ಕಡಬ: ಒಂದೇ ವಾಹನಕ್ಕೆ ಎರಡು ವ್ಯತಿರಿಕ್ತ ನಂ.ಪ್ಲೇಟ್ | ಪೋಲಿಸರಿಂದ ವಾಹನ ಲಾಕ್, ಮಾಲೀಕರಿಗೆ ಪೋಲಿಸರ ಹುಡುಕಾಟ

ಕಡಬ: ಎರಡು ನಂಬರ್ ಪ್ಲೇಟ್ ಹೊಂದಿರುವ ಅಪರಿಚಿತ ಕಾರೊಂದು ಮರ್ದಾಳ ದಲ್ಲಿ ಕಂಡುಬಂದಿದ್ದು, ಪೊಲೀಸರು ಲಾಕ್ ಮಾಡಿದ್ದಾರೆ.

 

ಮುಂಭಾಗದಲ್ಲಿ ಮತ್ತು ಹಿಂಭಾಗದಲ್ಲಿ ಬೇರೆ ಬೇರೆ ನಕಲಿ ನಂಬರ್ ಪ್ಲೇಟ್ ಗಳನ್ನು ಹಾಕಲಾಗಿದ್ದು, ಬುಧವಾರ ರಾತ್ರಿ ಕಡಬ ಠಾಣಾ ಪೊಲೀಸರು
ಮರ್ದಾಳ ಜಂಕ್ಷನ್ ನಲ್ಲಿ ಕಾರಿನ ಚಕ್ರಗಳಿಗೆ ಲಾಕ್ ಮಾಡಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಕಡಬ ಠಾಣಾ ಸಬ್ ಇನ್ಸ್‌ಪೆಕ್ಟರ್ ಆಂಜನೇಯ ರೆಡ್ಡಿ, ನಕಲಿ ನಂಬರ್ ಪ್ಲೇಟ್ ಹಾಕಿರುವ ಕಾರಿಗೆ ಲಾಕ್ ಮಾಡಲಾಗಿದ್ದು, ಕಾರಿನ ಮಾಲಕರನ್ನು ಪತ್ತೆ ಹಚ್ಚುವ ಕಾರ್ಯ ಮಾಡುತ್ತಿದ್ದೇವೆ ಎಂದು ತಿಳಿಸಿದ್ದಾರೆ.

Leave A Reply

Your email address will not be published.