ಜಿಲ್ಲಾ ಪಂಚಾಯತ್​ನಲ್ಲಿ ಉದ್ಯೋಗವಕಾಶ | ಒಟ್ಟು ಹುದ್ದೆ-46, ಅರ್ಜಿ ಸಲ್ಲಿಸಲು ಕೊನೆ ದಿನ-ಆ.24

ಕೋಲಾರ ಜಿಲ್ಲಾ ಪಂಚಾಯತ್ ವ್ಯಾಪ್ತಿಯಲ್ಲಿ ಇರುವ ವಿವಿಧ ಗ್ರಾಮ ಪಂಚಾಯತ್​ನಲ್ಲಿ ಖಾಲಿ ಇರುವ ಹುದ್ದೆ ಭರ್ತಿಗೆ ಅಧಿಸೂಚನೆ ಹೊರಡಿಸಲಾಗಿದೆ. ಎಸ್​ಎಸ್​ಎಲ್​ಸಿ ಮತ್ತು ಪಿಯುಸಿ ಆಗಿರುವ ಅಭ್ಯರ್ಥಿಗಳು ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದಾಗಿದೆ. ಕೋಲಾರ ಜಿಲ್ಲೆಯ ಆರು ತಾಲೂಕುಗಳ ವ್ಯಾಪ್ತಿಯ ಗ್ರಾಮ ಪಂಚಾಯತಿಯಲ್ಲಿ ಹುದ್ದೆಗಳು ಖಾಲಿ ಇದ್ದು, ಅಭ್ಯರ್ಥಿಗಳು ವಿದ್ಯಾರ್ಹತೆ ಮತ್ತು ಮೀಸಲಾತಿ ಅನ್ವಯ ನೇರ ನೇಮಕಾತಿ ನಡೆಸಲಾಗುವುದು.

 

ಸಂಸ್ಥೆಯ ಹೆಸರು: ಕೋಲಾರ ಜಿಲ್ಲಾ ಪಂಚಾಯತ್ (ಕೋಲಾರ ಜಿಲ್ಲಾ ಪಂಚಾಯತ್)
ಹುದ್ದೆಯ ಹೆಸರು: ಅಟೆಂಡೆಂಟ್, ಡಿಇಒ, ಕ್ಲರ್ಕ್
ಹುದ್ದೆಗಳ ಸಂಖ್ಯೆ: 46
ಉದ್ಯೋಗ ಸ್ಥಳ: ಕೋಲಾರ – ಕರ್ನಾಟಕ
ವೇತನ: ಕೋಲಾರ ಜಿಲ್ಲಾ ಪಂಚಾಯತ್ ನೇಮಕಾತಿ ನಿಯಮಗಳ ಪ್ರಕಾರ
ಹುದ್ದೆ ಹುದ್ದೆ ಸಂಖ್ಯೆ ವಿದ್ಯಾರ್ಹತೆ
ಕರ ವಸೂಲಿಗಾರ, ಕ್ಲರ್ಕ್ 4 ಪಿಯುಸಿ
ಡೇಟಾ ಎಂಟ್ರಿ ಆಪರೇಟರ್ 12 ಪಿಯುಸಿ
ಅಟೆಂಡೆಂಟ್​ 30 ಎಸ್​ಎಸ್​ಎಲ್​ಸಿ

ವಿದ್ಯಾರ್ಹತೆ: ಕೋಲಾರ ಜಿಲ್ಲಾ ಪಂಚಾಯತ್ ನೇಮಕಾತಿ ಅಧಿಸೂಚನೆಯ ಪ್ರಕಾರ, ಅಭ್ಯರ್ಥಿಯು ಕನಿಷ್ಠ 18 ವರ್ಷಗಳು ಮತ್ತು ಗರಿಷ್ಠ 35 ವರ್ಷಗಳನ್ನು ಹೊಂದಿರಬೇಕು.

ವಯಸ್ಸಿನ ಸಡಿಲಿಕೆ:
ಪ.ಜಾ, ಪ.ಪಂ ಮತ್ತು ಪ್ರವರ್ಗ 1 ಅಭ್ಯರ್ಥಿಗಳು: 05 ವರ್ಷಗಳು
ಪ್ರವರ್ಗ 2ಎ, 2ಬಿ, 3ಎ ಮತ್ತು 3ಬಿ ಅಭ್ಯರ್ಥಿಗಳು: 03 ವರ್ಷಗಳು

ಅರ್ಜಿ ಸಲ್ಲಿಕೆ: ಆಫ್​ಲೈನ್​

ಅರ್ಜಿ ಶುಲ್ಕ: ವಿನಾಯಿತಿ ನೀಡಲಾಗಿದೆ

ಆಯ್ಕೆ ಪ್ರಕ್ರಿಯೆ
ಮೆರಿಟ್ ಪಟ್ಟಿ ಮತ್ತು ಕಂಪ್ಯೂಟರ್ ಸಾಕ್ಷರತೆ ಪರೀಕ್ಷೆ

ಪ್ರಮುಖ ದಿನಾಂಕಗಳು:
ಆಫ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: 08 ಆಗಸ್ಟ್​​ 2022
ಆಫ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 24 ಆಗಸ್ಟ್ 2022

ಅರ್ಜಿ ಸಲ್ಲಿಕೆ ವಿಳಾಸ:
ಮುಖ್ಯ ಕಾರ್ಯನಿರ್ವಹಣಾಧಿಕಾರಿ, ಜಿಲ್ಲಾ ಪಂಚಾಯತ್, ಕೋಲಾರ

ಅರ್ಜಿ ಸಲ್ಲಿಕೆ ಪ್ರಕ್ರಿಯೆ:

*ನೇಮಕಾತಿ ಅಧಿಸೂಚನೆ ಸಂಪೂರ್ಣವಾಗಿ ಪರಿಶೀಲಿಸಿ ಮತ್ತು ಅಭ್ಯರ್ಥಿಯು ಅರ್ಹತಾ ಮಾನದಂಡಗಳನ್ನು ಪೂರೈಸುತ್ತಾರೆಯೇ ಎಂದು ಖಚಿತಪಡಿಸಿಕೊಳ್ಳಿ.
*ರೆಸ್ಯೂಮೆ ಜೊತೆ ದಯವಿಟ್ಟು ಸಂವಹನ ಉದ್ದೇಶಕ್ಕಾಗಿ ಸರಿಯಾದ ಇಮೇಲ್ ಐಡಿ ಮತ್ತು ಮೊಬೈಲ್ ಸಂಖ್ಯೆಯನ್ನು, ಐಡಿ ಪುರಾವೆ, ವಯಸ್ಸು, ಶೈಕ್ಷಣಿಕ ಅರ್ಹತೆ, ಯಾವುದೇ ಅನುಭವಗಳನ್ನು ಅರ್ಜಿ ಜೊತೆ ಲಗತ್ತಿಸಿ.
*ಎಲ್ಲಾ ಮಾಹಿತಿಯನ್ನು ಪೂರ್ಣಗೊಳಿಸಿದ ನಂತರ, ಒದಗಿಸಿದ ವಿವರಗಳು ಸರಿಯಾಗಿವೆಯೇ ಎಂದು ಪರಿಶೀಲಿಸಿ. ನಂತರ ಮೇಲಿನ ​ ವಿಳಾಸಕ್ಕೆ ನಿಗದಿತ ದಿನಾಂಕದ ಮುನ್ನ ಕಳುಹಿಸಬೇಕು.

ಅಧಿಕೃತ ವೆಬ್‌ಸೈಟ್: zpkolar.kar.nic.in

Leave A Reply

Your email address will not be published.