Azadi Ka Amrit Mahotsav : ಸ್ವಾತಂತ್ರ್ಯ ಬಂದ ಬಳಿಕ ಭಾರತ ಯಾವ ದೇಶದ ಎದುರು ಮೊದಲ ಕ್ರಿಕೆಟ್ ಪಂದ್ಯ ಆಡಿತು ? ಫುಲ್ ಡಿಟೇಲ್ಸ್ ಇಲ್ಲಿದೆ

ಭಾರತಕ್ಕೆ ಸ್ವಾತಂತ್ರ್ಯ ಬಂದು 75 ವರ್ಷಗಳು ಪೂರ್ಣಗೊಂಡಿದೆ. ಕೇಂದ್ರ ಸರಕಾರ ಈ ಸಂದರ್ಭದಲ್ಲಿ ಅಮೃತ ಮಹೋತ್ಸವ ಸ್ವಾತಂತ್ರೋತ್ಸವವನ್ನು ಆಚರಿಸುತ್ತಿದೆ. ಈ ಸಂದರ್ಭದಲ್ಲಿ ಭಾರತದ ಅತ್ಯಂತ ಜನಪ್ರಿಯ ಕ್ರೀಡೆ ಕ್ರಿಕೆಟ್‌ನ ಹಳೆಯ ನೆನಪುಗಳನ್ನು ನಾವು ನಿಮಗೆ ಇಲ್ಲಿ ತಿಳಿಸಿಕೊಡಲಿದ್ದೇವೆ.

ಸ್ವಾತಂತ್ರ್ಯ ಪೂರ್ವದಲ್ಲಿ ಭಾರತ ತಂಡ ಇಂಗ್ಲೆಂಡ್ ವಿರುದ್ಧ ಮಾತ್ರ ಆಡುತ್ತಿತ್ತು. ಇಂದು ನಾವು ನಿಮಗೆ ಸ್ವಾತಂತ್ರ್ಯದ ನಂತರ ಭಾರತದ ಪರ ಆಡಿದ ಮೊದಲ ಕ್ರಿಕೆಟ್ ತಂಡ, ಈ ತಂಡದಲ್ಲಿದ್ದ ಆಟಗಾರರು ಯಾರು ಮತ್ತು ಆಡಿದ ಮೊದಲ ಪಂದ್ಯ ಯಾವ ರೀತಿ ಇತ್ತು ಎಂಬ ಮಾಹಿತಿಯನ್ನು ನೀಡಲಿದ್ದೇವೆ.

15 ಆಗಸ್ಟ್ 1947 ರಂದು, ಭಾರತಕ್ಕೆ ಸ್ವಾತಂತ್ರ್ಯ ಬಂದಾಗ, ಎರಡು ವರ್ಷಗಳ ಕಾಲ, ದೇಶದ ಸಂವಿಧಾನ ಮತ್ತು ಅದನ್ನು ಹೇಗೆ ಕಾರ್ಯಗತಗೊಳಿಸಬೇಕು ಎಂಬುದರ ಬಗ್ಗೆ ಕೆಲಸ ನಡೆಯುತ್ತಿತ್ತು. ಆದರೆ ಇತ್ತ ಕಡೆ ಕ್ರಿಕೆಟ್ ಆಟಗಾರರು ಅಂತರರಾಷ್ಟ್ರೀಯ ಪಂದ್ಯಗಳನ್ನು ಆಡುವುದಕ್ಕೆ ಸಿದ್ಧತೆ ಮಾಡಿಕೊಂಡಿದ್ದರು. ಸ್ವಾತಂತ್ರ್ಯದ ನಂತರ, ಭಾರತ ಕ್ರಿಕೆಟ್ ತಂಡವು ಆಸ್ಟ್ರೇಲಿಯಾದಲ್ಲಿ ತನ್ನ ಮೊದಲ ಪಂದ್ಯವನ್ನು ಆಡಿತ್ತು.

ಯಸ್, ಲಾಲಾ ಅಮರನಾಥ್ ಅವರ ನಾಯಕತ್ವದಲ್ಲಿ ಭಾರತ ತಂಡವನ್ನು ಆಯ್ಕೆ ಮಾಡಲಾಗಿತ್ತು. ಇದರಲ್ಲಿ ವಿನೂ ಮಂಕಡ್ ಮತ್ತು ಹೇಮು ಅಧಿಕಾರಿಯನ್ನು ಆರಂಭಿಕ ಆಟಗಾರರಾಗಿ ಆಯ್ಕೆ ಮಾಡಲಾಗಿತ್ತು. ಜೊತೆಗೆ ವಿಜಯ್ ಹಜಾರೆ, ಖಂಡು ರಂಗೇಕರ್ ಮತ್ತು ಗೋಗುಮಲ್ ಕಿಶನ್‌ಚಂದ್‌ಗೆ ಮಧ್ಯಮ ಕ್ರಮಾಂಕದ ಜವಾಬ್ದಾರಿಯನ್ನು ನೀಡಲಾಗಿತ್ತು. ಕೆಳ ಕ್ರಮಾಂಕದ ಜವಾಬ್ದಾರಿಯನ್ನು ಗುಲ್ ಮೊಹಮ್ಮದ್ ಮತ್ತು ರಂಗಾ ಸೊಹೊನಿಗೆ ನೀಡಲಾಗಿತ್ತು. ಬೌಲಿಂಗ್ ವಿಭಾಗದಲ್ಲಿ ದತ್ತು ಫಡ್ಕರ್, ಅಮೀರ್ ಇಲಾಹಿ ಮತ್ತು ಜೆನ್ನಿ ಇರಾನಿ ಇದ್ದರು.

ಪರ್ತ್‌ನಲ್ಲಿ ನಡೆದ ಈ ಮೊದಲ ಪಂದ್ಯದಲ್ಲಿ ಭಾರತ ತಂಡ ಮೊದಲು ಬೌಲಿಂಗ್ ಮಾಡಿ ವೆಸ್ಟರ್ನ್ ಆಸ್ಟ್ರೇಲಿಯಾ ತಂಡವನ್ನು ಎದುರಿಸಲು ರೆಡಿಯಾಯಿತು. ಇಲ್ಲಿ ಭಾರತ ತಂಡದ ಪರ ಮಹಾರಾಷ್ಟ್ರದ ವಿನೂ ಮಂಕಡ್ ಮತ್ತು ದತ್ತು ಫಡ್ಕರ್ ಜೋಡಿ ಆಸ್ಟ್ರೇಲಿಯ ತಂಡದ ಬ್ಯಾಟಿಂಗ್ ಆಟಗಾರರನ್ನು ಸುಲಭವಾಗಿ ಕ್ರೀಸ್ ಗೆ ಮರಳುವಂತೆ ಮಾಡಿತು. ಭಾರತದ ಪರ ಫಡ್ಕರ್ 3 ವಿಕೆಟ್ ಪಡೆದರೆ, ವಿನೂ ಮಂಕಡ್ 5 ವಿಕೆಟ್ ಪಡೆದು ಇತಿಹಾಸ ನಿರ್ಮಿಸಿದರು.

ಲಾಲಾ ಅಮರನಾಥ್ ಮತ್ತು ವಿಜಯ್ ಹಜಾರೆ ಕೂಡ ತಲಾ 1 ವಿಕೆಟ್ ಪಡೆದರು. ಈ ಕಾರಣದಿಂದಾಗಿ ವೆಸ್ಟರ್ನ್ ಆಸ್ಟ್ರೇಲಿಯಾ ತಂಡವು 171 ರನ್ಗಳಿಗೆ ಕುಸಿಯಿತು. ರನ್‌ಗಳ ಬೆನ್ನತ್ತಿದ್ದ ಭಾರತ ತಂಡಕ್ಕೆ ವಿನೂ ಮಂಕಡ್ 57 ರನ್‌ಗಳ ಲಾಲಾ ಅಮರನಾಥ್ ಮತ್ತು ವಿಜಯ್ ಹಜಾರೆ ಕೂಡ ತಲಾ 1 ವಿಕೆಟ್ ಪಡೆದರು. ಈ ಕಾರಣದಿಂದಾಗಿ ವೆಸ್ಟರ್ನ್ ಆಸ್ಟ್ರೇಲಿಯಾ ತಂಡವು ಕೇವಲ 171 ರನ್ ಗಳನ್ನಷ್ಟೇ ಕಲೆ ಹಾಕಿತು. ಈ ರನ್‌ಗಳ ಬೆನ್ನತ್ತಿದ್ದ ಭಾರತ ತಂಡಕ್ಕೆ, ವಿನೂ ಮಂಕಡ್ 57 ರನ್‌ಗಳ ಇನಿಂಗ್ಸ್‌ನಲ್ಲಿ ಉತ್ತಮ ಆರಂಭವನ್ನು ನೀಡಿದರೂ, ಉಳಿದ ಆಟಗಾರರು ಅಷ್ಟೊಂದು ಸಹಕರಿಸದ ಕಾರಣ, ಇಡೀ ತಂಡವು 127 ರನ್ ಆಲೌಟ್ ಆಯಿತು.

ನಂತರ ವೆಸ್ಟರ್ನ್ ಆಸ್ಟ್ರೇಲಿಯಾ ತಂಡವು 44 ರನ್‌ಗಳ ಮುನ್ನಡೆಯೊಂದಿಗೆ ಎರಡನೇ ಇನ್ನಿಂಗ್ಸ್ ಪ್ರಾರಂಭ ಮಾಡಿತು. ಆದರೆ 4 ವಿಕೆಟ್‌ಗಳ ನಷ್ಟಕ್ಕೆ 70 ರನ್ ಗಳಿಸಲು ಮಾತ್ರ ಸಾಧ್ಯವಾಯಿತು. ಈ ಮೂಲಕ ಎದುರಾಳಿ ತಂಡ 114 ರನ್‌ಗಳ ಮುನ್ನಡೆ ಸಾಧಿಸಿತ್ತು. ಆದರೆ ಸಮಯದ ಅಭಾವದಿಂದ ಪಂದ್ಯ ಡ್ರಾದಲ್ಲಿ ಅಂತ್ಯಗೊಂಡಿತು. ಇದು ಸ್ವಾತಂತ್ರ್ಯದ ನಂತರ ಭಾರತದ ಮೊದಲ ಅಂತರರಾಷ್ಟ್ರೀಯ ತಂಡದ ಮೊದಲ ಪಂದ್ಯ ಮತ್ತು ಅದರ ಮೊದಲ ಫಲಿತಾಂಶ.

Leave A Reply

Your email address will not be published.