ರಾಷ್ಟ್ರೀಯ ಮುಸ್ಲಿಮ್ ಕಾನೂನು ಬಹುತೇಕ ಕುರಾನ್ ಆಧಾರಿತವಲ್ಲ : ಕೇರಳ ರಾಜ್ಯಪಾಲ ಆರೀಫ್ ಮೊಹಮ್ಮದ್
ಕೇರಳ ರಾಜ್ಯಪಾಲ ಆರೀಫ್ ಮೊಹಮ್ಮದ್ ಖಾನ್ ಅವರು ಇಂಗ್ಲೆಂಡ್ ನ ಖ್ಯಾತ ಲೇಖಕ, ಕಾದಂಬರಿಕಾರ ಆಗಿರುವ ಸಲ್ಮಾನ್ ರಶ್ದಿ ಅವರ ಮೇಲಿನ ದಾಳಿಯ ಬಗ್ಗೆ ಪ್ರತಿಕ್ರಿಯೆಯೊಂದನ್ನು ನೀಡಿದ್ದಾರೆ. ಅವರ ಹೇಳಿಕೆಯ ಪ್ರಕಾರ, “ಈ ಕೃತ್ಯಗಳಿಗೆ ಇಸ್ಲಾಮಿಕ್ ಹಣೆಪಟ್ಟಿ ಕಟ್ಟುವುದು ಸೂಕ್ತವಲ್ಲ. ಏಕೆಂದರೆ ಮುಸ್ಲಿಂ ಬಹುತೇಕ ಕಾನೂನುಗಳು ಕುರಾನ್ ಆಧಾರಿತವಾಗಿಲ್ಲ ವಿರುದ್ಧವಾಗಿಯೇ ಇವೆ” ಎಂದು ಹೇಳಿದ್ದಾರೆ.
“ಸಲ್ಮಾನ್ ರಶ್ದಿ ಮೇಲಿನ ದಾಳಿಯಂತಹ ಕೃತ್ಯಕ್ಕೆ ಅನುಮೋದನೆ ನೀಡುವ ಕಾನೂನನ್ನು ಮುಸ್ಲಿಂ ಕಾನೂನು ಎಂದು ಹೇಳಲಾಗಿದೆ. ಆದರೆ ಯಾರು ಮುಸ್ಲಿಂ ಕಾನೂನು ಎಂದು ಹೇಳುತ್ತಿದ್ದಾರೋ ಅದೆಲ್ಲಾ ಬಹುತೇಕ ಕುರಾನ್ ಆಧರಿತವಾಗಿಲ್ಲ. ಅದೆಲ್ಲ ಅಂದಿನ ಸರ್ಕಾರಗಳಲ್ಲಿದ್ದ ವ್ಯಕ್ತಿಗಳು ನಿರ್ಮಿಸಿರುವಂತಹ ನಿಬಂಧನೆಗಳು “ಎಂದು ರಾಜ್ಯಪಾಲರು ಸ್ಪಷ್ಟನೆ ನೀಡಿದ್ದಾರೆ.
“ಇಸ್ಲಾಂ ಹೆಸರಿನಲ್ಲಿ ಏನೇ ನಡೆದರೂ ಅದಕ್ಕೆ ಪುಸ್ತಕದ ಅನುಮೋದನೆ ಇರಬೇಕು. ಆದ್ರೆ ಈಗ ಮುಸ್ಲಿಂ ಸಾಮ್ರಾಜ್ಯದ ಅವಧಿಯಲ್ಲಿ ಬಂದಂತಹ ಕಾನೂನಿಗೆ ಅನುಗುಣವಾಗಿ ನಡೆಯುತ್ತಿದೆ. ಇವೆಲ್ಲಾ ದೇವ ವಿಶ್ವಾಸಿಗಳಿಗೆ ವ್ಯರ್ಥ ಹಾಗೂ ನೋಯಿಸುವ ಅಂಶಗಳಿಂದ ದೂರ ಇರುವಂತೆ ಹೇಳುವ ಬೋಧನೆಗಳಿಗೆ ವಿರುದ್ಧವಾಗಿಯೇ ಇದೆ. ಇಂತಹ ಕೃತ್ಯಗಳನ್ನು ಇಸ್ಲಾಮಿಕ್ ಎಂದು ಹೇಳುವುದು ಸೂಕ್ತವಲ್ಲ ಎಂಬುದು ನನ್ನ ಭಾವನೆ” ಎಂದಿದ್ದಾರೆ.