BIGG BOSS Kannada OTT : ‘ಯಾವ ನನ್ಮಗ ಏನೇ ಅಂದರೂ ನಾನು ತಲೆಕೆಡಿಸ್ಕೊಳ್ಳಲ್ಲ’ – ಸೋನು ಗೌಡ

Share the Article

ರೀಲ್ಸ್ ಮೂಲಕ ಫೇಮಸ್ ಆದ ಸೋನು ಶ್ರೀನಿವಾಸ್ ಗೌಡ ಅವರ ಸೌಂಡ್ ಈಗ ಬಿಗ್ ಬಾಸ್ ಮನೆಯಲ್ಲಿ ಕೇಳ್ತಾ ಇದೆ. ಒಂದು ವಲಯದ ಸಾರ್ವಜನಿಕರಿಗೆ ಸೋನು ಗೌಡ ಬಿಬಿ ಮನೆಯಲ್ಲಿ ಇರುವುದು ಇಷ್ಟ ಇಲ್ಲ. ಅರ್ಹತೆ ಇಲ್ಲ ಎಂಬ ಮಾತನ್ನು ಹೇಳಿದ್ದಾರೆ. ಸೋನು ಬಗ್ಗೆ ಸೋಶಿಯಲ್ ಮೀಡಿಯಾದಲ್ಲೂ ಪರ ವಿರೋಧ ಚರ್ಚೆ ಆಗುತ್ತಿದೆ. ಈ ಹಿಂದೆ ಸೋನು ಶ್ರೀನಿವಾಸ್ ಗೌಡ ಅವರ ಖಾಸಗಿ ವಿಡಿಯೋ ಲೀಕ್ ಆಗಿತ್ತು. ಅದರಿಂದ ಅವರು ಸಿಕ್ಕಾಪಟ್ಟೆ ಟ್ರೋಲ್‌ಗೆ ಒಳಗಾಗಿದ್ದರು. ಈ ವಿಚಾರ ಬಿಗ್ ಬಾಸ್ ಮನೆಯಲ್ಲಿ ಮತ್ತೆ ಮತ್ತೆ ಚರ್ಚೆ ಆಗುತ್ತಿದೆ. ‘ಬಿಗ್ ಬಾಸ್ ಕನ್ನಡ ಒಟಿಟಿ’ ಶೋನಲ್ಲಿ ಎಲ್ಲ ಸ್ಪರ್ಧಿಗಳಿಗೆ ಒಂದು ಟಾಸ್ಕ್ ನೀಡಲಾಗಿತ್ತು. ಈ ವೇಳೆ ಸೋನು ಗೌಡ ಅವರು ಒಂದಷ್ಟು ವಿಚಾರಗಳ ಬಗ್ಗೆ ಓಪನ್ ಆಗಿ ಮಾತನಾಡಿದ್ದಾರೆ. ವಿಚಾರದಲ್ಲಿ ತಮ್ಮ ನಿಲುವು ಏನು ಎಂಬುದನ್ನು ಅವರು ನೇರವಾಗಿ ಹೇಳಿದ್ದಾರೆ.

ತಮ್ಮ ಜೀವನದಲ್ಲಿ ನಡೆದ ಕಹಿ ಘಟನೆಯ ಸೋನು ಶ್ರೀನಿವಾಸ್ ಗೌಡ ಅವರು ಈಗಾಗಲೇ ಮುಕ್ತವಾಗಿಯೇ ಮಾತನಾಡಿದ್ದಾರೆ. ಅದರಿಂದ ಅವರ ಭವಿಷ್ಯಕ್ಕೆ ತೊಂದರೆ ಆಗುವುದಿಲ್ಲವೇ ಎಂಬುದು ಸೋಮಣ್ಣ ಮಾಚಿಮಾಡ ಅವರ ಪ್ರಶ್ನೆ ಆಗಿತ್ತು. ಅದಕ್ಕೆ ಸೋನು ಗೌಡ ಅವರು ಉತ್ತರ ನೀಡಿದ್ದಾರೆ. ನಾನು ಯಾರ ಬಗ್ಗೆಯೂ ತಲೆ ಕೆಡಿಸಿಕೊಳ್ಳುವುದಿಲ್ಲ ಎಂದು ಓಪನ್ ಆಗಿ ಹೇಳಿದ್ದಾರೆ.

‘ಬೇರೆಯವರು ನೋಡಿದರೆ ಏನು ಅಂದುಕೊಳ್ಳುತ್ತಾರೋ ಎಂಬ ಸ್ವಭಾವದವಳು ನಾನಲ್ಲ. ಇಲ್ಲಿ ಯಾರಿಂದಲೂ ನಮಗೆ ಒಂದು ರೂಪಾಯಿಯೂ ಹೆಲ್ಪ್ ಆಗಿಲ್ಲ. ನನ್ನ ಲೈಫ್ ನನ್ನ ಇಷ್ಟ’ ಎಂದು ಸೋನು ಶ್ರೀನಿವಾಸ್ ಗೌಡ ಕಡ್ಡಿತುಂಡು ಮಾಡಿದ ಹಾಗೇ ಉತ್ತರ ನೀಡಿದ್ದಾರೆ. ಇದರ ಬಗ್ಗೆ ದೊಡ್ಡನೆಯೊಳಗಿನ ಉಳಿದ ಕಂಟೆಸ್ಟ್ ಗಳು ಗಾಸಿಪ್ ಮಾಡಲು ಪ್ರಾರಂಭಿಸಿದ್ದಾರೆ.

‘ಅವಳು ಫೇಮಸ್ ಆಗಿದ್ದೇ ಟ್ರೋಲ್ ಇಂದ. ಅವಳು ನೆಗೆಟಿವ್ ಕಮೆಂಟ್ ಬಗ್ಗೆ ತಲೆ ಕೆಡಿಸಿಕೊಂಡಿಲ್ಲ. ಅದರಿಂದ ಅವಳಿಗೆ ಉಪಯೋಗವೇ ಆಗಿದೆ. ಫೇಮಸ್ ಆದ್ರೆ ಸಾಕು ಅನ್ನೋ ಭಾವನೆ ಇದೆ. ಕೆಟ್ಟದ್ದೋ ಒಳ್ಳೇದೋ ಗೊತ್ತಿಲ್ಲ ನ್ಯೂಸ್‌ನಲ್ಲಿ ಇರಬೇಕು ಅಂದುಕೊಂಡಿದ್ದಾಳೆ’ ಎಂದು ಸೋನು ಬಗ್ಗೆ ಉದಯ್ ಸೂರ್ಯ ಹೇಳಿದ್ದಾರೆ. ಈ ಮಾತಿಗೆ ಇನ್ನುಳಿದವರು ತಮ್ಮ ಧ್ವನಿಗೂಡಿಸಿದ್ದಾರೆ.

ಅಂದ ಹಾಗೇ ಸೋನು ಬಿಗ್ ಬಾಸ್ ಮನೆಯಲ್ಲಿ ತಮ್ಮದೇ ವ್ಯಕ್ತಿತ್ವದ ಛಾಪನ್ನು ಒತ್ತಲು ಪ್ರಯತ್ನ ಪಡುತ್ತಿದ್ದರೂ ನೆಗೆಟಿವ್ ಕಮೆಂಟ್ ಇಲ್ಲೂ ಕೂಡಾ ಪ್ರಾರಂಭವಾಗಿದೆ ಎಂದೇ ಹೇಳಬಹುದು.

Leave A Reply