ಬಾರ್ಸಿಲೋನ ಬೀಚುಗಳ ಸನ್ನಿಧಿಯಲ್ಲಿ ನಯನತಾರಾ- ವಿಘ್ನೇಶ್ ಶಿವನ್ ಜೋಡಿಯ ದಾಂಪತ್ಯದಾಟ ಬಲು ಜೋರು!

ಕಾಲಿವುಡ್ ಲೇಡಿ ಸೂಪರ್ ಸ್ಟಾರ್ ಎಂದೇ ಖ್ಯಾತಿಯಾದ ನಯನತಾರಾ ಮತ್ತು ವಿಘ್ನೇಶ್ ಶಿವನ್ ದಂಪತಿ ಸ್ಪೇನ್‌ನ ಬಾರ್ಸಿಲೋನಗೆ ಹಾರಿದ್ದಾರೆ. ಬಾರ್ಸಿಲೋನದ ಬೀದಿ ಬೀದಿಗಳಲ್ಲಿ ನಯನತಾರಾ ದಂಪತಿ ಕಲರವ ಸೃಷ್ಟಿಸುತ್ತಾ ಖುಷಿಯಿಂದ ಕಾಲ ಕಳೆಯುತ್ತಿದ್ದಾರೆ. ಈ ಫೋಟೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಸಖತ್ ಹಲ್ ಚಲ್ ಆಗುತ್ತಿದೆ.

 

ನಯನತಾರಾ ದಾಂಪತ್ಯ ಜೀವನಕ್ಕೆ ಕಾಲಿಟ್ಟು 2 ತಿಂಗಳು ಕಳೆದಿದೆ. ಸಿನಿಮಾಗಳ ಜೊತೆಗೆ ವೈಯಕ್ತಿಕ ಜೀವನದತ್ತ ಗಮನ ನೀಡುತ್ತಿರುವ ನಯನತಾರಾ ಸದ್ಯ ಪತಿಯ ಜತೆ ಸ್ಪೇನ್‌ಗೆ ಹಾರಿದ್ದಾರೆ. ಬಾರ್ಸಿಲೋನದ ಸುಂದರ ಪ್ರದೇಶಗಳಿಗೆ ನಯನತಾರಾ ದಂಪತಿ ಸುತ್ತಾಡುತ್ತಿದ್ದಾರೆ. ಬಾರ್ಸಿಲೋನ ಭೂಲೋಕ ಸ್ವರ್ಗ. ಸುಂದರ ಬೀಚುಗಳು, ರಾತ್ರಿಯ ಅನಿಯಂತ್ರಿತ ಪಾರ್ಟಿಗಳು, ಥರಾವರಿ ವ್ಯಂಜನಗಳ ಹೊಸ ಲೋಕದಲ್ಲಿ ದಂಪತಿ ತೇಲುತ್ತಿದ್ದಾರೆ. ಬಾರ್ಸಿಲೋನ ಒಂದು ಕಾಲದಲ್ಲಿ ಒಲಿಂಪಿಕ್ ಅನ್ನು ಆಡಿಸಿದ ಮೇಘಾ ಸಿಟಿ. ಇವತ್ತು ನಯನ ಶಿವನ್ ಜೋಡಿ ಅಲ್ಲಿ ದಾಂಪತ್ಯದ ಕಳ್ಳಾಟ ಆಡುತ್ತಿದೆ.

ಈ ವರ್ಷ ಜೂನ್ 9ರಂದು ಗುರು ಹಿರಿಯರ ಸಮ್ಮುಖದಲ್ಲಿ ಅದ್ದೂರಿಯಾಗಿ ಮದುವೆಯಾಗಿದ್ದರು. ಹನಿಮೂನ್‌ಗಾಗಿ ಥೈಲ್ಯಾಂಡ್‌ಗೆ ಹಾರಿದ್ದರು. ಬಳಿಕ ಶಾರುಖ್ ಖಾನ್ ನಟನೆಯ `ಜವಾನ್’ ಸಿನಿಮಾದ ಚಿತ್ರೀಕರಣದಲ್ಲಿ ಭಾಗಿಯಾಗಿದ್ದರು. ಈಗ ಬಾರ್ಸಿಲೋನದಲ್ಲಿ ನಯನತಾರಾ ದಂಪತಿ ಪ್ರವಾಸವನ್ನ ಏಂಜಾಯ್ ಮಾಡ್ತಿದ್ದಾರೆ.

Leave A Reply

Your email address will not be published.