ಹೆಬ್ಬಾವನ್ನು ಹೆಗಲ ಮೇಲೆ ಹೊತ್ತೊಯ್ದ ಧೈರ್ಯಶಾಲಿ – ಭಯಾನಕ ವೀಡಿಯೊ ವೈರಲ್

ಜಸ್ಟ್ ಹಾವು ಅಂದ್ರೆನೇ ಸಾಕು ಯಾರಿಗಾದ್ರೂ ಒಮ್ಮೆ ಮೈ ಜುಮ್ ಅನ್ಸುತ್ತೆ. ನಿಂತಲ್ಲಿಂದ ಛಂಗನೇ ಪಕ್ಕಕ್ಕೆ ಒಂದು ಬಾರಿಯಾದರು ಹಾರುತ್ತಾರೆ. ಹಾವಿಗಾಗಿ ಇಷ್ಟೊಂದು ಭಯ ಪಡೋರಾ ಮಧ್ಯೆ ಇಲ್ಲೊಬ್ಬ ಹಾವನ್ನೇ ತನ್ನ ಹೆಗಲ ಮೇಲೆ ಹಾಕಿ ಹೊತ್ತೊಯ್ಯುತ್ತಿದ್ದಾನೆ.

 

ಶಾಕ್ ಆಯ್ತಾ? ಆದ್ರೆ ಇದು ಸತ್ಯ. ಈ ಭಯಾನಕ ದೃಶ್ಯದ ವೀಡಿಯೊ ಎಲ್ಲೆಡೆ ವೈರಲ್ ಆಗಿದ್ದು, ನೋಡಿದವರೆಲ್ಲ ಆತನ ಧೈರ್ಯಕ್ಕೆ ಸಹಭಾಸ್ ಎನ್ನಲೇ ಬೇಕಾಗಿದೆ.

ಹೌದು. ಇಲ್ಲೊಬ್ಬ ವ್ಯಕ್ತಿ ತನ್ನ ಹೆಗಲ ಮೇಲೆ ಹಾವನ್ನು ಹಾಕಿಕೊಂಡು ಹೋಗುತ್ತಿದ್ದಾನೆ. ಅಷ್ಟಕ್ಕೂ ನೀವು ಅಂದುಕೊಂಡಂತೆ ಅದು ಸಾಮಾನ್ಯ ಹಾವಲ್ಲ. ದೈತ್ಯ ಹೆಬ್ಬಾವು. ಅಂತಹ ಅಸಾಮಾನ್ಯ ಹಾವನ್ನು ಪ್ರಾಣಭಯವಿಲ್ಲದೆ, ಹೆಗಲ ಮೇಲೆ ಹೊತ್ತುಕೊಂಡು ಸಾಗುತ್ತಿರುವ ದೃಶ್ಯ ಎಂಥವರನ್ನೂ ಭಯಭೀತಗೊಳಿಸುತ್ತದೆ.

ಇನ್‌ಸ್ಟಾಗ್ರಾಮ್‌ನಲ್ಲಿ ಇದರ ವಿಡಿಯೋ ಹರಿದಾಡುತ್ತಿದ್ದು, ಎಲ್ಲರೂ ನೋಡಿ ಅಚ್ಚರಿ ವ್ಯಕ್ತಪಡಿಸಿದ್ದಾರೆ. ಅದಿಕ್ಕೂ ಮುನ್ನ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿರುವ ಈ ಟ್ರೆಂಡಿಂಗ್ ವಿಡಿಯೋವನ್ನು ನೀವೂ ನೋಡಲೇಬೇಕು.

ವಾಸ್ತವವಾಗಿ, ಈ ವೀಡಿಯೊದಲ್ಲಿ ಒಬ್ಬ ವ್ಯಕ್ತಿಯು ತನ್ನ ಹೆಗಲ ಮೇಲೆ ಅಪಾಯಕಾರಿ ಹೆಬ್ಬಾವನ್ನು ಹೊತ್ತುಕೊಂಡು ಎಲ್ಲೋ ಸಾಗಿಸುತ್ತಿರುವುದನ್ನು ಕಾಣಬಹುದು. ಈ ಹಾವಿನ ಉದ್ದ ಮತ್ತು ತೂಕ ಊಹಿಸಲು ಅಸಾಧ್ಯ ಎಂಬಂತಿದೆ.

ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಅತ್ಯಂತ ವೇಗವಾಗಿ ವೈರಲ್ ಆಗುತ್ತಿದೆ. ಈ ಕೆಲವು ಸೆಕೆಂಡ್‌ಗಳ ವೀಡಿಯೋ ಸಾಮಾಜಿಕ ಮಾಧ್ಯಮ ಬಳಕೆದಾರರನ್ನು ದಿಗ್ಭ್ರಮೆಗೊಳ್ಳುವಂತೆ ಮಾಡಿದೆ. ಇನ್ನು ಈ ವಿಡಿಯೋವನ್ನು ಸಾವಿರಾರು ಮಂದಿ ಲೈಕ್ ಮಾಡಿ, ವಿಭಿನ್ನ ಪ್ರತಿಕ್ರಿಯೆಗಳನ್ನು ನೀಡುತ್ತಿರುವುದು ಕಂಡುಬಂದಿದೆ. ಒಟ್ಟಾರೆ ಆತನ ಧೈರ್ಯಕ್ಕೆ ಚಪ್ಪಾಳೆ ನೀಡಲೇ ಬೇಕು ಅಲ್ವಾ?..

https://www.instagram.com/reel/Cgpt4VDFna-/?utm_source=ig_web_copy_link

Leave A Reply

Your email address will not be published.