ಗೂಗಲ್ ಮ್ಯಾಪ್ ಮಾಡಿದ ಅವಾಂತರ | ಕಾರಿನಲ್ಲಿ ಮ್ಯಾಪ್ ಬಳಸಿ ಹೋದವರು ಸೇರಿದ್ದು ಮಾತ್ರ ಕಾಲುವೆಗೆ!

Share the Article

ಅದೆಷ್ಟೇ ದೂರ ಬೇಕಾದರೂ ಸುತ್ತಾಡಬಹುದು. ಯಾಕಂದ್ರೆ ನಮ್ ಜೊತೆ ಗೂಗಲ್ ಮ್ಯಾಪ್ ಇದೆ ಎಂದು ಅಂದುಕೊಳ್ಳುತ್ತಿರುತ್ತಾರೆ. ಆದ್ರೆ, ಗೂಗಲ್ ಮ್ಯಾಪ್ ನಂಬಿ ಹೋದವರ ಗತಿ ದೇವರೇ ಬಲ್ಲ.

ಇಂತಹ ಅದೆಷ್ಟೋ ಘಟನೆಗಳೇ ನಡೆದಿದ್ದು, ಗೂಗಲ್ ಮ್ಯಾಪ್ ಆಧರಿಸಿ ಹೋದವರು ಎಲ್ಲೆಲ್ಲೋ ಸೇರಿದ್ದಾರೆ. ಇದೀಗ ಅಂತಹುದೇ ಒಂದು ಘಟನೆ ಕೇರಳದಲ್ಲಿ ನಡೆದಿದೆ.

ಕೇರಳದ ಕುಟುಂಬವೊಂದು ಕಾರಿನಲ್ಲಿ ಗೂಗಲ್‌ ಮ್ಯಾಪ್‌ ಹಾಕಿಕೊಂಡು ಪ್ರಯಾಣಿಸುತ್ತಿದ್ದರು. ಈ ವೇಳೆ ಅವರ ಕಾರು ಕೊಟ್ಟಾಯಂ ಬಳಿಯ ಪರಚಲ್ ಎಂಬಲ್ಲಿ ಕಾಲುವೆಗೆ ಉರುಳಿದ ಅಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಕುಟುಂಬವು ನಿನ್ನೆ ರಾತ್ರಿ 10:30 ರ ಸುಮಾರಿಗೆ ಎರ್ನಾಕುಲಂನಿಂದ ಕುಂಭನಾಡಿಗೆ ಪ್ರಯಾಣಿಸುತ್ತಿದ್ದಾಗ ಈ ಘಟನೆ ಸಂಭವಿಸಿದೆ.

ಪ್ರತ್ಯಕ್ಷದರ್ಶಿಗಳ ಪ್ರಕಾರ, ಸಹಾಯಕ್ಕೆ ಬರುವ ಮೊದಲು ಕಾರು 300 ಮೀಟರ್ ನೀರಿನಲ್ಲಿ ತೇಲಿಹೋಗಿದ್ದರಿಂದ ಈ ಘಟನೆಯು ನಡೆದಿದೆ. ಸ್ಥಳೀಯರು ಕಾರನ್ನು ಹಗ್ಗದಿಂದ ಕಟ್ಟಿ, ಕುಟುಂಬದ ನಾಲ್ಕು ಸದಸ್ಯರನ್ನು ರಕ್ಷಿಸಿದ್ದಾರೆ.

Leave A Reply