ಕರ್ನಾಟಕದ ಕಾಲೇಜ್ ಗಳಲ್ಲಿ ಕನ್ನಡ ಮಾಧ್ಯಮದಲ್ಲಿ ಎಂಜಿನಿಯರಿಂಗ್ ಕೋರ್ಸ್!
ಬೆಂಗಳೂರು : ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿ (AICTE) ಕಳೆದ ವರ್ಷ ರಾಷ್ಟ್ರೀಯ ಶಿಕ್ಷಣ ನೀತಿ (NEP) ಶಿಫಾರಸಿನಂತೆ ಪ್ರಾದೇಶಿಕ ಮಾಧ್ಯಮ / ಭಾಷೆಯಲ್ಲಿ ಎಂಜಿನಿಯರಿಂಗ್ ಶಿಕ್ಷಣವನ್ನು ನೀಡಲು ನಿರ್ಧರಿಸಿತ್ತು. ಇದೀಗ ಕರ್ನಾಟಕದ ಎರಡು ಖಾಸಗಿ ಕಾಲೇಜುಗಳು ಈ ವರ್ಷ ಮತ್ತೆ ಕನ್ನಡ ಮಾಧ್ಯಮದಲ್ಲಿ ಎಂಜಿನಿಯರಿಂಗ್ ಕೋರ್ಸ್ ಗಳನ್ನು ನೀಡಲು ಆಸಕ್ತಿ ವ್ಯಕ್ತಪಡಿಸಿದ್ದಾರೆ.
2021-22ರ ಶೈಕ್ಷಣಿಕ ವರ್ಷದಲ್ಲಿ, ಐದು ಖಾಸಗಿ ಎಂಜಿನಿಯರಿಂಗ್ ಕಾಲೇಜುಗಳು ಕೋರ್ಸ್ ಗಳನ್ನು ನೀಡಲು ಆಯ್ಕೆ ಮಾಡಿಕೊಂಡಿದ್ದವು. ಆದರೆ ಕೊನೆಯಲ್ಲಿ, ಯಾವುದೇ ವಿದ್ಯಾರ್ಥಿಗಳು ಪ್ರವೇಶ ಪಡೆದಿರಲಿಲ್ಲ. ಈ ವರ್ಷ ವಿಶ್ವವಿದ್ಯಾಲಯದಿಂದ ಕಾಲೇಜುಗಳಿಗೆ ಸ್ಥಳೀಯ ತಪಾಸಣಾ ಸಮಿತಿ (ಎಲ್ಐಸಿ) ಭೇಟಿ ನೀಡಿದಾಗ ಯಾವುದೇ ಕಾಲೇಜುಗಳು ಆಸಕ್ತಿ ವ್ಯಕ್ತಪಡಿಸದಿದ್ದರೂ, ಈ ಎರಡು ಕಾಲೇಜುಗಳು ಅರ್ಜಿ ಸಲ್ಲಿಸಿ ಎಐಸಿಟಿಇಯಿಂದ ಅನುಮತಿ ಪಡೆದಿವೆ.
ಚಿಕ್ಕಬಳ್ಳಾಪುರದ ಎಸ್ ಜೆ ಸಿ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಮತ್ತು ಭಾಲ್ಕಿಯ ಬಿಕೆಐಟಿ ಕನ್ನಡ ಮಾಧ್ಯಮದಲ್ಲಿ ಎಂಜಿನಿಯರಿಂಗ್ ಕೋರ್ಸ್ ಗಳನ್ನು ನೀಡಲು ಅನುಮತಿ ಪಡೆದಿವೆ. ಆದಾಗ್ಯೂ, ಈ ನಿಬಂಧನೆಯು ಸಿವಿಲ್ ಮತ್ತು ಮೆಕ್ಯಾನಿಕಲ್ ಕೋರ್ಸ್ ಗಳಿಗೆ ಮಾತ್ರ ಇದೆ.