ಅಗ್ಗದ ಬೆಲೆಯಲ್ಲಿ ಟ್ಯಾಟೂ ಹಾಕಿಸಿಕೊಳ್ಳಲು ಹೋಗಿ HIV ಬರಿಸಿಕೊಂಡ ಯುವಕ ಯುವತಿ !

ಲಕ್ನೋ: ಅಗ್ಗದ ಬೆಲೆಯೆಂದು ರಸ್ತೆ ಬದಿಯಲ್ಲಿ ಹಚ್ಚೆ ಹಾಕಿಸಿಕೊಂಡಿದ್ದ ಇಬ್ಬರಿಗೆ ಹೆಚ್‍ಐವಿ ಸೋಂಕು ಕಾಣಿಸಿಕೊಂಡ ಘಟನೆ ನಡೆದಿದೆ.

 

ಉತ್ತರ ಪ್ರದೇಶದ ವಾರಣಾಸಿಯಲ್ಲಿ ಈ ಘಟನೆ ನಡೆದಿದೆ. ಅಲ್ಲಿನ ಓರ್ವ ಯುವಕ ಹಾಗೂ ಓರ್ವ ಮಹಿಳೆ ಅಗ್ಗದ ಬೆಲೆ ಎಂಬ ಕಾರಣಕ್ಕಾಗಿ ಹಚ್ಚೆ ಹಾಕಿಸಿಕೊಂಡಿದ್ದರು. ಇದಾದ ಕೆಲ ಬಳಿಕ ಟ್ಯಾಟೂ ಹಾಕಿಸಿಕೊಂಡಿದ್ದವರ ಆರೋಗ್ಯವು ಹದಗೆಡಲು ಪ್ರಾರಂಭಿಸಿದೆ. ಅಸ್ವಸ್ವಸ್ಥರಾದ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು.

ಅವರಿಗೆ ಪದೇ ಪದೇ ಜ್ವರ ಬರುತ್ತಿದ್ದನ್ನು ಗಮನಿಸಿದ್ದ ವೈದ್ಯರು ವೈರಲ್ ಟೈಫಾಯಿಡ್, ಮಲೇರಿಯಾ ಸೇರಿದಂತೆ ಹಲವಾರು ಪರೀಕ್ಷೆಗಳನ್ನು ನಡೆಸಲಾದರೂ, ಯಾವುದೇ ರೋಗ ಪತ್ತೆ ಯಾಗಳಿಲ್ಲ. ಆಗಲೂ ಜ್ವರ ಕಡಿಮೆಯಾಗದಿದ್ದಾಗ, ಹೆಚ್‍ಐವಿ ಪರೀಕ್ಷೆಗಳನ್ನು ಮಾಡಲಾಗಿದ್ದು, ಅದು ಪಾಸಿಟಿವ್ ಬಂದಿದೆ. ಇಬ್ಬರಿಗೂ ಹೆಚ್‍ಐವಿ ಇರುವುದು ಸಾಬೀತಾಗಿದೆ.

ತನಿಖೆಯ ಸಂದರ್ಭ, ಅವರು ಯಾವುದೇ ಹೆಚ್‍ಐವಿ ವ್ಯಕ್ತಿಯನ್ನು ಸಂಪರ್ಕಿಸದೇ ಇರುವುದು ಗೊತ್ತಾಗಿದೆ. ಮತ್ತು ಇತ್ತೀಚೆಗೆ ಆ ಪ್ರದೇಶದಲ್ಲಿ ಕೆಲವರು ಕಡಿಮೆ ಬೆಲೆಯಲ್ಲಿ ಸಿಗುವ ಟ್ಯಾಟೂಗಳನ್ನು ಹಾಕಿಸಿಕೊಂಡಿರುವುದು ಬೆಳಕಿಗೆ ಬಂದಿದೆ.

ಹಚ್ಚೆ ಸೂಜಿಗಳು ದುಬಾರಿಯಾಗಿದ್ದು, ಹಣವನ್ನು ಉಳಿಸಲು ಅದೇ ಸೂಜಿಗಳನ್ನು ಮರುಬಳಕೆ ಮಾಡುತ್ತಿದ್ದರು ಟ್ಯಾಟೂ ಪಾರ್ಲರ್‌ನವರು. ಇದೇ ರೀತಿ ಹೆಚ್‍ಐವಿ ಸೋಂಕಿತನಿಗೆ ಬಳಸಿದ್ದ ಸೂಜಿಯನ್ನೇ ಎಲ್ಲರಿಗೂ ಬಳಸಿ ಹಚ್ಚೆ ಹಾಕಿದ್ದಾರೆ ಎನ್ನುವ ವಿಷಯವು ತನಿಖೆ ನಡೆಸಿದಾಗ ಅದಕ್ಕೆ ಬಯಲಾಗಿದೆ. ಈ ಘಟನೆ ಸಂಬಂಧಿಸಿ ಆ ಟ್ಯಾಟೂ ಪಾರ್ಲರ್‌ ಮೇಲೆ ಪ್ರಕರಣ ದಾಖಲಾಗಿದೆ ಮತ್ತು ಇತರ ಅಧಿಕಾರಿಗಳಿಂದ ಎಚ್ಚರಿಕೆ ನೀಡಿದ್ದಾರೆ.

Leave A Reply

Your email address will not be published.