BIGG BOSS Kannada OTT : ಸುದೀಪ್ ಬಿಗ್ ಬಾಸ್ ಒಟಿಟಿ ಹೋಸ್ಟ್ ಮಾಡಲು ತಗೊಂಡ ಸಂಭಾವನೆ ಎಷ್ಟು?

ವೂಟ್ ನಲ್ಲಿ ಪ್ರಸಾರವಾಗುವ ಬಿಗ್ ಬಾಸ್ ಕನ್ನಡ ಒಟಿಟಿ ಎಲ್ಲರ ಮನಸೂರೆಗೊಳ್ಳುತ್ತದೆ. ಒಟಿಟಿ ಪ್ರಾಸಾರ ಕಾರ್ಯಕ್ರಮದ ನೇತೃತ್ವವು ಕಿಚ್ಚ ಸುದೀಪ್ ಸಾರಥ್ಯದಲ್ಲಿ ‌ನಡೆಯುತ್ತಿದೆ. ಸದ್ಯಕ್ಕೆ ಕಿಚ್ಚನ ಪಂಚಾಯತಿ ನಡೆದ ದೊಡ್ಮನೆಯಿಂದ ಕಿರಣ್ ಯೋಗೇಶ್ವರ್ ಮನೆಯಿಂದ ಹೊರಬಂದಿದ್ದಾರೆ.

 

ಬಿಗ್ ಬಾಸ್ ಒಟಿಟಿ ಶೋ ಪ್ರಾರಂಭವಾಗಿ ಒಂದು ವಾರ ಕಳೆದಿದೆ. 16 ಸ್ಪರ್ಧಿಗಳು ಬಿಗ್ ಬಾಸ್ ಒಟಿಟಿ ಮನೆ ಸೇರಿಸಿದ್ದರು. ಈಗಾಗಲೇ ಮನೆಯಿಂದ ಮೊದಲ ಸ್ಪರ್ಧಿ ಔಟ್ ಆಗಿದ್ದಾರೆ. ಕಿರಣ್ ಯೋಗೇಶ್ವ‌ರ್ ಮನೆಯಿಂದ ಹೊರಬಂದಿದ್ದಾರೆ.

ಈಗ ಇಲ್ಲಿ ನಾವು ಹೇಳಲು ಹೊರಟಿರೋ ವಿಷಯವೇನೆಂದರೆ ಬಿಗ್ ಬಾಸ್ ಶೋ ನಡೆಸಿಕೊಡುವ ಕಿಚ್ಚ ಸುದೀಪ್ ಅವರಿಗೆ ಸಂಭಾವನೆ ಎಷ್ಟು ಎನ್ನುವ ವಿಷಯದ ಬಗ್ಗೆ. ಅಷ್ಟಕ್ಕೂ ಮೂಲಗಳ ಪ್ರಕಾರ ಕಿಚ್ಚ ಸುದೀಪ್ ಕೋಟಿ ಕೋಟಿ ರೂಪಾಯಿ ಸಂಭಾವನೆ ಪಡೆದಿದ್ದಾರಂತೆ ಎಂಬ ಸುದ್ದಿ. ಮೂಲಗಳ ಪ್ರಕಾರ ಸುದೀಪ್ ಬಿಗ್ ಬಾಸ್ ಒಟಿಟಿ ಹೋಸ್ಟ್ ಮಾಡಲು ಬರೋಬ್ಬರಿ 5 ಕೋಟಿ ರೂಪಾಯಿ ಪಡೆದಿದ್ದಾರೆ ಎನ್ನಲಾಗಿದೆ. ಬಿಗ್ ಬಾಸ್ ಬ್ರಾಂಡ್ ಆಗಿರುವ ಸುದೀಪ್ ಅದ್ಭುತವಾಗಿ ಶೋ ಹೋಸ್ಟ್ ಮಾಡುತ್ತಾರೆ.

ಕಿಚ್ಚನ ಶೈಲಿ ಎಲ್ಲರಿಗೂ ತುಂಬಾ ಇಷ್ಟವಾಗಿದೆ. ಹಾಗಾಗಿ ಕಿಚ್ಚ ಬಿಗ್ ಬಾಸ್ ಕನ್ನಡ ಶೋನ ಬ್ರಾಂಡ್ ಆಗಿದ್ದಾರೆ ಎಂದರೆ ತಪ್ಪೇನಿಲ್ಲ.

Leave A Reply

Your email address will not be published.