ಕನಸಿನ ರಾಣಿ ಮಾಲಾಶ್ರೀ ಮಗಳು ದರ್ಶನ್ ಹೊಸ ಫಿಲ್ಮ್ ನಲ್ಲಿ ಹೀರೋಯಿನ್ ಆಗಿ ಆಯ್ಕೆ!!!

ಕನ್ನಡ ಚಿತ್ರರಂಗದ ಲೇಡಿ ಸೂಪರ್ ಸ್ಟಾರ್ ಆಗಿ 90ರ ದಶಕದಲ್ಲಿ ಆಳಿದ ಕನಸಿನ ರಾಣಿ ಮಾಲಾಶ್ರೀಯವರ ಮಗಳು ರಾಧನಾ ರಾಮ್ ನಾಯಕಿಯಾಗಿ ಸ್ಯಾಂಡಲ್ ವುಡ್ ಗೆ ಎಂಟ್ರಿ ನೀಡುತ್ತಿದ್ದಾರೆ. ಅಷ್ಟೇ ಅಲ್ಲದೆ, ಚಾಲೆಂಜಿಂಗ್ ಸ್ಟಾರ್ ದರ್ಶನ್ 56ನೇ ಸಿನಿಮಾದಲ್ಲಿ ಮಾಲಾಶ್ರೀ ಪುತ್ರಿ ಚಿತ್ರರಂಗ ಪ್ರವೇಶ ಮಾಡುತ್ತಿದ್ದಾರೆ. ಈಗಾಗಲೇ ಮೊದಲ ಸಿನಿಮಾದ ಮುಹೂರ್ತ ಕೂಡ ಫಿಕ್ಸ್ ಆಗಿದೆ.

ವರಮಹಾಲಕ್ಷ್ಮೀ ಹಬ್ಬದ ಪ್ರಯುಕ್ತ ಶುಕ್ರವಾರ ಪ್ರಾರಂಭವಾದ ರಾಕ್​ಲೈನ್ ವೆಂಕಟೇಶ್ ನಿರ್ವಣದ ಹೊಸ ಚಿತ್ರದ ಮೂಲಕ ಅನನ್ಯ ಎಂಬ ಮೂಲ ಹೆಸರನ್ನು ಬದಲಿಸಿ, ರಾಧನಾ ರಾಮ್ ಎಂಬ ಹೆಸರಿನಲ್ಲಿ ಪದಾರ್ಪಣೆ ಮಾಡಿದ್ದಾರೆ. ರಾಕ್‌ಲೈನ್ ವೆಂಕಟೇಶ್ ನಿರ್ಮಾಣದ ಮತ್ತು ತರುಣ್ ಕಿಶೋರ್ ಸುಧೀರ್ ನಿರ್ದೇಶನದ ಬಿಗ್ ಬಜೆಜ್ ಸಿನಿಮಾದಲ್ಲಿ ರಾಧನಾ ರಾಮ್ ನಾಯಕಿಯಾಗಿ ಕಾಣಿಸಿಕೊಳ್ತಿದ್ದಾರೆ. ಸದ್ಯ ಚಿತ್ರದ ರಾಧನಾ ಲುಕ್ ಕೂಡ ರಿವೀಲ್ ಆಗಿದ್ದು, ನಟಿಯ ಲುಕ್ ಅಭಿಮಾನಿಗಳ ಗಮನ ಸೆಳೆಯುತ್ತಿದೆ. ತಮ್ಮ ಮೊದಲ ಚಿತ್ರದಲ್ಲಿಯೇ ಪವರ್‌ಫುಲ್ ಪಾತ್ರದಲ್ಲಿ ಕಾಣಿಸಿಕೊಳ್ತಿದ್ದಾರೆ. ದರ್ಶನ್ ಮತ್ತು ತರುಣ್ ಸುಧೀರ್ ಕಾಂಬಿನೇಷನ್ ನ ಮತ್ತೊಂದು ಚಿತ್ರವಿದಾಗಿದೆ.

ಕನಕಪುರ ರಸ್ತೆಯಲ್ಲಿರುವ ರವಿಶಂಕರ್ ಗುರೂಜಿ ಆಶ್ರಮದಲ್ಲಿ ಆಗಸ್ಟ್ 05 ರ ಬೆಳಗ್ಗೆ ‘D56’ ಸಿನಿಮಾ ಮುಹೂರ್ತ ನೆರವೇರಿದೆ. ಚಾಲೆಂಜಿಂಗ್ ಸ್ಟಾರ್ ದರ್ಶನ್, ನಿರ್ದೇಶಕ ತರುಣ್ ಸುಧೀರ್, ನಿರ್ಮಾಪಕ ರಾಕ್‌ಲೈನ್‌ ವೆಂಕಟೇಶ್, ನಟ ಮಾಲಾಶ್ರೀ ಹಾಗೂ ಅವರ ಪುತ್ರಿ ರಾಧನಾ ಪೂಜೆಯಲ್ಲಿ ಭಾಗಿಯಾಗಿದ್ದರು.

ರಾಧನಾಗೆ ಈ ಚಿತ್ರದಲ್ಲಿ ನಟಿಸುವುದಕ್ಕೆ ಬಹಳ ಅನಿರೀಕ್ಷಿತವಾಗಿ ಅವಕಾಶ ಸಿಕ್ಕಿತ್ತಂತೆ. ಈ ಕುರಿತು ಮಾತನಾಡುವ ಅವರು, ‘ಈ ಚಿತ್ರದಲ್ಲಿ ನಟಿಸುತ್ತಿರುವ ವಿಷಯವನ್ನು ಇನ್ನೂ ಅರಗಿಸಿಕೊಳ್ಳುವುದಕ್ಕೆ ಸಾಧ್ಯವಾಗುತ್ತಿಲ್ಲ. ನನಗೆ ನಟಿಸುವ ಆಸೆ ಇದೆ. ಚಿಕ್ಕವಳಿದ್ದಾಗ ಬಹಳ ನಾಚಿಕೆ ಇತ್ತು. ಎರಡು ವರ್ಷಗಳ ಕಾಲ ಸಾಕಷ್ಟು ತರಬೇತಿ ಪಡೆದು ಕ್ಯಾಮೆರಾ ಮುಂದೆ ನಿಲ್ಲುತ್ತಿದ್ದೇನೆ. ಜತೆಗೆ ಚಿತ್ರಕ್ಕೆ ಸಂಬಂಧಿಸಿದ ವರ್ಕ್​ಶಾಪ್​ನಲ್ಲೂ ಭಾಗವಹಿಸುತ್ತಿದ್ದೇನೆ’ ಎನ್ನುತ್ತಾರೆ.

ನನಗೆ ಬದುಕು ಕೊಟ್ಟ ಚಿತ್ರರಂಗಕ್ಕೆ ಈಗ ನನ್ನ ಮಗಳು ಸಹ ಕಾಲಿಡುತ್ತಿದ್ದಾಳೆ ಎನ್ನುತ್ತಲೇ ಮಾತು ಪ್ರಾರಂಭಿಸುವ ಮಾಲಾಶ್ರೀ, ‘ನನಗೆ ಎಷ್ಟು ಪ್ರೀತಿ ತೋರಿಸಿದ್ದೀರೋ, ನನ್ನ ಮಗಳಿಗೆ ಅದಕ್ಕಿಂತ ಹೆಚ್ಚು ಪ್ರೀತಿ ತೋರಿಸಿ ಎಂದು ದುರಾಸೆಯಿಂದ ಕೇಳಿಕೊಳ್ಳುತ್ತೇನೆ’ ಎನ್ನುತ್ತಾರೆ. ನಾನು ‘ನಂಜುಂಡಿ ಕಲ್ಯಾಣ’ ಮಾಡಿದಾಗ 15 ವರ್ಷದವಳಾಗಿದ್ದೆ. ಅವಳಿಗೀಗ 21. ರಾಕ್​ಲೈನ್ ನನ್ನ ಸಿನಿಮಾ ಮೂಲಕ ಚಿತ್ರ ನಿರ್ಮಾಣ ಶುರು ಮಾಡಿದರು. ಈಗ ನನ್ನ ಮಗಳು ಅವರ ಚಿತ್ರದ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಡುತ್ತಿದ್ದಾಳೆ. ಒಂದೊಳ್ಳೆಯ ತಂಡದಿಂದ ಅವಳು ಚಿತ್ರರಂಗಕ್ಕೆ ಬರುತ್ತಿದ್ದಾಳೆ ಎಂಬ ಖುಷಿ ಇದೆ’ ಎನ್ನುತ್ತಾರೆ ಮಾಲಾಶ್ರೀ.

ಮಾಲಾಶ್ರೀ ಮತ್ತು ರಾಮು ದಂಪತಿ ಸಾಕಷ್ಟು ವರ್ಷಗಳಿಂದ ಕಲಾಸೇವೆ ಮಾಡುತ್ತಲ್ಲೇ ಬಂದವರು. ಇದೀಗ ಈ ಕುಟುಂಬದಿಂದ ಜ್ಯೂ.ಮಾಲಾಶ್ರೀ ರಾಧನಾ ರಾಮ್ ಕೂಡ ಚಿತ್ರರಂಗದಲ್ಲಿ ಮಿಂಚಲು ಸಕಲ ತಯಾರಿ ಮಾಡಿಕೊಂಡು ಬಂದಿದ್ದಾರೆ.

14ನೇ ವಯಸ್ಸಿನವರಿದ್ದಾಗ ಅಭಿನಯಿಸಬೇಕು ಎಂದು ಅನನ್ಯ ಆಸೆಪಟ್ಟರಂತೆ. ‘ಮೊದಲು ಫೋಟೋಶೂಟ್ ಮಾಡಿಸಿದೆ. ಫೋಟೋಜೆನಿಕ್ ಅಂತ ಗೊತ್ತಾದ ಮೇಲೆ, ಆಕೆ ಜತೆಗೆ ಮಾತನಾಡಿದೆ. ಅವಳಿಗೆ ನಟನೆ ಪ್ಯಾಶನ್ ಎಂದು ಗೊತ್ತಾಯಿತು. ಮುಂಬೈನಲ್ಲಿ ನಟನೆ, ಡ್ಯಾನ್ಸ್ ತರಬೇತಿ ಪಡೆದಿದ್ದಾಳೆ. ನಾಳೆ ಸ್ಕ್ರೀನ್ ಮೇಲೆ ಕಾಣಿಸಿಕೊಂಡಾಗ, ಸಹಜವಾಗಿಯೇ ನನ್ನ ಮತ್ತು ಅವಳ ನಡುವೆ ಹೋಲಿಕೆಗಳು ಇರುತ್ತವೆ. ಆದರೆ, ಅವಳು ತನ್ನ ಹೆಸರಿನಿಂದ ಗುರುತಿಸಿಕೊಳ್ಳಬೇಕೇ ಹೊರತು, ನನ್ನ ಹೆಸರಿನಿಂದಲ್ಲ. ಹಾಗಾಗಿ, ಅದಕ್ಕೆ ಕಷ್ಟಪಡಬೇಕು. ಅದರಂತೆ ಸಾಕಷ್ಟು ಕಷ್ಟಪಡುತ್ತಿದ್ದಾಳೆ. ಅವಳು ತುಂಬಾ ನಾಚಿಕೆ ಸ್ವಭಾವದವಳು. ನಟಿಯಾಗಬೇಕು ಎಂದಾಗ, ಅವಳಿಂದ ಸಾಧ್ಯವಾ ಎಂದು ಆಶ್ಚರ್ಯವಾಗಿತ್ತು. ಈಗ ಅವಳು ನಟಿಸುತ್ತಿರುವುದು ಬಹಳ ಖುಷಿಯಾಗುತ್ತಿದೆ’ ಎನ್ನುತ್ತಾರೆ ಮಾಲಾಶ್ರೀ.

ಇನ್ನು, ಅನನ್ಯ ಎಂಬ ಹೆಸರನ್ನು ರಾಧನಾ ರಾಮ್ ಎಂದು ಬದಲಾಯಿಸಿದ್ದಕ್ಕೆ ಕಾರಣ, ‘ರ’ ಸೆಂಟಿಮೆಂಟ್ ಇರಬಹುದಾ? ಎಂದರೆ, ಇಲ್ಲ ಎಂಬ ಉತ್ತರ ಬರುತ್ತದೆ. ‘ಚಿತ್ರರಂಗಕ್ಕೆ ಬಂದಾಗ ಹೆಸರು ಬದಲಾಯಿಸೋಣ ಎಂದು ಐಡಿಯಾ ಕೊಟ್ಟಿದ್ದೇ ರಾಮು. ಏನಾದರೂ ವಿಶೇಷವಾದ ಹೆಸರು ಬೇಕು ಎಂದು ರ್ಚಚಿಸಿದಾಗ, ಸಿಕ್ಕಿದ್ದೇ ಈ ಹೆಸರು. ಇದು ‘ರಾ’ ಸೆಂಟಿಮೆಂಟ್ ಅಲ್ಲ, ರಾಧನಾ ಎಂಬ ಹೆಸರು ಚೆನ್ನಾಗಿದೆ ಎಂಬ ಕಾರಣಕ್ಕೆ ಈ ಹೆಸರಿಡಲಾಗಿದೆ’ ಎಂದು ಹೇಳಿದ್ದಾರೆ ಮಾಲಾಶ್ರೀ.

ನಂಜುಂಡಿ ಕಲ್ಯಾಣ’ ಸಿನಿಮಾದಲ್ಲಿ ಮಾಲಾಶ್ರೀ ಹೀರೊಯಿನ್ ಆದಾಗ, ಅವರಿಗೆ ಕೇವಲ 15 ವರ್ಷ. ಈಗ ಅವರ ಪುತ್ರಿ ರಾಧನಾ ರಾಮ್ ಚಿತ್ರರಂಗ ಪ್ರವೇಶ ಮಾಡಿದ್ದಾರೆ. ಹೀಗಾಗಿ ಅವರ ವಯಸ್ಸಿನ ಬಗ್ಗೆನೂ ಚರ್ಚೆಯಾಗಿತ್ತು. ಅದಕ್ಕೆ ಮಾಲಾಶ್ರೀಯವರೇ ಉತ್ತರ ನೀಡಿದ್ದಾರೆ. ‘ನಾನು ನಂಜುಂಡಿ ಕಲ್ಯಾಣ ಸಿನಿಮಾ ಮಾಡುವಾಗ ನನಗೆ 15 ವರ್ಷ. ಆಗ ತುಂಬಾ ಚಿಕ್ಕವಳಿದ್ದೆ. ನನ್ನ ಮಗಳಿಗೀಗ 21 ವರ್ಷ. ಈಗ ಅವರು ಸಿನಿಮಾ ಮಾಡುತ್ತಿದ್ದಾಳೆ. ನನ್ನ ಜೊತೆ ಮೊದಲು ರಾಕ್‌ಲೈನ್ ಪ್ರೊಡಕ್ಷನ್ ಸಿನಿಮಾ ಮಾಡಿದ್ದರು. ಈಗ ನನ್ನ ಮಗಳು ಮೊದಲ ಸಿನಿಮಾವನ್ನು ಅವರ ಪ್ರೊಡಕ್ಷನ್‌ನಲ್ಲಿ ಶುರು ಮಾಡಿದ್ದಾರೆ. ಅದರಲ್ಲೂ ದರ್ಶನ್ ಸಿನಿಮಾದೊಂದಿಗೆ ಲಾಂಚ್ ಆಗ್ತಿದ್ದಾರೆ ಅಂದಾಗ ತುಂಬಾನೇ ಖುಷಿಯಾಗಿದೆ.’ ಎನ್ನುತ್ತಾರೆ ಮಾಲಾಶ್ರೀ.

ದಶಕಗಳ ಕಾಲ ಕನ್ನಡ ಪ್ರೇಕ್ಷಕರನ್ನು ರಂಜಿಸಿ ಮೋಡಿ ಮಾಡಿದ್ದ ಮಾಲಾಶ್ರೀಯವರ ಮಗಳು ಕೂಡ ಸ್ಯಾಂಡಲ್ ವುಡ್ ನಲ್ಲಿ ಕಮಾಲ್ ಮಾಡಲಿದ್ದಾರೆಯೇ ಎಂದು ನೋಡಬೇಕಿದೆ. ತಾಯಿ ಮಾಲಾಶ್ರೀ ಅಂತೆಯೇ ನಾಯಕಿಯಾಗಿ ಮಿಂಚಲಿ ಎಂಬುದೇ ಅಭಿಮಾನಿಗಳ ಆಶಯ.

Leave A Reply

Your email address will not be published.