ಭಾರೀ ಭೂಕಂಪನ | ರಿಕ್ಟರ್ ಮಾಪನದಲ್ಲಿ 6.1ತೀವ್ರತೆ ದಾಖಲು !!!
ದೇಶದೆಲ್ಲೆಡೆ ಭೂಕಂಪನ ಆಗ್ತಾ ಇರುವುದು ಎಲ್ಲರಲ್ಲೂ ಆತಂಕ ಮೂಡಿದೆ. ದಕ್ಷಿಣ ಕನ್ನಡದ ಸುಳ್ಯ, ಕೊಡಗಿನಲ್ಲಿ ಭೂಕಂಪ ಉಂಟಾಗುತ್ತಿದ್ದು, ಜನ ಇದರಿಂದ ತತ್ತರಿಸಿ ಹೋಗಿದ್ದಾರೆ. ಈ ಭೂಕಂಪನದ ಸರದಿ ಈಗ ಮುಂದುವರಿಯುತ್ತಲೇ ಇದೆ. ಈಗ ಬಂದ ವರದಿಯ ಪ್ರಕಾರ, ಮಿಂಡನಾವೊ ಪ್ರದೇಶದ ಮೊರೊ ಕೊಲ್ಲಿಯಲ್ಲಿ ಶನಿವಾರ 6.1 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ಯುರೋಪಿಯನ್ ಮೆಡಿಟರೇನಿಯನ್ ಭೂಕಂಪಶಾಸ್ತ್ರ ಕೇಂದ್ರ (ಇಎಂಎಸ್ಸಿ) ತಿಳಿಸಿದೆ.
ಭೂಕಂಪವು 10 ಕಿ.ಮೀ ಆಳದಲ್ಲಿತ್ತು ಎಂದು ಇಎಂಎಸ್ಸಿ ತಿಳಿಸಿದೆ.ಫಿಲಿಪೈನ್ಸ್ ದ್ವೀಪ ಪ್ರದೇಶದಲ್ಲಿ ಭೂಕಂಪವಾಗಿದ್ದು, ರಿಕ್ಟರ್ ಮಾಪನದಲ್ಲಿ 6.1ತೀವ್ರತೆ ದಾಖಲಾಗಿದೆ.