ಚಾಲೆಂಜಿಂಗ್ ಸ್ಟಾರ್ ದರ್ಶನ್ ವಿರುದ್ಧ ಹೊಸ ವಿವಾದ | ಜೀವ ಬೆದರಿಕೆ, ದೂರು ದಾಖಲು

ನಟ ದರ್ಶನ್, ತಮ್ಮ ಸಿನಿಮಾಗಳಿಗಿಂತ ಹೆಚ್ಚಾಗಿ ವೈಯಕ್ತಿಕ ವಿಚಾರಗಳಿಗೆ ಹೆಚ್ಚು ಸುದ್ದಿಯಲ್ಲಿ ಇರ್ತಾರೆ. ಈಗ ಬಂದಿರೋ ಮಾಹಿತಿ ಪ್ರಕಾರ, ಸಿನಿಮಾ ನಿರ್ಮಾಪಕನಿಗೆ ಧಮ್ಕಿ ಹಾಕಿದ ಆರೋಪದ ಮೇಲೆ ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದಾರೆ. ನಟ ದರ್ಶನ್ ಬೆದರಿಕೆ ಹಾಕಿರುವುದಾಗಿ ಆರೋಪಿಸಿ ನಿರ್ಮಾಪಕ ಭರತ್ ಕೆಂಗೇರಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

 

ಕೊರೊನಾ ಸಂದರ್ಭದಲ್ಲಿ ದರ್ಶನ್ ಸಂಬಂಧಿಯಾಗಿರುವ, ಧ್ರುವನ್‌ಗೆ ಸಿನಿಮಾ ಮಾಡಬೇಕು ಎಂದು ನಿರ್ಮಾಪಕ ಭರತ್, ‘ಭಗವಾನ್ ಶ್ರೀಕೃಷ್ಣ ಪರಮಾತ್ಮ’ ಹೆಸರಿನ ಸಿನಿಮಾವನ್ನು ಎರಡು ವರ್ಷದ ಹಿಂದೆ ಮುಹೂರ್ತ ನೆರವೇರಿಸಿ, ಶೂಟಿಂಗ್ ಶುರು ಮಾಡಿದ್ದರು. ಆದರೆ ಹಣಕಾಸಿನ ತೊಂದರೆಯಿಂದ ಆ ಸಿನಿಮಾ ಚಿತ್ರೀಕರಣ ನಿಂತು ಹೋಗಿತ್ತು. ಆಗ ನಿರ್ಮಾಪಕ ಭರತ್ ಹಣಕಾಸಿನ ಸಮಸ್ಯೆ ಆಗಿದೆ. ಅದಕ್ಕೆ ಚಿತ್ರೀಕರಣ ತಡವಾಗಿದೆ ಅಂತಾ ನಟ ಧ್ರುವನ್ ಬಳಿ ಹೇಳಿದ್ದರು. ಆಗ ಧ್ರುವನ್ ಅವರು ದರ್ಶನ್ ಅವರಿಂದ ನಿರ್ಮಾಪಕರಿಗೆ ಕರೆ ಮಾಡಿಸಿದ್ದರು. ಆ ಸಮಯದಲ್ಲಿ ದರ್ಶನ್, ನಿರ್ಮಾಪಕರಿಗೆ ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಕೆಂಗೇರಿ ಪೊಲೀಸ್ ಠಾಣೆಯಲ್ಲಿ ಈಗ ದೂರು ದಾಖಲಾಗಿದೆ. ಎನ್‌ಸಿಆರ್ ಮಾಡಿಕೊಳ್ಳಲಾಗಿದೆ. ದೂರಿನ ಸಂಬಂಧ ನಾಯಕ ನಟ ಧ್ರುವನ್ ಭಗವಾನ್ ಶ್ರೀ ಕೃಷ್ಣ ಪರಮಾತ್ಮ ಸಿನಿಮಾದ ನಿರ್ದೇಶಕ ಅಂಥೋನಿ, ಸಿನಿಮಾದ ಕ್ಯಾಮರಾಮ್ಯಾನ್ ಅವರ ಜೊತೆ ಠಾಣೆಗೆ ಹೋಗಿ ಹೇಳಿಕೆ ನೀಡಿದ್ದಾರೆ.

ದೂರಿಗೆ ಸಂಬಂಧಿಸಿದಂತೆ ದರ್ಶನ್ ಅವರದ್ದು ಎನ್ನಲಾಗುತ್ತಿರುವ ಆಡಿಯೋ ಒಂದು ಹರಿದಾಡುತ್ತಿದೆ. ಈ ಆಡಿಯೋ ಆಧಾರದ ಮೇಲೆ ಪೊಲೀಸ್ ಠಾಣೆಯಲ್ಲಿ ಚಾಲೆಂಜಿಂಗ್ ಸ್ಟಾರ್ ವಿರುದ್ಧ ದೂರು ದಾಖಲಾಗಿದೆ.

Leave A Reply

Your email address will not be published.