ನೆರಿಯ : ಹಠಾತ್ ಹೃದಯಾಘಾತದಿಂದ ವಿದ್ಯಾರ್ಥಿ ಸಾವು!

ನೆರಿಯ : ಗ್ರಾಮದ ಪಿಲಿಕಳ ಪಂಪ್ ಹೌಸ್ ಬಳಿಯ ನಿವಾಸಿ, ವಿದ್ಯಾರ್ಥಿಯೋರ್ವ ಸಚಿನ್ (17) ಎಂಬಾತ ಆ.9 ರಂದು ಹೃದಯಘಾತದಿಂದ ತನ್ನ ನಿವಾಸದಲ್ಲಿ ನಿಧನ ಹೊಂದಿದ್ದಾರೆ.

 

ಸಚಿನ್ ಮುಂಡಾಜೆ ಪದವಿ ಪೂರ್ವ ಕಾಲೇಜಿನ ದ್ವಿತೀಯ ಪಿಯುಸಿ ಕಲಾವಿಭಾಗದಲ್ಲಿ ವ್ಯಾಸಂಗ ಮಾಡುತ್ತಿದ್ದು, ಈತ ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ ಎನ್ನಲಾಗಿದೆ ಎಂದು ಹೇಳಲಾಗಿದೆ.

ಇಂದು ಕಾಲೇಜಿಗೆ ಮೊಹರಂ ಪ್ರಯುಕ್ತ ಸರಕಾರಿ ರಜೆ ಇದ್ದು, (ಆ 9) ಮನೆಯಲ್ಲೇ ಇದ್ದ ಎನ್ನಲಾಗಿದೆ. ಮನೆಯಲ್ಲಿದ್ದ ಸಂದರ್ಭ ಏಕಾಏಕಿ ಎದೆ ನೋವು ಕಾಣಿಸಿಕೊಂಡಿತ್ತು. ಅವಳಿ ಮಕ್ಕಳ ಪೈಕಿ ಓರ್ವರಾಗಿರುವ ಇವರಿಗೆ ತಂದೆ,ತಾಯಿ, ಹಾಗೂ ಇಬ್ಬರು ಸಹೋದರರಿದ್ದಾರೆ.

Leave A Reply

Your email address will not be published.