ಬಿಎಡ್ ಮಾಡಿ ನೇಮಕಾತಿ ಆಗದಿರುವವರಿಗೆ ಸರ್ಕಾರದಿಂದ ಗುಡ್ ನ್ಯೂಸ್ | ಶಿಕ್ಷಕರ ನೇಮಕಾತಿಗೆ ವಯೋಮಿತಿ ಏರಿಕೆ!!!

ಬಿಎಡ್ ಮಾಡಿ ನೇಮಕಾತಿ ಆಗದಿರುವವರಿಗೆ ಸರಕಾರ ಗುಡ್ ನ್ಯೂಸ್ ನೀಡಿದೆ. ಸಚಿವ ಸಂಪುಟ ಸಭೆಯಲ್ಲಿ ಶಿಕ್ಷಕರ ನೇಮಕಾತಿ ವಯೋಮಿತಿ ಏರಿಕೆಗೆ ಶುಕ್ರವಾರ ನಡೆದ ಅನುಮೋದನೆ ನೀಡಲಾಗಿದೆ. ಎಲ್ಲಾ ವರ್ಗಗಳಿಗೂ 2 ವರ್ಷಗಳ ವಯೋಮಿತಿಯಲ್ಲಿ ಏರಿಕೆ ಮಾಡಲು ನಿರ್ಧಾರ ತೆಗೆದುಕೊಳ್ಳಲಾಗಿದೆ.

 

ಈ ಕುರಿತಾಗಿ ಸಚಿವ ಸಂಪುಟ ಸಭೆಯ ಬಳಿಕ ಮಾತನಾಡಿದ ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ, ಶಿಕ್ಷಕರ ನೇಮಕಾತಿಯಲ್ಲಿ ವಯೋಮಿತಿ ಸಡಿಲಿಕೆಗೆ ಸರ್ಕಾರದ ನಿರ್ಧಾರ ಮಾಡಿದ್ದು, ಎಲ್ಲ ವರ್ಗಗಳಿಗೂ 2 ವರ್ಷಗಳ ವಯೋಮಿತಿಯಲ್ಲಿ ಏರಿಕೆ ಮಾಡಲು
ನಿರ್ಧಾರ ಮಾಡಲಾಗಿದೆ ಎಂದರು.

ಎಸ್ಸಿ, ಎಸ್ಟಿ, ಪ್ರವರ್ಗ 1 ಮತ್ತು ವಿಕಲಚೇತನ ಅಭ್ಯರ್ಥಿಗಳಿಗೆ ವಯೋಮಿತಿ 47 ವರ್ಷಕ್ಕೆ ಏರಿಕೆಯಾಗಿದೆ. ಪ್ರವರ್ಗ 2, 2 ಬಿ, 3 ಎ ಮತ್ತು 3 ಬಿ ಗಳಿಗೆ 45 ವರ್ಷ ಹಾಗೂ ಸಾಮಾನ್ಯ ವರ್ಗಗಳಿಗೆ 42 ವರ್ಷ ಮೀರಿರಬಾರದು ಎಂದಿದೆ.

ಶಿಕ್ಷಕರ ಹುದ್ದೆಗೆ ಕೆಪಿಎಸ್‌ಸಿಯಿಂದ ಆಯ್ಕೆಯಾಗುವುದಕ್ಕೆ ಇದ್ದ ಕನಿಷ್ಟ ಅಂಕಗಳಲ್ಲೂ ಇಳಿಕೆ ಮಾಡಲಾಗಿದ್ದು, 60 ಅಂಕಗಳಿಂದ 50 ಅಂಕಗಳಿಗೆ ಇಳಿಕೆ ಮಾಡಲಾಗಿದೆ.

Leave A Reply

Your email address will not be published.