಮಾರ್ಗ ದರ್ಶನದ ಸಂಕೇತ ಆಗಲಿದೆ. ನಾವು ಅಭಿವೃದ್ಧಿ ಕಡೆ ಒತ್ತು ನೀಡಬೇಕು. ನಮ್ಮ ಮನಸ್ಸಿನಿಂದ ದ್ವೇಷವನ್ನು ಕಿತ್ತು ಎಸೆಯಬೇಕು. ಜಾತಿ ಧರ್ಮ ಬಿಟ್ಟು ಒಗ್ಗಟ್ಟು ಪ್ರದರ್ಶನ ಮಾಡಬೇಕು. ಶೈಕ್ಷಣಿಕವಾಗಿ ಕ್ಷೇತ್ರ ಬೆಳೆದಿದೆ. ಶಾಶ್ವತ ಕುಡಿಯುವ ನೀರು ವ್ಯವಸ್ಥೆ ಇಲ್ಲಿ ಆಗಬೇಕಿದೆ. ಅಭಿವೃದ್ಧಿಗೆ ನಗರ, ಗ್ರಾಮ ಪಂಚಾಯತ್ ಒತ್ತು ನೀಡಿ ಕಾರ್ಯ ನಿರ್ವಹಣೆ ಮಾಡಬೇಕು ಎಂದು ಕರೆ ನೀಡಿದರು.

Leave A Reply

Your email address will not be published.