ಗಂಡನಿಗೆ ಗೊತ್ತಾಗದಂತೆ ಎರಡನೇ ಮದುವೆಯಾದ ಹೆಂಡತಿ | ಏನ್ ಗುರೂ…ಸೀನ್ ರಿವರ್ಸ್

ಗಂಡ ತನ್ನ ಹೆಂಡತಿಗೆ ತಿಳಿಯದಂತೆ, ಇನ್ನೊಂದು ಮದುವೆಯಾಗುವುದು ಅನೈತಿಕ ಸಂಬಂಧ ಬೆಳೆಸಿಕೊಳ್ಳುವುದು ಸಾಮಾನ್ಯ. ಆದರೆ ಈ ಘಟನೆಯೊಂದು ನಿಜಕ್ಕೂ ತದ್ವಿರುದ್ಧ. ಇಲ್ಲಿ ಹೆಂಡತಿಯೇ ಪತ್ನಿಗೆ ತಿಳಿಯದಂತೆ ಎರಡನೇ ಮದುವೆಯಾಗಿದ್ದಾಳೆ. ಪತಿರಾಯ ಪೆಚ್ಚುಮೋರೆ ಹಾಕಿ ಪೊಲೀಸರ ಮೊರೆ ಹೋಗಿದ್ದಾನೆ.

 

ಈ ಘಟನೆ ಹೈದರಾಬಾದ್ ಬಂಜಾರಹಿಲ್ಸ್ ನಲ್ಲಿ ನಡೆದಿದೆ.
ತನ್ನ ಪತ್ನಿ ತನಗೆ ವಿಚ್ಛೇದನ ನೀಡದೇ 2ನೇ ಬಾರಿಗೆ ಮದುವೆಯಾಗಿದ್ದಾಳೆ ಎಂದು ಆರೋಪಿಸಿ ವ್ಯಕ್ತಿಯೊಬ್ಬ ಪೊಲೀಸರಿಗೆ ದೂರು ನೀಡಿದ ವಿಚಿತ್ರ ಪ್ರಜರಣವೊಂದು ನಡೆದಿದೆ.

ಫಸ್ಟ್ ಲ್ಯಾನ್ಸರ್ ಪ್ರದೇಶದ ನಿವಾಸಿ ಮೊಹಮ್ಮದ್ ಚೂದ್ದಮ್ 2013ರಲ್ಲಿ ಹಿರಿಯರ ಸಮ್ಮುಖದಲ್ಲಿ ಬೇಗಂ ಎಂಬಾಕೆಯನ್ನು ವಿವಾಹವಾಗಿದ್ದ. ಅನಂತರ ಆಕೆ 2017ರಲ್ಲಿ ಮೊಯಿನುದ್ದೀನ್ ಎಂಬ ವ್ಯಕ್ತಿಯನ್ನು 2ನೇ ವಿವಾಹವಾಗಿದ್ದಾಳೆ. ಆಕೆಗೆ ಇಬ್ಬರು ಮಕ್ಕಳೂ ಕೂಡಾ ಇದ್ದಾರೆ. ಆದರೆ, ಮುಸ್ಲಿಂ ಕಾನೂನಿನ ಪ್ರಕಾರ, ಆಕೆ ತನಗೆ ವಿಚ್ಛೇದನ ನೀಡದೆ ಬೇರೊಬ್ಬರನ್ನು ಮದುವೆಯಾಗಿದ್ದಾಳೆ ಎಂದು ಅವರು ದೂರಿನಲ್ಲಿ ಪತಿ ಹೇಳಿದ್ದಾನೆ.

ಇಷ್ಟು ಮಾತ್ರವಲ್ಲದೇ ರುಬೀನಾ ಬೇಗಂ ತನ್ನ ವಿರುದ್ಧ ಕಿರುಕುಳದ ಅಡಿಯಲ್ಲಿ ಸುಳ್ಳು ಪ್ರಕರಣ ದಾಖಲಿಸಿದ್ದಾಳೆ ಎಂದು ಮೊಹಮ್ಮದ್ ಹೇಳಿದ್ದಾನೆ. ತನ್ನ ವಿರುದ್ಧ ಸುಳ್ಳು ಸುದ್ದಿ ಹರಡಲಾಗುತ್ತಿದೆ ಎಂದು ಆರೋಪಿಸಿ ತಾನು ಲೈಂಗಿಕ ಸಾಮರ್ಥ್ಯ ಪರೀಕ್ಷೆಗೆ ಒಳಗಾಗಿದ್ದೇನೆ ಮತ್ತು ತನ್ನ ವಿರುದ್ಧ ಪ್ರಮಾಣಪತ್ರವನ್ನ ಪಡೆದಿದ್ದೇನೆ ಎಂದು ಅವರು ತಮ್ಮ ದೂರಿನಲ್ಲಿ ತಿಳಿಸಿದ್ದಾರೆ. ಅದ್ರಂತೆ, ರುಬಿನಾ ಬೇಗಂ, ಆಕೆಯ ತಾಯಿ ಮುಲ್ತಾಜ್ ಬೇಗಂ ಮತ್ತು ಕುಟುಂಬ ಸದಸ್ಯರಾದ ಹೈದರ್ ಅಲಿ, ಯೂಸುಫ್ ಪಾಷಾ, ಮೊಹಮ್ಮದ್ ಖಾಸಿಂ ಮತ್ತು ಮುಬಿನುದ್ದೀನ್ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿ ಕೊಂಡಿದ್ದಾರೆ.

Leave A Reply

Your email address will not be published.