ಪತಿ ಪತ್ನಿ ಮಧ್ಯೆ ಜಗಳ : ಪತ್ನಿ ಗುಂಡೇಟಿಗೆ ಸಾವು

Share the Article

ದಂಪತಿಗಳ ಮಧ್ಯೆ ಜಗಳ ಆಗೋದು ಸಹಜ ಎಂಬ ಮಾತಿದೆ. ಆದರೆ ಇಲ್ಲೊಂದು ಕಡೆ ದಂಪತಿಗಳ ಮಧ್ಯೆ ಜಗಳ ನಡೆದು, ಕೋಪಕ್ಕೆ ಕೈ ಕೊಟ್ಟ ಪತಿ ಪತ್ನಿಯ ಸಾವಿಗೆ ಕಾರಣನಾಗಿದ್ದಾನೆ.

ದಂಪತಿಯ ನಡುವೆ ನಡೆದ ಕಲಹದಲ್ಲಿ ಪತಿ ಹಾರಿಸಿದ ಗುಂಡು ತಗುಲಿ ಪತ್ನಿ ಸಾವನ್ನಪ್ಪಿದ ಘಟನೆ
ಕುಶಾಲನಗರ ತಾಲ್ಲೂಕಿನ ಚೆಟ್ಟಳ್ಳಿಯ ಚೇರಳ
ಶ್ರೀಮಂಗಲ ಗ್ರಾಮದಲ್ಲಿ ನಡೆದಿದೆ.

ಬಟ್ಟೇರ ಷಷ್ಮ (44) ಎಂಬುವವರು ಗುಂಡೇಟಿನಿಂದ ಮೃತಪಟ್ಟ ಮಹಿಳೆ.

ಪತಿ ಬಟ್ಟೇರ ಗೋಪಾಲ (ಕಿಶನ್) ಗುಂಡು ಹಾರಿಸಿದ ಆರೋಪಿ. ದಂಪತಿಗಳಿಬ್ಬರ ಮಧ್ಯೆ ಮಂಗಳವಾರ ರಾತ್ರಿ ಇಬ್ಬರ ನಡುವೆ ಗಲಾಟೆ ನಡೆದಿದೆ‌. ಮಾತಿಗೆ ಮಾತು ಬೆಳೆದು ನಂತರ ಕೋಪಗೊಂಡ ಪತಿ ಗುಂಡು ಹಾರಿಸಿದ್ದಾನೆ. ಅದು ಪತ್ನಿಗೆ ತಾಗಿ, ಪತ್ನಿ ಸಾವನ್ನಪ್ಪಿದ್ದಾಳೆ‌ ವಿಷಯ ಪೊಲೀಸರಿಗೆ ತಿಳಿದು ತಕ್ಷಣವೇ ಸ್ಥಳಕ್ಕೆ ಬಂದಿದ್ದಾರೆ. ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ಎ.ಅಯ್ಯಪ್ಪ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಘಟನೆ ಕುರಿತು ಮಡಿಕೇರಿ ಗ್ರಾಮಾಂತರ ಪೊಲೀಸರು ಆರೋಪಿ ಗೋಪಾಲನನ್ನು ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದಾರೆ.

Leave A Reply