Shocking news : ಹಸುವಿನ ಜೊತೆ ಅಸ್ವಾಭಾವಿಕ ಲೈಂಗಿಕತೆ ನಡೆಸಿದ ಆರೋಪ : ವಿಕೃತಿ ಮೆರೆದ ಯುವಕನ ಬಂಧನ

ಹಸುಗಳ ಜತೆಗೆ ವಿಕೃತಿ ಮೆರೆದಿದ್ದ ವ್ಯಕ್ತಿಯೋರ್ವನನ್ನು ಚಂದ್ರಾಲೇಔಟ್ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿ ಮದ್ದೂರು ಮೂಲದ ಮಂಜುನಾಥ್(34 ವರ್ಷ). ಈ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

 

ನಾಯಂಡಹಳ್ಳಿ ಬಳಿ ಹಸುಗಳನ್ನು ಸಾಕಿದ್ದ ಶಶಿಕುಮಾರ್, ಬೆಂಗಳೂರು ಯುನಿವರ್ಸಿಟಿ ಕ್ಯಾಂಪಸ್‌ನಲ್ಲಿ ಹಸುಗಳನ್ನು ಮೇಯಲು ಕಟ್ಟುತ್ತಿದ್ದರು. ನಂತರ ಮನೆಗೆ ತೆರಳುತ್ತಿದ್ದರು. ಆದರೆ ಹಸು ಮಾಲೀಕ ಆ ಕಡೆ ಹೋದ ಕೂಡಲೇ ಆರೋಪಿ ಮಂಜುನಾಥ್ ಹಸುಗಳ ಮೇಲೆ ವಿಕೃತಿ ಮೆರೆಯುತ್ತಿದ್ದ. ಹಸುಗಳನ್ನು ಪೊದೆಯಲ್ಲಿ ಎಳೆದೊಯ್ಯುತ್ತಿದ್ದ ಸೈಕೋಪಾಥ್ ಹಸುವಿನ ಕೆಚ್ಚಲನ್ನು ಬಾಯಲ್ಲಿ ಕಚ್ಚುವುದು, ಬಾಲ ಕತ್ತರಿಸಿ ಚಿಂತ್ರಹಿಂಸೆ ನೀಡುತ್ತಿದ್ದ.

ಅಷ್ಟೇ ಅಲ್ಲದೇ ಈ ಮಂಜುನಾಥ ಅದೆಷ್ಟು ವಿಕೃತನಾಗಿ ವರ್ತಿಸುತ್ತಿದ್ದನೆಂದರೆ, ಬಟ್ಟೆ ಬಿಚ್ಚಿ ಬೆತ್ತಲಾಗಿ ಹಸುವಿನೊಂದಿಗೆ ಅನೈಸರ್ಗಿಕ ಲೈಂಗಿಕ ಕ್ರಿಯೆಗೆ ಯತ್ನಿಸಿದ್ದಾನೆ. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರೋ ಚಂದ್ರಾಲೇಔಟ್ ಪೊಲೀಸರು ಆರೋಪಿಯನ್ನು ಬಂಧಿಸಿ ವಿಚಾರಣೆಗೊಳಪಡಿಸಿದ್ದಾರೆ.

Leave A Reply

Your email address will not be published.