ಕಾಮಗಾರಿ ಹಿನ್ನಲೆ ; ಏಳು ದಿನ ಈ ಮಾರ್ಗದಲ್ಲಿ ವಾಹನ ಸಂಚಾರ ಬಂದ್; ಪರ್ಯಾಯ ಮಾರ್ಗ ಹೀಗಿದೆ..

ನೀರಿನ ಕೊಳವೆ ಜೋಡಣೆಯ ಕಾಮಗಾರಿಯು ಅರಮನೆ ರಸ್ತೆಯಲ್ಲಿ ಟೆಂಡರ್ ಕ್ಯೂರ್ ಆ.7ರಿಂದ 13ವರೆಗೆ ನಡೆಯಲಿದೆ. ಈ ಹಿನ್ನಲೆಯಲ್ಲಿ ಅರಮನೆ ರಸ್ತೆಯ ಮೈಸೂರು ಬ್ಯಾಂಕ್ ವೃತ್ತದಿಂದ ಮಹಾರಾಣಿ ಅಂಡರ್‌ಪಾಸ್‌ವರೆಗೂ ಒಂದು ಬದಿಯ ರಸ್ತೆಯನ್ನು ಸಂಪೂರ್ಣ ಬಂದ್ ಮಾಡಿದ್ದು ವಾಹನ ಸಂಚಾರಕ್ಕೆ ಪರ್ಯಾಯ ಮಾರ್ಗ ಕಲ್ಪಿಸಲಾಗಿದೆ ಎಂದು ನಗರ ಸಂಚಾರ ಪೊಲೀಸರು ತಿಳಿಸಿದ್ದಾರೆ.

 

ಕೆ.ಜಿ.ರಸ್ತೆಯ ಮೈಸೂರು ಬ್ಯಾಂಕ್ ವೃತ್ತದಿಂದ ಚಾಲುಕ್ಯ ವೃತ್ತದ ಕಡೆಗೆ ಸಂಚರಿಸುವ ವಾಹನಗಳು, ಮೈಸೂರು ಬ್ಯಾಂಕ್ ವೃತ್ತದಲ್ಲಿ ಬಲಪಥ ರಸ್ತೆಯಲ್ಲಿ (ಪೂರ್ವ ದಿಕ್ಕು) ಚಲಿಸಿ ಸೆಂಟ್ರಲ್ ಕಾಲೇಜು ಬಳಿ ಎಡ ಭಾಗಕ್ಕೆ (ಪಶ್ಚಿಮ ದಿಕ್ಕು) ಪಥ ಬದಲಾಯಿಸಿ ಆನಂತರ ಮಹಾರಾಣಿ ಅಂಡರ್‌ಪಾಸ್ ಮೂಲಕ ಚಾಲುಕ್ಯ ಸರ್ಕಲ್ ತಲುಪಬಹುದು ಎಂದು ಸಂಚಾರ ಪೊಲೀಸರು ಸೂಚಿಸಿದ್ದಾರೆ.

ಚಾಲುಕ್ಯ ವೃತ್ತದಿಂದ ಮೈಸೂರು ಬ್ಯಾಂಕ್ ವೃತ್ತದ ಕಡೆಗೆ ಸಂಚರಿಸುವ ವಾಹನಗಳನ್ನು ಮಹಾರಾಣಿ ಬ್ರಿಡ್ಜ್ ಬಳಿ ಎಡ ತಿರುವು ಪಡೆದು ಶೇಷಾದ್ರಿ ರಸ್ತೆಯ ಮೂಲಕ ಕೆ.ಆರ್. ವೃತ್ತಕ್ಕೆ ತಲುಪಿ ಆನಂತರ ಕೆ.ಆರ್. ವೃತ್ತದಲ್ಲಿ ಬಲ ತಿರುವು ಪಡೆದು ಪೋಸ್ಟ್ ಆಫೀಸ್ ರಸ್ತೆ ಮೂಲಕ ಮೈಸೂರು ಬ್ಯಾಂಕ್ ವೃತ್ತ ತಲುಪಬಹುದು.

Leave A Reply

Your email address will not be published.