ನಿರೂಪಕಿ ಅನುಶ್ರೀಗೆ ಸ್ಪೆಷಲ್ ರಿಕ್ವೆಸ್ಟ್ ಮಾಡಿದ ನಮ್ಮ ಫೇಮಸ್ ಕಾಫಿ ನಾಡು ಚಂದು ; ಅಷ್ಟಕ್ಕೂ ಆತನ ಬೇಡಿಕೆ ಏನು ಗೊತ್ತಾ?
ಸೋಶಿಯಲ್ ಮೀಡಿಯಾ ತೆರೆದ್ರೆ ಸಾಕು ಎಲ್ಲೆಲ್ಲೂ ಇವರದ್ದೇ ಹವಾ.. ಯಾರು ಅಂತ ಗೊತ್ತಾಗಿಲ್ವ. ಅವ್ರೆ ನಮ್ಮ ‘ಹ್ಯಾಪಿ ಬರ್ತ್ ಡೇ’ ಸಿಂಗರ್. ಅದೇ ನಮ್ಮ ಕಾಫಿನಾಡು ಚಂದು. ಹೌದು. ಸದ್ಯ ಎಲ್ಲರ ಮನ ಗೆದ್ದಿರುವ ಕಾಫಿ ನಾಡು ಚಂದು ಎಲ್ಲರ ಬರ್ತ್ ಡೇ ಅಂದು ಸ್ಟೇಟಸ್ ನಲ್ಲಿ ಮಿಂಚುತ್ತಿರುತ್ತಾರೆ. ಯಾರದಾದ್ರೂ ಬರ್ತ್ ಡೇ ಇದ್ರೆ ಸಾಕು ಎಲ್ಲರ ಬಾಯಲ್ಲಿ ಕಾಫಿನಾಡು ಚಂದುದೇ ಹಾಡುಗಳು. ಅಷ್ಟರ ಮಟ್ಟಿಗೆ ಸೋಷಿಯಲ್ ಮೀಡಿಯಾ ಸೆನ್ಸೇಷನಲ್ ಸ್ಟಾರ್ ಆಗ್ಬಿಟ್ಟಿದ್ದಾರೆ.
ಅಷ್ಟೇ ಯಾಕೆ, ಈಗ ಕಾಫಿ ನಾಡು ಚಂದು ಸೆಲೆಬ್ರಿಟಿಯೇ ಆಗಿಬಿಟ್ಟಿದ್ದಾರೆ. ಬರ್ತ್ ಡೇ ಸಾಂಗ್ ನಿಂದಲೇ ಮಿಂಚಿನ ವೇಗದಲ್ಲಿ ಫೇಮಸ್ ಆಗಿದ್ದು, ಅವರ ಹಾಡು, ಕಾಮಿಡಿಗೆ ಜನ ಬಿದ್ದು-ಬಿದ್ದು ನಗುತ್ತಾರೆ. ತಮ್ಮ ವಿಭಿನ್ನ ಶೈಲಿಯ ಹಾಡುಗಾರಿಕೆ ಎಲ್ಲೆಡೆ ಫೇಮಸ್ ಆಗಿರುವ ಕಾಫಿನಾಡು ಚಂದು, ಇದೀಗ ನಿರೂಪಕಿ ಅನುಶ್ರೀ ಮುಂದೆ ಮಹತ್ವದ ಬೇಡಿಕೆಯೊಂದನ್ನು ಇಟ್ಟಿದ್ದಾರೆ.
ಹೌದು. ನಾನು ಪುನೀತಣ್ಣ, ಶಿವಣ್ಣನ ಅಭಿಮಾನಿ ಎಂದು ಹಾಡು ಹಾಡುತ್ತಲೇ ಶಿವರಾಜ್ ಕುಮಾರ್ ಅವರನ್ನ ಭೇಟಿ ಮಾಡಿಸುವಂತೆ ಅನುಶ್ರೀಗೆ ಮನವಿ ಮಾಡಿದ್ದಾರೆ. ವಿಶೇಷ ಹಾಡಿನ ಮೂಲಕ ಶಿವರಾಜ್ ಕುಮಾರ್ ಅವರನ್ನು ಭೇಟಿ ಮಾಡಿಸುವಂತೆ ಕೇಳಿಕೊಂಡಿದ್ದಾರೆ. ಆದ್ರೆ, ಇವರ ಬೇಡಿಕೆ ಮಾತ್ರ ನೆರವೇರುತ್ತಾ ಎಂದು ಅವರ ಮುಂದಿನ ಹಾಡಿನಲ್ಲಿ ನೋಡಬೇಕೋ ಏನೋ..
ಒಟ್ಟಾರೆ, ಲಕ್ಷಗಟ್ಟಲೇ ಪಾಲೋವರ್ಸ್ ಹೊಂದಿದ್ದು, ಕನ್ನಡದ ಹಲವು ಸೆಲೆಬ್ರಿಟಿಗಳನ್ನ ಹಿಂದಿಕ್ಕಿದ್ದಾರೆ. ಪುನೀತಣ್ಣ ಹಾಗೂ ಶಿವಣ್ಣನವರ ಅಭಿಮಾನಿ’ ಎನ್ನುತ್ತಾ ವಿಡಿಯೋದಲ್ಲಿ ಅಣ್ಣ ನಿಮ್ಮನ್ನ ನೋಡ್ಬೇಕು ಅಣ್ಣ ಅಂತೆಲ್ಲಾ ಎಮೋಷನಲ್ ಆಗಿ ಹಾಡು ಹಾಡಿದ್ದಾರೆ ಚಂದು. ಬೇರೆಯವರ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳ ಹಾಡು ಹಾಡುತ್ತ, ಕಾಮಿಡಿ, ಡೈಲಾಗ್, ಹಾಡು, ಸಮಾಜಮುಖಿ ಕೆಲಸ ಮಾಡುವ ಮೂಲಕ ಇವರು ಜನರಿಗೆ ಚಿರಪರಿಚಯಿತರಾಗಿದ್ದಾರೆ.
ಚಂದು, ಮೂಲತಃ ಚಿಕ್ಕಮಗಳೂರಿನ ಮೂಡಗೆರೆಯ, ಮಲ್ಲಂದೂರಿನ ಭಾಗಮನೆ ಆಸುಪಾಸಿನವರು. ಸಾಮಾಜಿಕ ಜಾಲತಾಣಗಳಲ್ಲಿ ಕಾಫಿ ನಾಡು ಚಂದು ಎಂದು ಈಗ ಸಖತ್ ಫೇಮಸ್ ಆಗಿದ್ದಾರೆ. ಕಾಫಿ ನಾಡು ಚಂದು ವೃತ್ತಿಯಲ್ಲಿ ಚಿಕ್ಕ ಆಟೋ ಡ್ರೈವರ್ ಆಗಿ ಕೆಲಸ ಮಾಡಿ, ತಮ್ಮ ಜೀವನವನ್ನು ಸಾಗಿಸುತ್ತಿದ್ದಾರೆ.