ಮಂಗಳೂರು : ಸಂಚಾರ ಠಾಣಾ ಎಎಸ್ ಐ ನಿಂದ ಸಿಟಿ ಬಸ್ ನಿರ್ವಾಹಕನಿಗೆ ಹಲ್ಲೆ

ಓವರ್ ಸ್ಪೀಡ್ ಚಲಿಸಿದ ಆರೋಪದಲ್ಲಿ ಸಿಟಿ ಬಸ್ಸೊಂದನ್ನು ಟ್ರಾಫಿಕ್‌ ಎಎಸ್‌ಐ ರಾಬರ್ಟ್ ಲಸ್ರಾದೊ ದಂಡ ಹೇರಿದ್ದಾರೆ. ಇದನ್ನು ಪ್ರಶ್ನಿಸಿದ ಬಸ್ ಚಾಲಕನಿಗೆ ಎಎಸ್ಐ ಅವಾಚ್ಯ ಶಬ್ದಗಳಿಂದ ನಿಂದಿಸಿ ವಶಕ್ಕೆ ತೆಗೆದ ಘಟನೆ ನಡೆದಿದೆ. ಇದರಿಂದ ಸಿಟ್ಟುಗೊಂಡ ಬಸ್ಸು ಚಾಲಕರು, ನಿರ್ವಾಹಕರು ತಲಪಾಡಿ ರೂಟ್ ನಲ್ಲಿ ಚಲಿಸುವ ಎಲ್ಲಾ ಬಸ್ಸುಗಳನ್ನು ನಿಲ್ಲಿಸಿ ಮುಷ್ಕರ ನಡೆಸಿದ್ದಾರೆ.

 

ತಲಪಾಡಿಯಲ್ಲಿ ಗಸ್ತಿನಲ್ಲಿದ್ದ ಮಂಗಳೂರು ಸಂಚಾರಿ ಠಾಣಾ ರಾಬರ್ಟ್ ಲಸ್ರಾದೊ ಅವರು, ಮಂಗಳೂರಿನಿಂದ ಮೇಲಿನ ತಲಪಾಡಿಗೆ ಹಿಂತಿರುಗುತ್ತಿದ್ದ 42 ರೂಟ್ ಸಂಖ್ಯೆಯ ಉಷಾ ಟ್ರಾವೆಲ್ಸ್ ಬಸ್ಸನ್ನು ಓವರ್ ಸ್ಪೀಡ್ ಕಾರಣಕ್ಕೆ 1000 ರೂಪಾಯಿ ದಂಡ ಹಾಕಿದ್ದಾರೆ. ಬಸ್ ನಿರ್ವಾಹಕ ದಯಾನಂದ್ ಅವರು ಕಲೆಕ್ಷನ್ ಕಮ್ಮಿ ಇದೆ, ನಾವು ವೇಗವಾಗಿ ಬಂದಿಲ್ಲ. ಅಷ್ಟು ದಂಡ ಕಟ್ಟಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ಈ ವೇಳೆ ಲಸ್ರಾದೊ ಅವರು ದಯಾನಂದ್ ಅವರಲ್ಲಿ ಬಸ್ಸಿನ ದಾಖಲೆ ಪತ್ರ ಕೇಳಿದ್ದಾರೆ. ದಾಖಲೆಗಳು ಆಫೀಸಲ್ಲಿ ಇದೆ ಎಂದು ಉತ್ತರಿಸಿದಾಗ, ನೀವು ಮತ್ತೆ ಯಾಕೆ ಇರುವುದು ಎಂದು ನಿಂದಿಸಿದ್ದಾರೆಂದು ಆರೋಪಿಸಲಾಗಿದೆ.

ದಂಡ ಕಟ್ಟಲು ಬಸ್ ನಿರ್ವಾಹಕರು ಒಪ್ಪದಕ್ಕೆ ಚಾಲಕ ಅಭಿರಾಜ್ ನನ್ನು ಲಸ್ರಾದೊ ದೂರಿನ ಮೇರೆಗೆ ಉಳ್ಳಾಲ ಪೊಲೀಸರು ವಶಕ್ಕೆ ಪಡೆದು ವಾಹನದಲ್ಲಿ ಎಳೆದೊಯ್ದಿದ್ದಿದ್ದಾರೆ. ಇದು ಬಸ್ಸು ನೌಕರರ ಆಕ್ರೋಶಕ್ಕೆ ಕಾರಣವಾಗಿದೆ.

ಬಸ್ಸು ಚಾಲಕ ಅಭಿರಾಜನ್ನು ಬಿಡುಗಡೆಗೊಳಿಸದೆ ಇದ್ದರೆ ಮುಷ್ಕರ ಮುಂದುವರೆಸೋದಾಗಿ ಬಸ್‌ ನೌಕರರು ಹೇಳಿದ್ದಾರೆ. ದಿಢೀರ್ ಸಿಟಿ ಬಸ್‌ ಮುಷ್ಕರದಿಂದ ಪ್ರಯಾಣಿಕರು ಕಂಗಾಲಾಗಿದ್ದು ಬಸ್ ಗಾಗಿ ಪರದಾಡುವಂತಾಗಿದೆ.

ಎಎಸ್ ಐ ಆಲ್ಬರ್ಟ್ ಲಸ್ರಾದೋ ತೊಕ್ಕೊಟ್ಟು ಫೈಓವರಿನಡಿ ಕಾರೊಂದರಲ್ಲಿ ಕೊರಗಜ್ಜನ ಸ್ಟಿಕ್ಕರ್ ಇದ್ದಿದ್ದಕ್ಕೆ ಇತ್ತೀಚೆಗೆ ದಂಡ ಹಾಕಿದ ಘಟನೆಯೊಂದು ನಡೆದಿತ್ತು. ಇದನ್ನು ವಿರೋಧಿಸಿದ ಕಾರು ಮಾಲೀಕ ಸೇರಿದಂತೆ ಹಿಂದು ಸಂಘಟನೆ ಕಾರ್ಯಕರ್ತರು ತೊಕ್ಕೊಟ್ಟು ಜಂಕ್ಷನ್ನಿನಲ್ಲೇ ಪ್ರತಿಭಟನೆ ನಡೆಸಿ ಎಎಸ್ ಐ ವಜಾಗೊಳಿಸಲು ಆಗ್ರಹ ಮಾಡಿದ್ದರು.

Leave A Reply

Your email address will not be published.