ಬೈಕ್- ಟ್ಯಾಂಕರ್ ಭೀಕರ ಅಪಘಾತ | ಪುತ್ತೂರು ಮೂಲದ ಇಬ್ಬರು ಅದೃಷ್ಟವಶಾತ್ ಪಾರು

ಕೊಟ್ಟಿಗೆಹಾರ : ಟ್ಯಾಂಕರ್ ಮತ್ತು ಬೈಕ್ ಪರಸ್ಪರ ಡಿಕ್ಕಿ ಯಾಗಿ ಬೈಕ್ ನಲಿದ್ದ ಇಬ್ಬರಿಗೆ ಸಣ್ಣ ಪುಟ್ಟ ಗಾಯಗಳಾಗಿ ಅದೃಷ್ಟವಶಾತ್ ಅಪಾಯದಿಂದ ಪಾರಾದ ಘಟನೆಯೊಂದು ರವಿವಾರ ರಾತ್ರಿ ಕೊಟ್ಟಿಗೆಹಾರ ಪಟ್ಟಣದಲ್ಲಿ ಸಂಭವಿಸಿದೆ.
ತಮ್ಮ ಸಂಬಂಧಿಕರ ಮನೆಗೆಂದು ಪುತ್ತೂರಿನಿಂದ ಬಣಕಲ್ ಗೆ ಬೈಕ್ ನಲ್ಲಿ ಬರುತ್ತಿದ್ದ ವೇಳೆ ಎದುರಿಂದ ಬಂದ ಟ್ಯಾಂಕರ್ ಡಿಕ್ಕಿ ಹೊಡೆದಿದೆ ಪರಿಣಾಮ ಬೈಕ್ ನಲ್ಲಿದ್ದ ಇಬ್ಬರು ಸವಾರರು ಸಣ್ಣಪುಟ್ಟ ಗಾಯಗಳಿಂದ ಪಾರಾಗಿದ್ದಾರೆ.
ಬಣಕಲ್ ಠಾಣಾ ವ್ಯಾಪ್ತಿಯಲ್ಲಿ ಅವಘಡ ಸಂಭವಿಸಿದ್ದು ಬಣಕಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ