ದೇಶಭಕ್ತರೇ, ಅಮೃತಮಹೋತ್ಸವದ ನೆನಪಿಗಾಗಿ ನಿಮಗೂ ಪ್ರಮಾಣಪತ್ರ ಬೇಕೇ?; ಇಲ್ಲಿದೆ ನೋಡಿ ‘ಫ್ಲ್ಯಾಗ್ ಜೊತೆ ಸೆಲ್ಫಿ’ ಸರ್ಟಿಫಿಕೇಟ್ ಡೌನ್ಲೋಡ್ ಮಾಡುವ ರೀತಿ..
ಈ ಬಾರಿಯ ಸ್ವಾತಂತ್ರ್ಯೋತ್ಸವ 75ನೇ ವರ್ಷದ ಸ್ವಾತಂತ್ರ್ಯ ದಿನ. ಅಮೃತಮಹೋತ್ಸವದ ಸಂಭ್ರಮದಲ್ಲಿ ಭಾರತೀಯರಾದ ನಾವು ತೇಲಾಡುತ್ತಿದ್ದು, ಈ ದಿನದ ನೆನಪು ಅಚ್ಚಳಿಯಾಗಿ ಉಳಿಯಲು ಸರ್ಕಾರವು ಹೊಸ ಯೋಜನೆಗಳನ್ನು ನಿರ್ಮಿಸಿದೆ.
ಆಜಾದಿ ಕಾ ಅಮೃತ್ ಮಹೋತ್ಸವದ ಸಂದರ್ಭದಲ್ಲಿ ‘ಹರ್ ಘರ್ ತಿರಂಗಾ ಅಭಿಯಾನ ಪ್ರಾರಂಭವಾಗಿದ್ದು, ಅಮೃತ ಮಹೋತ್ಸವದ ಸ್ಮರಣಾರ್ಥ ರಾಷ್ಟ್ರಧ್ವಜವನ್ನು ತಮ್ಮ ಮನೆಗೆ ತರಲು ಮತ್ತು ಅದನ್ನು ಹಾರಿಸಲು ನಾಗರಿಕರನ್ನು ಪ್ರೋತ್ಸಾಹಿಸಲಾಗುತ್ತಿದೆ. ಮನೆಯಲ್ಲಿ ತ್ರಿವರ್ಣ ಧ್ವಜ ಹಾರಿಸುವ ಮೂಲಕ ದೇಶಕ್ಕೆ ಗೌರವ ಸೂಚಿಸುವ ಕ್ಷಣ ಇದಾಗಿದೆ.
‘ಹರ್ ಘರ್ ತಿರಂಗಾ’ ಯೋಜನೆಯ ಗುರಿಯೇ, ಜನರ ಹೃದಯದಲ್ಲಿ ದೇಶಭಕ್ತಿಯನ್ನು ಹುಟ್ಟಿಹಾಕುವುದು ಮತ್ತು ರಾಷ್ಟ್ರಧ್ವಜದ ಬಗ್ಗೆ ಜಾಗೃತಿ ಮೂಡಿಸುವುದು. ಅಷ್ಟೇ ಅಲ್ಲದೆ, ನಮ್ಮ ಸೋಷಿಯಲ್ ಮೀಡಿಯಾ ಖಾತೆ ಡಿಪಿಗಳನ್ನು ತ್ರಿವರ್ಣ ಧ್ವಜಕ್ಕೆ ಬದಲಾಯಿಸಲು ಪ್ರಧಾನಿ ಮೋದಿ ಕರೆ ಕೊಟ್ಟಿದ್ದಾರೆ. ಇದಕ್ಕೆ ತಕ್ಕಂತೆ ಕರೆಗೆ ಓ ಗೊಟ್ಟು ತ್ರಿವರ್ಣ ಧ್ವಜ ಹಾರಿಸಿದ್ದಾರೆ.
ಇಂತಹ ಹೆಮ್ಮೆಯ ಕ್ಷಣದಲ್ಲಿ ಹರ್ ಘರ್ ತಿರಂಗಾ ಅಭಿಯಾನದಲ್ಲಿ
ಫ್ಲ್ಯಾಗ್ ಪಿನ್ ಮಾಡಿ, ನೀವು ಕೂಡ ಪ್ರಮಾಣಪತ್ರವನ್ನು ಪಡೆಯಬಹುದಾಗಿದೆ. ನಿಮ್ಮ ಫೋಟೋವನ್ನು ವೆಬ್‌ಸೈಟ್‌ನಲ್ಲಿ ತೋರಿಸಲು harghartiranga.com ಗೆ ಅಪ್‌ಲೋಡ್ ಮಾಡಬಹುದು.
ಫ್ಲ್ಯಾಗ್ ಅನ್ನು ಪಿನ್ ಮಾಡಲು ಮತ್ತು ಪ್ರಮಾಣಪತ್ರವನ್ನು ಡೌನ್‌ಲೋಡ್ ಮಾಡುವ ವಿಧಾನ:
*ಮೊದಲಿಗೆ https://harghartiranga.com ಲಿಂಕ್ ತೆರೆಯಿರಿ.
*ಅಲ್ಲಿ ಎರಡು ಪ್ರಮುಖ ಆಯ್ಕೆಗಳಿರುತ್ತವೆ: “ಪಿನ್ ಎ ಫ್ಲ್ಯಾಗ್” ಮತ್ತು “ ಫ್ಲ್ಯಾಗ್ ಜೊತೆಗೆ ಸೆಲ್ಫಿ ಅಪ್‌ಲೋಡ್ ಮಾಡಿ.”
*ಫ್ಲಾಗ್ ಪಿನ್ ಮಾಡಲು “ಪಿನ್ ಎ ಫ್ಲ್ಯಾಗ್” ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
*ನಿಮ್ಮ ಹೆಸರು ಮತ್ತು ಮೊಬೈಲ್ ಸಂಖ್ಯೆಯ ವಿವರಗಳನ್ನು ತುಂಬಲು ಒಂದು ಪುಟ ತೆರೆಯುತ್ತದೆ.
*ನೀವು ಸ್ಥಳ ಪ್ರವೇಶವನ್ನು ಕೇಳುವ ಪಾಪ್-ಅಪ್‌ನಲ್ಲಿ “ಹೌದು” ಅನ್ನು ಸಹ ಕ್ಲಿಕ್ ಮಾಡಬೇಕು.
*ನಿಮ್ಮ Gmail ಖಾತೆಯ ಮೂಲಕ ಲಾಗಿನ್ ಆಗುವ ಆಯ್ಕೆಯೂ ಇರುತ್ತದೆ.
*ನಿಮ್ಮ ಹೆಸರು ಮತ್ತು ಫೋನ್ ಸಂಖ್ಯೆಯನ್ನುh ನಮೂದಿಸಿದ ನಂತರ, ಮುಂದೆ ಕ್ಲಿಕ್ ಮಾಡಿ.
*ನಕ್ಷೆಯಿಂದ ನಿಮ್ಮ ಪ್ರಸ್ತುತ ಸ್ಥಳವನ್ನು ಆಯ್ಕೆಮಾಡಿ.
*ಆಯ್ಕೆ ಮಾಡಿದ ನಂತರ “ಪಿನ್ ಎ ಫ್ಲ್ಯಾಗ್” ಅನ್ನು ಕ್ಲಿಕ್ ಮಾಡಿ.
*ನಿಮ್ಮ ಧ್ವಜವನ್ನು ಪಿನ್ ಮಾಡಲಾಗಿದೆ ಎಂಬ ಅಭಿನಂದನಾ ಸಂದೇಶವನ್ನು ನೀವು ಪಡೆಯುತ್ತೀರಿ.
*ಸಂದೇಶದ ಕೆಳಗೆ, ಪ್ರಮಾಣಪತ್ರವನ್ನು ಡೌನ್‌ಲೋಡ್ ಮಾಡುವ ಆಯ್ಕೆ ಇರುತ್ತದೆ.
*ಡೌನ್‌ಲೋಡ್ ಆಯ್ಕೆಯ ಮೇಲೆ ಕ್ಲಿಕ್ ಮಾಡಿ. ನೀವು ಫೇಸ್‌ಬುಕ್, ಲಿಂಕ್ಡ್‌ಇನ್, ಟ್ವಿಟರ್ ಮತ್ತು ವಾಟ್ಸಾಪ್‌ನಂತಹ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳಲ್ಲಿ ಪ್ರಮಾಣಪತ್ರವನ್ನು ಡೌನ್‌ಲೋಡ್ ಮಾಡಬಹುದು ಮತ್ತು ಅದನ್ನು ಹಂಚಿಕೊಳ್ಳಬಹುದು.
ಭಾರತೀಯರೇ ಇದು ನಮ್ಮ ಅಮೃತಮಹೋತ್ಸವದ ಹೆಮ್ಮೆಯ ದಿನ. ಈ ದಿನದ ನೆನಪಿಗಾಗಿ ಈ ಪ್ರಮಾಣಪತ್ರ ಡೌನ್ಲೋಡ್ ಮಾಡಿಕೊಳ್ಳಿ ಇತರರಿಗೂ ತಿಳಿಹೇಳಿ..