Accenture recruitment ; ಪದವೀಧರರಿಗೆ ಅವಕಾಶ

ಕಂಪನಿಯಲ್ಲಿ ಕೆಲಸ ಮಾಡುವ ಆಸಕ್ತಿ ಹೊಂದಿರುವವರಿಗೆ, ಐಟಿ ದಿಗ್ಗಜ ಕಂಪನಿಗಳಲ್ಲಿ ಒಂದಾದ ಆಕ್ಸೆಂಚರ್ ವಿವಿಧ ಪದವೀಧರ ಅಭ್ಯರ್ಥಿಗಳ​ ನೇಮಕಾತಿಗೆ ಮುಂದಾಗಿದೆ. ಬೆಂಗಳೂರು ಸೇರಿದಂತೆ ದೇಶದಲ್ಲಿ ವಿವಿಧ ನಗರಗಳಲ್ಲಿ ಈ ನೇಮಕಾತಿ ನಡೆಯಲಿದೆ.

 

ಸಂಸ್ಥೆ : ಆಕ್ಸೆಂಚರ್ (Accenture)
ಹುದ್ದೆ :  ಅಸೋಸಿಯೇಟ್​ ಸಾಫ್ಟ್​ವೇರ್​ ಇಂಜಿನಿಯರ್ ವಿದ್ಯಾರ್ಹತೆ : ಬಿಇ, ಬಿಟೆಕ್​, ಎಂಸಿಎ ಮತ್ತು ಎಂಎಸ್ಸಿ
ಒಟ್ಟು ಹುದ್ದೆ : ನಿಗದಿಪಡಿಸಿಲ್ಲ
ಕಾರ್ಯ ನಿರ್ವಹಣೆ ಸ್ಥಳ : ಬೆಂಗಳೂರು, ಹೈದರಾಬಾದ್, ಪುಣೆ, ಮುಂಬೈ, ಚೆನ್ನೈ, ಗುರ್ಗಾಂವ್, ಕೋಲ್ಕತ್ತಾ
ವೇತನ    :  450000 ರೂ ಮಾಸಿಕ

ಶೈಕ್ಷಣಿಕ ಅರ್ಹತೆ: ಈ ಹುದ್ದೆಗೆ ಅರ್ಜಿ ಸಲ್ಲಿಸ ಬಯಸುವ ಅಭ್ಯರ್ಥಿಗಳು ಅಧಿಕೃತ ವಿಶ್ವ ವಿದ್ಯಾಲಯ ಅಥವಾ ಮಂಡಳಿಯಿಂದ ಬಿಇ, ಬಿಟೆಕ್​, ಎಂಇ, ಎಂಟೆಕ್​, ಎಂಸಿಎ ಅಥವಾ ಎಂಎಸ್ಸಿ ಪದವಿಯನ್ನು ಪಡೆದಿರಬೇಕು.

ಅರ್ಜಿ ಸಲ್ಲಿಕೆ: ಆನ್​ಲೈನ್​ ಮೂಲಕ

ವಯೋಮಿತಿ: ಆಕ್ಸೆಂಚರ್​​​ ನಿಯಮದ ಅನುಸಾರ

ಆಯ್ಕೆ ಪ್ರಕ್ರಿಯೆ: ಲಿಖಿತ ಪರೀಕ್ಷೆ ಮತ್ತು ಸಂದರ್ಶನ

ಹುದ್ದೆ ಕುರಿತ ವಿವರ:
*ಪೈಥಾನ್, ಪರ್ಲ್, ಗೋ, ನೋಡ್, ಜಾವಾ ಒಂದು ಅಥವಾ ಹೆಚ್ಚಿನ ಭಾಷೆಗಳಲ್ಲಿ ಪ್ರವೇಶ ಮಟ್ಟದ ಕೋಡಿಂಗ್ ಪರಿಣತಿ ಹೊಂದಿರಬೇಕು.
*ಅಲ್ಗಾರಿದಮ್‌ಗಳು, ಡೇಟಾ ರಚನೆಗಳು, ಸ್ಕ್ರಿಪ್ಟಿಂಗ್ ಮತ್ತು ಸಾಫ್ಟ್‌ವೇರ್ ವಿನ್ಯಾಸ ಅಭ್ಯಾಸಗಳನ್ನು ಬರೆಯುವುದು, ಅರ್ಥಮಾಡಿಕೊಳ್ಳಬೇಕು.
*ಅಭ್ಯರ್ಥಿಯು 11 ತಿಂಗಳಿಗಿಂತ ಹೆಚ್ಚಿನ ಅನುಭವವನ್ನು ಹೊಂದಿರಬಾರದು
*ಅಭ್ಯರ್ಥಿಗಳು ಭಾರತೀಯ ಪ್ರಜೆಯಾಗಿರಬೇಕು.

ವಿಶೇಷ ಸೂಚನೆ:
ಈ ಹುದ್ದೆಗೆ ಅರ್ಜಿ ಸಲ್ಲಿಸ ಬಯಸುವ ಅಭ್ಯರ್ಥಿಗಳು ಕಳೆದ ಮೂರು ತಿಂಗಳೊಳಗೆ ಸಂಸ್ಥೆ ನಡೆಸಿದ ಯಾವುದೇ ನೇಮಕಾತಿ, ಸಂದರ್ಶನಕ್ಕೆ ಹಾಜರಾಗಿರಬಾರದು.

ಅರ್ಜಿ ಸಲ್ಲಿಸುವ ಪ್ರಕ್ರಿಯೆ

*ನೇಮಕಾತಿ ಅಧಿಸೂಚನೆ 2022 ಅನ್ನು ಸಂಪೂರ್ಣವಾಗಿ ಪರಿಶೀಲಿಸಿ ಮತ್ತು ಅಭ್ಯರ್ಥಿಯು ಅರ್ಹತಾ ಮಾನದಂಡಗಳನ್ನು ಪೂರೈಸುತ್ತಾರೆಯೇ ಎಂದು ಖಚಿತಪಡಿಸಿಕೊಳ್ಳಿ
*ಆನ್‌ಲೈನ್ ಮೋಡ್ ಮೂಲಕ ನಿಗದಿತ ಅರ್ಜಿಯನ್ನು ಡೌನ್​ ಲೋಡ್​ ಮಾಡಿ. ಭರ್ತಿ ಮಾಡುವ ಮೊದಲು, ದಯವಿಟ್ಟು ಸಂವಹನ ಉದ್ದೇಶಕ್ಕಾಗಿ ಸರಿಯಾದ ಇಮೇಲ್ ಐಡಿ ಮತ್ತು ಮೊಬೈಲ್ ಸಂಖ್ಯೆಯನ್ನು ನೀಡಿ ಐಡಿ ಪುರಾವೆ, ವಯಸ್ಸು, ಶೈಕ್ಷಣಿಕ ಅರ್ಹತೆ, ರೆಸ್ಯೂಮ್, ಯಾವುದೇ ಅನುಭವವಿದ್ದರೆ ಇತ್ಯಾದಿ ದಾಖಲೆಗಳನ್ನು ನೀಡಿ.
*ಅರ್ಜಿ ಸಲ್ಲಿಸುವವರು ಈ ಲಿಂಕ್ ಕ್ಲಿಕ್​ ಮಾಡಬೇಕು. ಬಳಿಕ ಪಿಡಿಎಫ್/ಎಂಎಸ್ ವರ್ಡ್ ಫಾರ್ಮ್ಯಾಟ್ ಮೂಲಕ ರೆಸ್ಯೂಮೆ ಅಪ್ಲೋಡ್ ಮಾಡಬೇಕು.

ಅಧಿಕೃತ ವೆಬ್‌ಸೈಟ್: https://www.accenture.com/

Leave A Reply

Your email address will not be published.