KPSC ಯಿಂದ ಪ್ರಥಮ ದರ್ಜೆ ಸಹಾಯಕ ಹುದ್ದೆಗೆ ಅರ್ಜಿ ಸಲ್ಲಿಸಿದವರಿಗೆ ಮಹತ್ವದ ಮಾಹಿತಿ

ಕೆಪಿಎಸ್‌ಸಿ ವತಿಯಿಂದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ಇಲಾಖೆಗೆ ಆಯ್ಕೆಯಾದ ಪ್ರಥಮ ದರ್ಜೆ ಸಹಾಯಕರ ಹುದ್ದೆಗೆ ದಾಖಲೆಗಳ ಪರಿಶೀಲನೆಗೆ ಇದೀಗ ದಿನಾಂಕ ನಿಗದಿ ಮಾಡಲಾಗಿದೆ.

 

ದಾಖಲೆಗಳ ಪರಿಶೀಲನೆ ದಿನಾಂಕ : 18-08-2022 ರ 09-30 ಗಂಟೆ

ದಾಖಲೆ ಪರಿಶೀಲನೆ ಮಾಡುವ ಸ್ಥಳ: ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ತರಬೇತಿ ಸಂಸ್ಥೆ ಸೆಮಿನಾರ್ ಹಾಲ್, ಕುಷ್ಠರೋಗ ಆಸ್ಪತ್ರೆ ಆವರಣ, ಮಾಗಡಿ ರಸ್ತೆ,
ಬೆಂಗಳೂರು.

ಬೆಳಿಗ್ಗೆ 10-30 ರಿಂದ 01-30 ಗಂಟೆವರೆಗೆ ಆಯ್ಕೆಪಟ್ಟಿಯ ಅಭ್ಯರ್ಥಿಗಳ ಕ್ರಮ ಸಂಖ್ಯೆ 1 ರಿಂದ 86 ರವರೆಗಿನ ಅಭ್ಯರ್ಥಿಗಳು ಪರಿಶೀಲನೆಗೆ ಹಾಜರಾಗಬೇಕು.

02-30 ರಿಂದ 05-30 ರವರೆಗೆ ಅಭ್ಯರ್ಥಿಗಳ ಕ್ರಮ ಸಂಖ್ಯೆ 87 ರಿಂದ 176 ರವರೆಗಿನ ಅಭ್ಯರ್ಥಿಗಳು ಹಾಜರಾಗಲು ತಿಳಿಸಲಾಗಿದೆ.

ಅಭ್ಯರ್ಥಿಗಳು ಕೆಪಿಎಸ್‌ಸಿ ಗೆ ಅರ್ಜಿ ಸಲ್ಲಿಸಿದ ಸಂದರ್ಭದಲ್ಲಿ ಸಲ್ಲಿಸಿರುವ ಎಲ್ಲ ಮೂಲ ದಾಖಲೆಗಳು ಹಾಗೂ ಅದರ ಎರಡು ಸೆಟ್ ಜೆರಾಕ್ಸ್ (ದೃಢೀಕೃತ) ಪ್ರತಿಗಳೊಂದಿಗೆ ಈ ಕೆಳಗಿನ ದಿನಾಂಕದಂದು ಪರಿಶೀಲನೆಗಾಗಿ ಹಾಜರಾಗಲು ತಿಳಿಸಲಾಗಿದೆ.

ಪಪ್ರಥಮ ದರ್ಜೆ ಸಹಾಯಕರ ಹುದ್ದೆಗೆ ನೇಮಕಾತಿಗಾಗಿ ನಡೆಸಿದ ಸ್ಪರ್ಧಾತ್ಮಕ ಪರೀಕ್ಷೆ ಆದ ನಂತರ, ಅಂತಿಮ ಆಯ್ಕೆ ಪಟ್ಟಿಯನ್ನು ಪ್ರಕಟಿಸಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ಇಲಾಖೆಗೆ ಹಂಚಿಕೆಯಾಗಿರುವ 176 ಅಭ್ಯರ್ಥಿಗಳ ಪಟ್ಟಿಯನ್ನು ಸಲ್ಲಿಸಿ ಮೂಲ ಪ್ರಮಾಣ ಪತ್ರಗಳು ಹಾಗೂ ಅದರ ನೈಜತೆಯನ್ನು ನಿಯಮಾನುಸಾರ ಪರಿಶೀಲಿಸಿದ ನಂತರವೇ ನೇಮಕಾತಿ ಮಾಡಿಕೊಳ್ಳಲು ಸೂಚಿಸಲಾಗಿರುತ್ತದೆ. ಆದ್ದರಿಂದ ಇದೀಗ 176 ಅಭ್ಯರ್ಥಿಗಳನ್ನು ದಾಖಲೆಗಳ ಪರಿಶೀಲನೆಗೆ ಆಹ್ವಾನಿಸಲಾಗಿದೆ.

Leave A Reply

Your email address will not be published.