ಭೀಕರ ಕೃತ್ಯ : ಲೇಖಕ ಸಲ್ಮಾನ್ ರಶ್ದಿ ಮೇಲೆ ಚಾಕು ಇರಿತ, ದೃಷ್ಟಿ ಕಳೆದುಕೊಳ್ಳುವ ಸಾಧ್ಯತೆ!!

ನ್ಯೂಯಾರ್ಕ್‌ನ ಚೌಟಕ್ವಾ ಇನ್‌ಸ್ಟಿಟ್ಯೂಟ್‌ನಲ್ಲಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ, ಉಪನ್ಯಾಸ ಕೊಡುವ ಸಂದರ್ಭದಲ್ಲಿ, ಚಾಕುವಿನಿಂದ ಹಲ್ಲೆಗೊಳಗಾದ ಲೇಖಕ ಭಾರತ ಮೂಲದ ಸಲ್ಮಾನ್ ರಶ್ದಿ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಕುತ್ತಿಗೆ, ಕಿಬ್ಬೊಟ್ಟೆಗೆ ಗಂಭೀರ ಗಾಯಗಳಾಗಿದೆ ಎಂದು ಹೇಳಲಾಗಿದೆ.

 

ತೀವ್ರ ಇರಿತಕ್ಕೊಳಗಾಗಿ ಕುಸಿದು ಬಿದ್ದ ಸಲ್ಮಾನ್ ಅವರನ್ನು ಕೂಡಲೇ ಹೆಲಿಕಾಪ್ಟರ್ ಮೂಲಕ ಆಸ್ಪತ್ರೆಗೆ ಸಾಗಿಸಲಾಗಿದ್ದು, ಸದ್ಯ ವೆಂಟಿಲೇಟರ್‌ನಲ್ಲಿ ಇಟ್ಟು ಚಿಕಿತ್ಸೆ ನೀಡಲಾಗುತ್ತಿದೆ. ಈಗ ಬಂದಿರೋ ಮಾಹಿತಿ ಪ್ರಕಾರ, ತೋಳಿನಲ್ಲಿ ನರಗಳು ತುಂಡಾಗಿದ್ದು ಮತ್ತು ಅವರ ಯಕೃತ್ತಿಗೆ ಹಾನಿಯಾಗಿದೆ. ಅಲ್ಲದೆ ಕಣ್ಣುಗಳನ್ನೂ ಕಳೆದುಕೊಳ್ಳಬಹುದು ಎಂದು ಮೂಲಗಳು ತಿಳಿಸಿವೆ.

ಘಟನೆಯ ಬೆನ್ನಲ್ಲೇ ದುಷ್ಕರ್ಮಿಯನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದು, ದಾಳಿಕೋರ ಯಾರು ಎಂಬುದನ್ನು ಪೊಲೀಸರು ಪತ್ತೆಹಚ್ಚಿದ್ದಾರೆ. ಆರೋಪಿಯನ್ನು ನ್ಯೂಜರ್ಸಿ ಮೂಲದ ಹದಿ ಮತಾ‌ರ್ (24) ಎಂದು ಗುರುತಿಸಲಾಗಿದೆ. ದಾಳಿ ಹಿಂದಿನ ಉದ್ದೇಶ ಏನು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

Leave A Reply

Your email address will not be published.