ಗುಪ್ತಾಂಗದಲ್ಲಿನ ಸಮಸ್ಯೆಗೆ ದಂತ ವೈದ್ಯರ ಬಳಿ ಹೋದ ಗಗನಸಖಿ, ಹಾರಿ ಹೋದ ಪ್ರಾಣ !
ನವದೆಹಲಿ: ತನ್ನ ಖಾಸಗಿ ಅಂಗದ ಸಮಸ್ಯೆಗೆ ಗಗನಸಖಿಯೊಬ್ಬರು ದಂತ ವೈದ್ಯರ ಬಳಿ ಹೋಗಿ ದಾರುಣವಾಗಿ ಮೃತಪಟ್ಟಿರುವ ಘಟನೆ ನಡೆದಿದೆ.
ತನ್ನ ಗುಪ್ತಾಂಗದಲ್ಲಿ ರಕ್ತಸ್ರಾವ ಆಗುತ್ತಿರುವ ಹಿನ್ನೆಲೆಯಲ್ಲಿ ನಾಗಾಲ್ಯಾಂಡ್‌ನ ರೋಸಿ ಸಂಗ್ಯಾ ಎಂಬ ಗಗನಸಖಿಗೆ ಕೂಡಲೇ ಚಿಕಿತ್ಸೆ ಪಡೆಯಬೇಕಿತ್ತು. ಆದರೆ ಅವರಿಗೆ ಯಾರೋ ಆಲ್ಫಾ ಹೆಲ್ತ್ ಕೇರ್‌ನ ವ್ಯವಸ್ಥಾಪಕ ನಿರ್ದೇಶಕ ಡಾ.ಅನುಜ್ ಬಿಸ್ಟೋಮ್ ಮತ್ತು ದಂತವೈದ್ಯೆ ಅಂಜಲಿ ಆಶ್ ಅವರ ಬಳಿ ಹೋಗುವಂತೆ ಹೇಳಿದ್ದಾರೆ. ಇವರು ಸ್ತ್ರೀರೋಗ ತಜ್ಞರು ಇರಬಹುದು ಎಂದು ಭಾವಿಸಿದ ರೋಸಿ ಸಂಷ್ಮಾ ಅವರು, ದಂಪತಿ ಬಳಿ ಚಿಕಿತ್ಸೆಗೆ ಹೋಗಿದ್ದಾರೆ. ಇದರಿಂದ 24 ವರ್ಷದ ಗಗನಸಖಿ ದುರಂತ ಅಂತ್ಯ ಕಂಡಿದ್ದಾರೆ.
ಈ ದುರದೃಷ್ಟದ ಘಟನೆಯು ನವದೆಹಲಿಯ ಗುರು ಗ್ರಾಮದಲ್ಲಿ ನಡೆದಿದೆ. ಈ ಘಟನೆಯ ತನಿಖೆಯನ್ನು ಇದೀಗ ಸಿಬಿಐ ನಡೆಸುತ್ತಿದೆ. ಕೇಂದ್ರ ಗೃಹ ಸಚಿವಾಲಯದ ನಿರ್ದೇಶನದ ಮೇರೆಗೆ ಸಿಬಿಐ, ವೈದ್ಯರ ವಿರುದ್ಧ ಪ್ರಕರಣ ದಾಖಲಿಸಿದೆ. ವೈದ್ಯ ದಂಪತಿ ವಿರುದ್ಧ ಸಿಬಿಐ ಎಫ್‌ಐಆರ್ ದಾಖಲು ಮಾಡಿದ್ದು, ಭಾರತೀಯ ದಂಡ ಸಂಹಿತೆಯ ಸೆಕ್ಷನ್ 304 ಅಡಿಯಲ್ಲಿ ನಿರ್ಲಕ್ಷ್ಯದ ಕಾರಣ ಸಾವು ಪ್ರಕರಣ ದಾಖಲಿಸಲಾಗಿದೆ.
ಮೃತ ರೋಸಿ ಸಂಗ್ಯಾ ಅವರ ಸಂಬಂಧಿ ಸ್ಯಾಮ್ಯುಯೆಲ್ ಸಂಸ್ಮಾ ಅವರು ವೈದ್ಯಕೀಯ ನಿರ್ಲಕ್ಷ್ಯವನ್ನು ಶಂಕಿಸಿ ವೈದ್ಯರು ಮತ್ತು ಇತರ ಆಸ್ಪತ್ರೆ ವಿರುದ್ಧ ದೂರು ದಾಖಲಾದಾಗ ಪ್ರಕರಣ ಬೆಳಕಿಗೆ ಬಂದಿದೆ. ಆಸ್ಪತ್ರೆ ಮತ್ತು ಅದರ ವೈದ್ಯರ ಸಂಪೂರ್ಣ ನಿರ್ಲಕ್ಷ್ಯವು ಸ್ಪಷ್ಟವಾಗಿದೆ’ ಎಂದು ಸಿಬಿಐ ತನ್ನ ಪ್ರಾಥಮಿಕ ವಿಚಾರಣೆಯಲ್ಲಿ ಹೇಳಿದೆ.
ರೋಸಿಯ ಗಂಭೀರ ಸ್ಥಿತಿಯ ಬಗ್ಗೆ ಬಿಟ್ಟೋಯ್‌ಗೆ ತಿಳಿಸಲಾಗಿದ್ದರೂ, ಸ್ತ್ರೀರೋಗ ಸಮಸ್ಯೆಗಳನ್ನು ನಿಭಾಯಿಸಲು ಅನುಭವವಿಲ್ಲದ ದಂತವೈದ್ಯ ಅಶ್‌ಗೆ ಪ್ರಕರಣವನ್ನು ನಿಭಾಯಿಸಲು ಅವರು ಸೂಚನೆಗಳನ್ನು ನೀಡಿದರು ಎಂದು ತನಿಖೆಯಿಂದ ತಿಳಿದುಬಂದಿದೆ. ಜೀವದ ಜತೆ ಆತ ಆಡಿದ ವೃತ್ತಿಪರ ಡಾಕ್ಟರ್ ಗಳ ವಿರುದ್ಧ ಈಗ ಸಿಬಿಐ ತನಿಖೆ ಚುರುಕುಗೊಳಿಸಿದೆ.