Breaking News | ಮಡಿಕೇರಿ – ಮಂಗಳೂರು ಹೆದ್ದಾರಿ ಸಂಚಾರ ಬಂದ್ – ಜಿಲ್ಲಾಡಳಿತ ಆದೇಶ

ಎತ್ತ ನೋಡಿದರತ್ತ ಮಳೆಯ ಅಬ್ಬರ. ಮಳೆಯ ತೀವ್ರತೆ ಎಷ್ಟಿದೆಯೆಂದರೆ ಅಕ್ಷರಶಃ ಜನ ನಲುಗಿ ಹೋಗಿದ್ದಾರೆ ಎಂದೇ ಹೇಳಬಹುದು. ಇತ್ತ ಕೊಡಗಿನಲ್ಲಿ ಕೂಡಾ ಮಳೆ ಜೋರಾಗಿಯೇ ಇದೆ. ಅಷ್ಟು ಮಾತ್ರವಲ್ಲದೇ, ಅಲ್ಲಲ್ಲಿ ಗುಡ್ಡ ಕುಸಿಯುವ ಭೀತಿ ಕೂಡಾ ವ್ಯಕ್ತವಾಗಿದ್ದು, ಇದೀಗ ಮಡಿಕೇರಿ ಸಮೀಪದ ಮದೆನಾಡಿನ ಕರ್ತೋಜಿ ಎಂಬಲ್ಲಿ ಗುಡ್ಡವೊಂದು ರಾಷ್ಟ್ರೀಯ ಹೆದ್ದಾರಿ 275 ಕ್ಕೆ ಕುಸಿಯುವ ಪರಿಸ್ಥಿತಿಯಲ್ಲಿದೆ. ಮಳೆ ಸತತವಾಗಿ ಇದೇ ರೀತಿ ಸುರಿದರೆ ರಾಷ್ಟ್ರೀಯ ಹೆದ್ದಾರಿ 275 ರ ಮೇಲೆ ಈ ಗುಡ್ಡ ಕುಸಿಯುವ ಸಾಧ್ಯತೆ ಇರುವುದರಿಂದ ವಾಹನ ಸಂಚಾರ ಬಂದ್ ಮಾಡಲಾಗಿದೆ.

 

ಮದೆನಾಡಿನ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಮಣ್ಣು ಕುಸಿತದ ಭೀತಿಯ ಪರಿಣಾಮ ಮಡಿಕೇರಿ- ಮಂಗಳೂರು ರಸ್ತೆ ಸಂಚಾರವನ್ನು ಇಂದು ರಾತ್ರಿ 9 ಗಂಟೆಯಿಂದ ನಾಳೆ ಬೆಳಗ್ಗೆ 6.30 ಗಂಟೆವರೆಗೂ ಎಲ್ಲಾ ವಾಹನ ಸಂಚಾರಕ್ಕೆ ಬಂದ್ ಮಾಡಿ ಕೊಡಗು ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.

ಹೆದ್ದಾರಿ ಸಹಾಯಕ ಇಂಜಿನಿಯರ್ ಅವರಿಂದ ಕೊಡಗು ಜಿಲ್ಲಾಧಿಕಾರಿಗೆ ಮನವಿ ಮಾಡಲಾದ ಹಿನ್ನಲೆಯಲ್ಲಿ ಆದೇಶ ಹೊರಡಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Leave A Reply

Your email address will not be published.