2022 ರ ವಿಶ್ವ ಅಥ್ಲೆಟಿಕ್ಸ್ ನಲ್ಲಿ 200 ಮೀಟರ್ ರೇಸ್ ಓಡುತ್ತಿರುವಾಗ ಚಡ್ಡಿಯ ಸಂದಿನಿಂದ ಇಣುಕಿ ಹಾಕಿ ಅಲ್ಲಾಡಿದ “ಅದು” !

ಒಳ ಉಡುಪಿನ ಕಾರಣದಿಂದಾಗಿ 2022 ರ ವಿಶ್ವ ಅಥ್ಲೆಟಿಕ್ಸ್ U20 ಚಾಂಪಿಯನ್‌ಶಿಪ್‌ನಲ್ಲಿ ಅಥ್ಲೀಟ್ ಓರ್ವ 400 ಮೀಟರ್ ಓಟವನ್ನು ಕಳೆದುಕೊಂಡ ವಿಚಿತ್ರ ಘಟನೆಯ ಬಗ್ಗೆ ನಿಮಗೆ ಗೊತ್ತಾ ?

 

ಇಟಲಿ ಮೂಲದ 18 ವರ್ಷದ ಆಲ್ಬರ್ಟೊ ನೊನಿನೊ ಕೊಲಂಬಿಯಾದ ಕ್ಯಾಲಿಯಲ್ಲಿ ನಡೆದ 400 ಮೀಟರ್ ಡೆಕಾಥ್ಲಾನ್‌ನಲ್ಲಿ ಸ್ಪರ್ಧಿಸುತ್ತಿದ್ದರು. ಓಟದ ಸ್ಪರ್ಧೆ ಶುರುವಾಗಿತ್ತು. ವೇಗದ ಓಟಗಾರ ಆಲ್ಬರ್ಟೊ ನೊನಿನೊ ತನ್ನ ಪ್ರತಿಸ್ಪರ್ಧಿ ಗಳಿಗಿಂತ ವೇಗವಾಗಿ ಆರಂಭಿಕ ಮುನ್ನಡೆಯನ್ನು ಪಡೆದುಕೊಂಡು ಮುನ್ನುಗ್ಗುತ್ತಿದ್ದ. ಎಲ್ಲಾ ರೀತಿಯ ವೇಗದ ಶಾರ್ಟ್ ಡಿಸ್ಟೆನ್ಸ್ ಓಟಕ್ಕೆ ಬೇಕಾದ ಗುಡ್ ಸ್ಟಾರ್ಟ್ ಅನ್ನು ಸಮರ್ಪಕವಾಗಿ ತೆಗೆದುಕೊಂಡ ಆತ ಅತ್ಯಂತ ಉತ್ತಮವಾಗಿ ಓಟ ಪ್ರಾರಂಭಿಸಿದ್ದರು. ಆತ ಓಡುತ್ತಿರುವ ಓಟ ಮತ್ತು ಇತರರನ್ನು ಹಿಂದಕ್ಕೆ ತಳ್ಳಿ ಮಾಡುತ್ತಿದ್ದ ವೇಗವನ್ನು ಕಂಡ ಪ್ರೇಕ್ಷಕರು, ಆತ ಸುಲಭವಾಗಿ ಅ ಪಂದ್ಯ ಗೆಲ್ಲಬಹುದು ಎಂದು ಅಂದುಕೊಂಡಿದ್ದರು. ಆದರೆ ಕೆಲ ಸಮಯದಲ್ಲೇ ಬದಲಾವಣೆ ಕಂಡಿತ್ತು !

ಆಲ್ಬರ್ಟೊ ನೊನಿನೊ ಮಧ್ಯದ ಲೇನ್ ಅನ್ನು ಹಾದುಹೋದ ನಂತರ, ಆತನ ಓಟದಲ್ಲಿ ಹಠಾತ್ ಬದಲಾವಣೆ ಕಾಣಿಸಿಕೊಂಡಿತ್ತು. ಆತ ಗಲಿಬಿಲಿ ಗೊಂಡಂತಿತ್ತು ಮತ್ತು ಪದೇ ಪದೇ ತನ್ನ ಗುಪ್ತಾಂಗದತ್ತ ಕೈ ಹಾಕುತ್ತಿದ್ದ.

ಆ ಸಮಯದಲ್ಲಿ, ವೀಕ್ಷಕರಿಗೆ ಏನು ತಪ್ಪಾಗಿದೆ ಎಂದು ತಿಳಿದಿರಲಿಲ್ಲ, ಆದರೆ ನೋನಿನೊ ವೇಗವು ಸ್ವಲ್ಪ ಕಡಿಮೆಯಾಯಿತು, ಅದು ಆತನ ಪ್ರತಿಸ್ಪರ್ಧಿಗಳು ಅವನನ್ನು ಹಿಂದಿಕ್ಕಲು ಅವಕಾಶ ಮಾಡಿಕೊಟ್ಟ ಹಾಗಾಯಿತು. ನೋಡ ನೋಡುತ್ತಿದ್ದಂತೆ ಒಬ್ಬೊಬ್ಬರಾಗಿ ಆತನನ್ನು ಹಿಂದಿಕ್ಕಿ ಹೋಗಿ ಗುರಿ ತಲುಪಿದರು. ದುರದೃಷ್ಟವಶಾತ್, 51.57 ಸೆಕೆಂಡುಗಳ ಸಮಯದ ದಾಖಲೆಯೊಂದಿಗೆ ಆತನಿಗೆ ಕೊನೆಯ ಸ್ಥಾನ ಲಭ್ಯವಾಯಿತು !

ಓಟಗಾರ ಆಲ್ಬರ್ಟೊ ನೊನಿನೊ ಓಡುತ್ತಿರುವಾಗ ಅವರ ಶಿಶ್ನವು ಅವರ ಚಡ್ಡಿಯಿಂದ ಹೊರಕ್ಕೆ ಬೀಳುತ್ತಲೇ ಇತ್ತು ಎಂದು ಕ್ರೀಡಾ ಪತ್ರಕರ್ತ ಡೇವಿಡ್ ಸ್ಯಾಂಚೆಜ್ ಡಿ ಕ್ಯಾಸ್ಟ್ರೊ ವರದಿ ಮಾಡಿದ್ದಾರೆ. ಆತ ಓಡುವಾಗ, ಹಾಗೆ ಹಾಕಿಕೊಂಡಿದ್ದ ಹೊರಕ್ಕೆ ಇಣುಕಿದ ಶಿಶ್ನವು ಪದೇ ಪದೇ ಅಲ್ಲಾಡಿ ಓಟಕ್ಕೆ ತೊಂದರೆ ಕೊಡುತ್ತಿತ್ತು. ಈ ಘಟನೆಯು ಓಟದ ವೇಳೆ ಸರಿಯಾಗಿ ಓಡಲು ಅವಕಾಶ ನೀಡಲಿಲ್ಲ. 18 ವರ್ಷದ ಈ ಅಥ್ಲೀಟ್ ಸಮಸ್ಯೆಯನ್ನು ನಿಭಾಯಿಸಲು ಪ್ರಯತ್ನಿಸಿ ಓಟ ಮುಂದುವರೆಸಿದ್ದ ಆದರೂ, ಅದ್ಯಾವುದು ಪ್ರಯೋಜನಕ್ಕೆ ಬರಲಿಲ್ಲ. ಓಟದಲ್ಲಿ ಆತ ಸೋಲಬೇಕಾಯಿತು. ಅಸಮರ್ಪಕ ಒಳ ಉಡುಪಿನ ಕಾರಣದಿಂದ ಆಟಗಾರನೊಬ್ಬ ಪಂದ್ಯ ಸೋಲಬೇಕಾದದ್ದು ದುರದೃಷ್ಟಕರ.

ಪೋರ್ಟಲ್ ವರದಿ ಮಾಡಿದಂತೆ, ದುರದೃಷ್ಟಕರ ಘಟನೆಯ ಬಗ್ಗೆ ತೆರೆದುಕೊಳ್ಳಲು ಆಲ್ಬರ್ಟೊ ನೊನಿನೊ ಪಂದ್ಯದ ನಂತರ Instagram ಗೆ ಬಂದು, ಘಟನೆಯ ಬಗ್ಗೆ ಬ್ಲಾಗ್‌ಗಳು ಮತ್ತು ಪೋಸ್ಟ್‌ಗಳಿಗೆ ಲಿಂಕ್‌ಗಳನ್ನು ಕಳುಹಿಸುವುದನ್ನು ನಿಲ್ಲಿಸುವಂತೆ ನೆಟಿಜನ್‌ಗಳನ್ನು ವಿನಂತಿಸಿದರು. ಇದೊಂದು ‘ಅಪಘಾತ’ ಎಂದು ಹೇಳಿದ ಅವರು, ಇಡೀ ಸನ್ನಿವೇಶವು ಅವರಿಗೆ ಈಗ ಒಂದು ಹಾಸ್ಯ ಸನ್ನಿವೇಶದ ರೀತಿ ಕಾಣುತ್ತಿದೆ. ತಮಾಷೆಯಾಗಿದೆ ಎಂದು ಅವರು ವಿವರಿಸಿ, ಆದಾಗ್ಯೂ, ಅವರು ಅಂದು ಪಂದ್ಯವನ್ನು ಮುಗಿಸಿದ ಕೂಡಲೇ, ಅದೊಂದು ‘ಭಯಾನಕ’ ಎನ್ನುವ ಅನುಭವ ನೀಡಿತು ಎಂದು ಹೇಳಿದ್ದಾರೆ.

Leave A Reply

Your email address will not be published.