ಟಿವಿಯ ನೇರ ಪ್ರಸಾರ ಕಾರ್ಯಕ್ರಮದಲ್ಲೇ ನಿರೂಪಕಿ ಕೇಳಿದ ಪ್ರಶ್ನೆಗೆ ಉಗುಳಿದ ಮಾಜಿ ಸಚಿವ | ವೀಡಿಯೋ ವೈರಲ್

Share the Article

ಟಿವಿ ಕಾರ್ಯಕ್ರಮದ ಸಂದರ್ಭದಲ್ಲಿ ಮಾಜಿ ಸಚಿವರೊಬ್ಬರು ನಿರೂಪಕಿ ಕೇಳಿದ ಪ್ರಶ್ನೆಗೆ ಮಾತನಾಡುವಾಗ ನೇರ ಪ್ರಸಾರ ಕಾರ್ಯಕ್ರಮದಲ್ಲೇ ಉಗುಳಿದ ಘಟನೆಯೊಂದು ನಡೆದಿದೆ.

ಪಾಕಿಸ್ತಾನದ ಮಾಜಿ ಸಚಿವರಾದ ಶೇಖ್ ರಶೀದ್ ಅಹ್ಮದ್ ಟಿವಿ ಚರ್ಚೆಯ ನೇರ ಪ್ರಸಾರದ ವೇಳೆ ಕ್ಯಾಮೆರಾದ ಎದುರು ಉಗುಳಿದ್ದಾರೆ. ಟಿವಿ ನಿರೂಪಕಿ ಕೇಳಿದ ಪ್ರಶ್ನೆಗೆ ಪಾಕಿಸ್ತಾನದ ಸಚಿವ ರಾಣಾ ಸನಾವುಲ್ಲಾ ಬಗ್ಗೆ ಮಾತನಾಡುವಾಗ ಶೇಖ್ ರಶೀದ್ ಅಹ್ಮದ್ ನೇರ ಪ್ರಸಾರದ ವೇಳೆ ಉಗುಳಿದ್ದಾರೆ. ಲೈವ್ ಟಿವಿ ಕಾರ್ಯಕ್ರಮದಲ್ಲಿ ಈ ರೀತಿ ವರ್ತಿಸಿರುವುದಕ್ಕೆ ಮಾಜಿ ಶಾಸಕನ ವಿರುದ್ಧ ಭಾರೀ ಆಕ್ರೋಶ ವ್ಯಕ್ತವಾಗಿದೆ. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಟಿವಿ ಪ್ರೋಗ್ರಾಮ್ ಚರ್ಚೆ ವೇಳೆ ಅಹ್ಮದ್ ಅವರಿಗೆ ಫೋನ್ ಮಾಡಿದ ನಿರೂಪಕಿ ಪಾಕಿಸ್ತಾನದ ಸಚಿವ
ರಾಣಾ ಸನಾವುಲ್ಲಾ ಬಗ್ಗೆ ಪ್ರಶ್ನೆಯೊಂದನ್ನು ಕೇಳಿದರು, ಆಗ ಮಾಜಿ ಸಚಿವ ಅಹ್ಮದ್ ಸನಾವುಲ್ಲಾ ಅವರು ತೀವ್ರ ಆಕ್ರೋಶರಾಗಿ ವಾಗ್ದಾಳಿ ನಡೆಸಿದರು. “ರಾಣಾ ಸನಾವುಲ್ಲಾನನ್ನು ನಿಯಂತ್ರಿಸಲು ನಾನು ಜನರಲ್ ಕಮರ್ ಬಾಜ್ವಾ ಅವರನ್ನು ಒತ್ತಾಯಿಸುತ್ತೇನೆ. ಯಾರಾದರೂ ಅವನಿಗೆ ಗೌರವದಿಂದ ಸೆಲ್ಯೂಟ್ ಮಾಡಲು ಸಾಧ್ಯವೇ? ಭದ್ರತಾ ಪಡೆಗಳು ಅವನಿಗೆ ಸೆಲ್ಯೂಟ್ ಮಾಡುತ್ತಾರೆಯೇ? ಭದ್ರತಾ ಪಡೆಗಳು ಕೂಡ ಸನಾವುಲ್ಲಾಗೆ ಥೂ ಎಂದು ಉಗುಳುತ್ತವೆ” ಎಂದು ಹೇಳುತ್ತಾ ಅಹ್ಮದ್ ಟಿವಿ ಕ್ಯಾಮೆರಾ ಎದುರು ಎಂಜಲನ್ನು ಉಗುಳಿದ್ದಾರೆ.

ಈ ಘಟನೆಯ ವೀಡಿಯೋವನ್ನು ಪತ್ರಕರ್ತೆ ನೈಲಾ ಇನಾಯತ್ ಅವರು ತಮ್ಮ ಅಧಿಕೃತ ಟ್ವಿಟರ್ ನಲ್ಲಿ ಹಂಚಿಕೊಂಡಿದ್ದಾರೆ. ಶೀಘ್ರದಲ್ಲೇ ಈ ವೀಡಿಯೋ ವೈರಲ್ ಆಗಿದೆ. ಈ ಘಟನೆಯನ್ನು ನೆಟಿಜನ್‌ಗಳು ಖಂಡಿಸಿದ್ದಾರೆ.

Leave A Reply