ಕೆನರಾ ಬ್ಯಾಂಕ್ ಗ್ರಾಹಕರಿಗೆ ಗುಡ್ ನ್ಯೂಸ್
ನವದೆಹಲಿ: ಕೆನರಾ ಬ್ಯಾಂಕ್ ತನ್ನ ಗ್ರಾಹಕರಿಗೆ ಸಿಹಿ ಸುದ್ದಿ ನೀಡಿದ್ದು, 2 ಕೋಟಿ ರೂ.ಗಿಂತ ಕಡಿಮೆ ಸ್ಥಿರ ಠೇವಣಿಗಳ ಮೇಲಿನ ಬಡ್ಡಿದರವನ್ನು ಹೆಚ್ಚಿಸಿದೆ.
ಬ್ಯಾಂಕ್ ನ ಅಧಿಕೃತ ವೆಬ್ಸೈಟ್ ಪ್ರಕಾರ, ಸ್ಥಿರ ಠೇವಣಿಗಳ ಮೇಲಿನ ಹೊಸ ಬಡ್ಡಿ ದರಗಳು ಆಗಸ್ಟ್ 8, 2022 ರಂದು ಜಾರಿಗೆ ಬರಲಿದೆ. ಪರಿಷ್ಕರಣೆಯ ನಂತರ, ಬ್ಯಾಂಕ್ ಈಗ 7 ದಿನಗಳಿಂದ 10 ವರ್ಷಗಳ ಅವಧಿಯ ಠೇವಣಿಗಳ ಮೇಲೆ ಬಡ್ಡಿದರ ಒದಗಿಸುತ್ತಿದೆ, ಅದು ಸಾಮಾನ್ಯ ಜನರಿಗೆ 2.90 ರಿಂದ 5.75 ಪ್ರತಿಶತ ಮತ್ತು ಹಿರಿಯ ನಾಗರಿಕರಿಗೆ 2.90 ರಿಂದ 6.25 ಪ್ರತಿಶತದವರೆಗೆ ಇರುತ್ತದೆ.
ಬ್ಯಾಂಕ್ 7 ರಿಂದ 45 ದಿನಗಳಲ್ಲಿ ಪಕ್ವವಾಗುವ ಠೇವಣಿಗಳ ಮೇಲೆ ಶೇಕಡ 2.90 ರ ಬಡ್ಡಿದರ, 46 ರಿಂದ 90 ದಿನಗಳಲ್ಲಿ ಪಕ್ವವಾಗುವ ಸ್ಥಿರ ಠೇವಣಿಗಳ ಮೇಲೆ ಶೇಕಡ 4 ರ ಬಡ್ಡಿದರ ನೀಡುವುದನ್ನು ಮುಂದುವರಿಸುತ್ತದೆ. 91 ರಿಂದ 179 ದಿನಗಳ ನಡುವಿನ ಅವಧಿಯ ಸ್ಥಿರ ಠೇವಣಿಗಳು ಶೇಕಡ 4.05 ರ ದರದಲ್ಲಿ ಬಡ್ಡಿ ಪಾವತಿಸಲಾಗುವುದು. 180 ರಿಂದ 269 ದಿನಗಳ ನಡುವಿನ ಅವಧಿಯ ಠೇವಣಿಗಳು ಈಗ ಶೇಕಡ 4.65 ರ ಬಡ್ಡಿದರ ಪಾವತಿಸುತ್ತವೆ, ಈ ಹಿಂದೆ ಶೇಕಡಾ 4.50 ರಷ್ಟಿತ್ತು.
270 ದಿನಗಳಿಂದ ಒಂದು ವರ್ಷಕ್ಕಿಂತ ಕಡಿಮೆ ಅವಧಿಯ ಠೇವಣಿಗಳ ಮೇಲೆ ಶೇಕಡ 4.65 ರ ಬಡ್ಡಿದರ ನೀಡುತ್ತದೆ, ಮೊದಲು ಶೇಕಡಾ 4.55 ರಿಂದ 10 ಬಿಪಿಎಸ್ ಹೆಚ್ಚಳ ಮಾಡಲಾಗಿದೆ. ಒಂದು ವರ್ಷದಲ್ಲಿ ಮೆಚ್ಯೂರ್ ಆಗುವ ಠೇವಣಿಗಳ ಮೇಲಿನ ಬಡ್ಡಿದರವನ್ನು ಕೇವಲ 20 ಬೇಸಿಸ್ ಪಾಯಿಂಟ್ ಗಳಷ್ಟು ಹೆಚ್ಚಿಸಿದ್ದು, ಶೇ. 5.30 ರಿಂದ 5.50 ಕ್ಕೆ ಹೆಚ್ಚಿಸಿದೆ. 333-ದಿನಗಳ ಯೋಜನೆಯ ಬಡ್ಡಿದರವನ್ನು ಶೇಕಡ 5.10 ಕ್ಕೆ ಉಳಿಸಿಕೊಂಡಿದೆ. 1 ವರ್ಷದಿಂದ 2 ವರ್ಷಕ್ಕಿಂತ ಕಡಿಮೆ ಅವಧಿಯ ಠೇವಣಿಗಳ ಮೇಲೆ, ಕೆನರಾ ಬ್ಯಾಂಕ್ ಈಗ 5.55% ರ ಬಡ್ಡಿದರವನ್ನು ನೀಡುತ್ತದೆ, ಇದು ಮೊದಲು 5.40% ರಷ್ಟು ಇತ್ತು.
ಬ್ಯಾಂಕ್ 666 ದಿನಗಳ ಹೊಸ ಅವಧಿಯನ್ನು ಸೇರಿಸಿದೆ, ಅದರ ಮೇಲೆ ಗರಿಷ್ಠ 6 ಶೇಕಡ ಬಡ್ಡಿ ದರ ನೀಡುತ್ತಿದೆ. ಕೆನರಾ ಬ್ಯಾಂಕ್ ಈಗ 2 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ಅವಧಿಯ ಸ್ಥಿರ ಠೇವಣಿಗಳ ಮೇಲೆ 5.60 ಪ್ರತಿಶತದಷ್ಟು ಬಡ್ಡಿದರ ಒದಗಿಸುತ್ತದೆ, ಇದು ಹಿಂದೆ 5.45 ಪ್ರತಿಶತದಿಂದ 15 ಬೇಸಿಸ್ ಪಾಯಿಂಟ್ ಹೆಚ್ಚಳವಾಗಿದೆ. 3 ವರ್ಷ ಅಥವಾ ಅದಕ್ಕಿಂತ ಹೆಚ್ಚು ಆದರೆ 5 ವರ್ಷಗಳಿಗಿಂತ ಕಡಿಮೆ ಅವಧಿಯ ಸ್ಥಿರ ಠೇವಣಿಗಳ ಮೇಲೆ ಶೇಕಡ 5.75 ರ ಬಡ್ಡಿದರವನ್ನು ಒದಗಿಸುತ್ತದೆ, ಈ ಹಿಂದೆ ಶೇಕಡ 5.70 ರಷ್ಟಿತ್ತು,
1.5 ಲಕ್ಷದವರೆಗಿನ ಠೇವಣಿಗಳ ಮೇಲೆ, ಬ್ಯಾಂಕ್ ಕೆನರಾ ಟ್ಯಾಕ್ಸ್ ಸೇವರ್ ಠೇವಣಿ ಯೋಜನೆಗೆ 5.75 ರಷ್ಟು ವಾರ್ಷಿಕ ಬಡ್ಡಿಯನ್ನು ಮತ್ತು ಹಿರಿಯ ನಾಗರಿಕರಿಗೆ 6.25 ಪ್ರತಿಶತವನ್ನು ನೀಡುತ್ತಿದೆ. ಈ ಮೂಲಕ ಗ್ರಾಹಕರಿಗೆ ಸಿಹಿ ಸುದ್ದಿ ನೀಡಿದೆ.