ಪ್ರವೀಣ್ ನೆಟ್ಟಾರು ಹತ್ಯೆಗೂ ಮುನ್ನ ಲಿಸ್ಟ್ ನಲ್ಲಿತ್ತು ಹಲವರ ಹೆಸರು!! ಜಿಲ್ಲೆಯ ಹಿಂದೂ ಸಂಘಟನಾ ಸಕ್ರಿಯ ಚತುರರಿಗೆ ಫಿಕ್ಸ್ ಆಗಿದ್ದ ಮುಹೂರ್ತ ತಪ್ಪಿದ್ದೆಲ್ಲಿ!??
ಪುತ್ತೂರು:ರಾಜ್ಯದಲ್ಲೇ ಸಂಚಲನ ಸೃಷ್ಟಿಸಿದ್ದ ಬೆಳ್ಳಾರೆಯಲ್ಲಿ ನಡೆದ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದಲ್ಲಿ ಈಗಾಗಲೇ ಪೊಲೀಸರು ಬಂಧಿಸಿರುವ ಆರೋಪಿಗಳ ವಿಚಾರಣೆಯಲ್ಲಿ ಕೆಲ ಆತಂಕಕಾರಿ ಅಂಶಗಳು ಬೆಳಕಿಗೆ ಬಂದಿವೆ ಎನ್ನುವ ಮಾಹಿತಿಯು ಮೂಲಗಳಿಂದ ತಿಳಿದು ಬಂದಿದೆ.
ಸದ್ಯ ಪೊಲೀಸರ ತೀವ್ರ ವಿಚಾರಣೆಯ ಬಳಿಕ ಹತ್ಯೆ ಪ್ರಕರಣದಲ್ಲಿ ಸ್ಥಳೀಯ ವ್ಯಕ್ತಿಗಳೇ ಭಾಗಿಯಾಗಿರುವ ಮಾಹಿತಿಯೊಂದು ಬಯಲಾಗಿದ್ದು, ಹತ್ಯೆಯ ಬಳಿಕ ಹಂತಕರು ಕೇರಳ ಮೂಲದವರೆನ್ನುವಂತೆ ಬಿಂಬಿಸಲಾಗಿತ್ತು ಎನ್ನಲಾಗಿದೆ. ಕೇರಳ ರೆಜಿಸ್ಟರ್ ಇರುವ ಬೈಕ್ ಬಳಸಿ ಕೃತ್ಯ ಎಸಲಾಗಿದ್ದು, ಹಂತಕರು ಹಾಗೂ ಸಹಕರಿಸಿದವರು ಸ್ಥಳೀಯರೇ ಹೊರತು ಹೊರಗಿನವರಲ್ಲ ಎನ್ನುವ ವಿಚಾರವನ್ನು ಗೃಹ ಸಚಿವ ಅರಗ ಜ್ಞಾನೆಂದ್ರ ಸುದ್ದಿಗೋಷ್ಠಿಯಲ್ಲಿ ಸ್ಪೋಟಕ ಹೇಳಿಕೆಯೊಂದನ್ನು ನೀಡಿದ್ದರು.
ಹತ್ಯೆ ನಡೆಸಿದ ತಂಡವು ಜಿಲ್ಲೆಯ ಇನ್ನೂ ಕೆಲ ಹಿಂದೂ ನಾಯಕರ ಹೆಸರನ್ನು ಲಿಸ್ಟ್ ಮಾಡಿಕೊಂಡಿತ್ತು ಎನ್ನುವ ವಿಚಾರವೂ ಬಯಲಾಗಿದ್ದು, ಹಿಂದೂ ಸಂಘಟನೆಗಳಲ್ಲಿ ಸಕ್ರಿಯರಾಗಿರುವ, ಸಂಘಟನೆಗಳ ಜಾಲತಾಣಗಳಲ್ಲಿ ಹೆಚ್ಚು ಸದ್ದು ಮಾಡುತ್ತಿರುವ, ಪಕ್ಷಕ್ಕಾಗಿ ಬೆವರಿಳಿಸುವ ಕೆಲ ನಾಯಕರ ಹೆಸರುಗಳು ಹಂತಕರ ಪಟ್ಟಿಯಲ್ಲಿತ್ತು ಎನ್ನಲಾಗಿದೆ.
ಅದಲ್ಲದೇ ಸ್ಥಳೀಯವಾಗಿ ಅನುಮಾನ ಬಾರದಂತೆ ಕೇರಳ ನಂಬರ್ ಪ್ಲೇಟ್ ನ ಬೈಕ್ ನ್ನು ಬಳಸಿದ್ದು, ಹತ್ಯೆಗೂ ಕೆಲ ಸಮಯದಿಂದಲೇ ಎಲ್ಲಾ ಮಾಹಿತಿಗಳನ್ನು, ಸುರಕ್ಷತೆಗಳನ್ನು ರೂಢಿಸಿಕೊಳ್ಳಲಾಗಿತ್ತು. ಸ್ಥಳೀಯರೇ ಎಲ್ಲಾ ಮಾಹಿತಿಗಳನ್ನು ಹಂತಕರಿಗೆ ನೀಡಿದ್ದು, ಸಿಸಿ ಟಿವಿ, ಪೊಲೀಸ್ ರೌಂಡ್ಸ್, ಜನಸಂದಣಿ ಮುಂತಾದವುಗಳ ಮಾಹಿತಿಯನ್ನು ಕಲೆ ಹಾಕಿ, ಸರಿಯಾದ ಸಮಯ ನೋಡಿಕೊಂಡು ಮಚ್ಚು ಬೀಸಲಾಗಿದ್ದು, ಹತ್ಯೆಯಲ್ಲಿ ಸ್ಥಳೀಯ ವ್ಯಕ್ತಿಗಳು ಭಾಗಿಯಾಗಿದ್ದಾರೆ ಎನ್ನುವ ಮಾಹಿತಿ ಮೂಲಗಳಿಂದ ತಿಳಿದು ಬಂದಿದೆ.
ಪ್ರಕರಣವನ್ನು ಈಗಾಗಲೇ ಎನ್ ಐ ಎ ತನಿಖೆಗೆ ಒಪ್ಪಿಸಲಾಗಿದ್ದು, ಕೂಲಂಕುಷ, ಸಮಗ್ರ ತನಿಖೆಯ ಬಳಿಕ ಹಂತಕರು ಯಾರು ಹಾಗೂ ಎಷ್ಟು ಹತ್ಯೆಗೆ ಪ್ರಯತ್ನ ನಡೆದಿದೆ ಎನ್ನುವ ವಿಚಾರ ಬಯಲಾಗಲಿದೆ.