ರಾಜ್ಯ ರಾಜಧಾನಿಯಲ್ಲಿ ಮಳೆಯ ಅಬ್ಬರ | 3 ಅಂತಸ್ತಿನ “ಕಟ್ಟಡ” ಕುಸಿತ

ರಾಜ್ಯದಲ್ಲಿ ಮಳೆಯ ಅಬ್ಬರ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ನಿನ್ನೆ ಕೂಡಾ ಮಳೆ ಅವಾಂತರ ಹೆಚ್ಚಾಗಿದ್ದು, ಬೆಂಗಳೂರಿನ 3 ಅಂತಸ್ತಿನ ಕಟ್ಟಡ ಕುಸಿತಗೊಂಡಿದ್ದು ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ಎಂಬ ಮಾಹಿತಿ ಲಭ್ಯವಾಗಿದೆ.

ಅವೆನ್ಯೂ ರಸ್ತೆಯ ಬೆಳ್ಳಿ ಬಸವ ದೇಗುಲ ರಸ್ತೆ ಬಳಿ 3 ಅಂತಸ್ತಿನ ಕಟ್ಟಡ ಧರೆಗುರುಳಿದ ಘಟನೆ ನಡೆದಿದೆ. ಭಾರೀ ಮಳೆಗೆ ಈ ಘಟನೆ ಸಂಭವಿಸಿದೆ. ಭಂಢಾರಿ ಎಂಬುರವರಿಗೆ ಸೇರಿದ ಕಟ್ಟಡ ಇದಾಗಿತ್ತು. ಪ್ಲಾಸ್ಟಿಕ್ ಮತ್ತು ಗಿಫ್ಟ್ಗಳನ್ನು ಮಾರಾಟ ಮಾಡುತ್ತಿದ್ದ ಅಂಗಡಿಯಿದ್ದ ಕಟ್ಟವಾಗಿತ್ತು. ಅದೃಷ್ಟವಾಷತ್ ಯಾವುದೇ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.

Leave A Reply

Your email address will not be published.