ಮದುವೆಯಾದ ಎರಡೇ ತಿಂಗಳಿಗೆ ನಟಿ ನಯನತಾರಾಗೆ ವಾಂತಿ ಶುರು | ಗಂಡನ ಎಡವಟ್ಟೇ ಇದಕ್ಕೆ ಕಾರಣ

ನಟಿ ನಯನತಾರಾ ಮದುವೆ ಜೂನ್ 9 ರಂದು ನಡೆದಿದೆ. ಇದು ಎಲ್ಲರಿಗೂ ತಿಳಿದಿರುವ ವಿಚಾರ. ಹನಿಮೂನ್ ಎಲ್ಲಾ ಮುಗಿಸಿ ಬಂದ ಜೋಡಿ ನಂತರ ತಮ್ಮ ತಮ್ಮ ಸಿನಿಮಾ ಕೆಲಸಗಳಲ್ಲಿ ಬಿಜಿಯಾಗಿದ್ದಾರೆ. ಆದರೆ ಈಗ ತಿಳಿದು ಬಂದಿರೋ ವಿಷಯ ಏನೆಂದರೆ ನಯನತಾರಾ ವಾಂತಿ ಮಾಡಿಕೊಂಡಿದ್ದಾರಂತೆ. ನಂತರ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದು ವಾಪಾಸು ಬಂದಿದ್ದಾರೆ ಎಂದು.

 

ಅಷ್ಟಕ್ಕೂ ಇದಕ್ಕೆಲ್ಲಾ ಕಾರಣ ಗಂಡ ವಿಕ್ಕಿ ಅಂದರೆ ವಿಘ್ನೇಶ್ ಶಿವನ್ ಅಂತೆ. ಅಫ್ ಕೋರ್ಸ್ ಗಂಡನೇ ಕಾರಣ ಆಗಬೇಕು.

ಐದಾರು ವರ್ಷಗಳ ಪ್ರೀತಿಗೆ ವಿಘ್ನೇಶ್ ಹಾಗೂ ನಯನ್ ಮದುವೆ ಕೆಲ ದಿನಗಳ ಹಿಂದಷ್ಟೇ ಮದುವೆ ನಡೆದಿತ್ತು. ಸೂಪರ್ ಸ್ಟಾರ್ ರಜನಿಕಾಂತ್, ಕಿಂಗ್ ಖಾನ್ ಶಾರೂಖ್ ಖಾನ್ ಸೇರಿದಂತೆ ಸಾಕಷ್ಟು ಗಣ್ಯರು ಮದುವೆ ಸಮಾರಂಭಕ್ಕೆ ಹಾಜರಾಗಿ ನಟ ಜೋಡಿಗೆ ಶುಭ ಹಾರೈಸಿದ್ದರು. ಮದುವೆ ನಂತರ ತಿರುಪತಿ ದೇವಸ್ಥಾನದ ಆವರಣದ ನಯನತಾರಾ ಚಪ್ಪಲಿ ಧರಿಸಿ ಓಡಾಡಿದ್ದು ವಿವಾದ ಸೃಷ್ಟಿಸಿತ್ತು. ನಂತರ ವಿಘ್ನೇಶ್ ಶಿವನ್ ಅದಕ್ಕೆ ಕ್ಷಮೆ ಕೂಡ ಕೇಳಿದ್ದರು.

ಶೀಘ್ರದಲ್ಲೇ ವಿಘ್ನೇಶ್ ಹಾಗೂ ನಯನತಾರಾ ಜೋಡಿಯ ಅದ್ದೂರಿ ಕಲ್ಯಾಣೋತ್ಸವದ ಅದ್ಭುತ ಕ್ಷಣಗಳು ನೆಟ್‌ಫಿಕ್ಸ್‌ನಲ್ಲಿ ಬರ್ತಿದೆ. ಅದರ ಪ್ರೋಮೊ ಕೂಡಾ ಬಂದಿದೆ. . ಮತ್ತೊಂದಡೆ ವಾಂತಿಯಿಂದ ಅಸ್ವಸ್ಥಗೊಂಡಿದ್ದ ನಯನತಾರಾ ಆಸ್ಪತ್ರೆ ಸೇರಿ ಚಿಕಿತ್ಸೆ ಪಡೆದು ಬಂದಿದ್ದಾರೆ. ಅಷ್ಟಕ್ಕೂ ನಯನತಾರಾಗೆ ಆಸ್ಪತ್ರೆಗೆ ಸೇರಲು ಕಾರಣ ಪತಿ ವಿಘ್ನೇಶ್ ಶಿವನ್ ಮಾಡಿದ್ದ ಸ್ಪೆಷಲ್ ಅಡುಗೆ. ಹೆಂಡತಿಗಾಗಿ ಮಾಡಿದ ಸ್ಪೆಷಲ್ ಅಡುಗೆ.

ಪ್ರೀತಿಯ, ಮುದ್ದಿನ ಮಡದಿಗೆ ಏನಾದರೂ ಸರ್ಪೈಸ್ ಕೊಡೋಣ ಎಂದು ವೀಕೆಂಡ್‌ನಲ್ಲಿ ವಿ.ಶಿವನ್ ಸ್ಪೆಷಲ್ ಅಡುಗೆ ಮಾಡಿದ್ದಾರೆ. ಪತಿಯ ಕೈತುತ್ತಿಗೆ ಪ್ರೀತಿಗೆ ಕರಗಿದ ನಯನತಾರಾ ಖುಷಿಯಿಂದ ಊಟ ಮಾಡಿದ್ದಾರೆ. ಆದರೆ ನಂತರ ಹೊಟ್ಟೆ ಕೆಟ್ಟು ನಯನತಾರಾ ವಾಂತಿ ಮಾಡಿಕೊಳ್ಳಲು ಶುರು ಮಾಡಿದ್ದಾರೆ. ಕೂಡಲೇ ಆಸ್ಪತ್ರೆಗೆ ದಾಖಲಾಗಿ ಬಹುಭಾಷಾ ನಟಿ ಚಿಕಿತ್ಸೆ ಪಡೆದಿದ್ದಾರೆ. ವೈದ್ಯರು ಕೆಲ ಹೊತ್ತು ನಿಗಾದಲ್ಲಿಟ್ಟು ಚೇತರಿಸಿಕೊಂಡ ಬಳಿಕ ಡಿಸ್ಚಾರ್ಜ್ ಮಾಡಿ ಮನೆಗೆ ಕಳುಹಿಸಿದ್ದಾರಂತೆ.

ತೀರಾ ಅಸ್ವಸ್ಥರಾಗಿ ಆಸ್ಪತ್ರೆಗೆ ಸೇರಿದ ನಟಿ ನಯನತಾರಾಗೆ ವಾಂತಿಯ ಜೊತೆಗೆ ಸ್ಕಿನ್ ಅಲರ್ಜಿ ಕೂಡ ಆಗಿತ್ತಂತೆ. ಒಟ್ಟಾರೆ ನಯನ ಚಿಕಿತ್ಸೆ ಪಡೆದು ಮನೆಗೆ ವಾಪಸ್ ಆಗಿದ್ದು, ಈ ಸುದ್ದಿ ಬಗ್ಗೆ ನಯನತಾರಾ ಆಗಲಿ ವಿಘ್ನೇಶ್ ಶಿವನ್ ಆಗಲಿ ಯಾವುದೇ ಅಧಿಕೃತ ಸ್ಪಷ್ಟನೆ ನೀಡಿಲ್ಲ.

Leave A Reply

Your email address will not be published.