ಕೆಲಸ ಗುಮಾಸ್ತ ಹುದ್ದೆ | ಆದರೆ ಮನೆಯಲ್ಲಿ ಪತ್ತೆಯಾಯಿತು ಲಕ್ಷ ಲಕ್ಷ ರೂ.ಗಳ ಕಂತೆ
ಮಧ್ಯಪ್ರದೇಶದ ರಾಜ್ಯ ಸರ್ಕಾರದ ಗುಮಾಸ್ತರೊಬ್ಬರ ನಿವಾಸದಿಂದ 85 ಲಕ್ಷ ರೂ.ಗಳನ್ನು ಆರ್ಥಿಕ ಅಪರಾಧ ವಿಭಾಗ (ಇಒಡಬ್ಲ್ಯು) ದಾಳಿ ನಡೆಸಿ ವಶಪಡಿಸಿಕೊಂಡಿದೆ.
ರಾಜ್ಯದ ವೈದ್ಯಕೀಯ ಶಿಕ್ಷಣ ಇಲಾಖೆಯಲ್ಲಿ ಗುಮಾಸ್ತನಾಗಿ ಕೆಲಸ ಮಾಡುತ್ತಿರುವ ಹೀರೋ ಕೇಸ್ವಾನಿ ಎಂಬಾತನ ಮನೆಯ ಮೇಲೆ ಆರ್ಥಿಕ ಅಪರಾಧ ವಿಭಾಗ (ಇಒಡಬ್ಲ್ಯು) ಅಧಿಕಾರಿಗಳು ಬುಧವಾಋ ಧಾಳಿ ನಡೆಸಿದ್ದು ಮನೆಯಲ್ಲಿ ನಗದು ರೂಪದ ಹಣವನ್ನು ವಶಪಡಿಸಿಕೊಂಡಿದ್ದಾರೆ.
ಇಒಡಬ್ಲ್ಯು ಅಧಿಕಾರಿಗಳು ಹುಡುಕಾಟ ನಡೆಸಲು ನಿವಾಸಕ್ಕೆ ತಲುಪಿದ ನಂತರ ಹೀರೋ ಕೇಸ್ವಾನಿ ಅನಾರೋಗ್ಯಕ್ಕೆ ಒಳಗಾದರು. ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗಬೇಕಾಯಿತು. ಅನಾರೋಗ್ಯದ ಕಾರಣ, ಹೀರೋ ಕೇಶ್ವಾನಿ ಅವರನ್ನು ವಿಚಾರಣೆ ಮಾಡಲು ಅಧಿಕಾರಿಗಳಿಗೆ ಸಾಧ್ಯವಾಗಲಿಲ್ಲ. ಎಂದು ಮೂಲಗಳು ವರದಿ ಮಾಡಿವೆ.
ಹೀರೋ ಕೇಸ್ವಾನಿ ತಿಂಗಳಿಗೆ 4,000 ರೂಪಾಯಿ ಸಂಬಳದೊಂದಿಗೆ ಕೆಲಸವನ್ನು ಪ್ರಾರಂಭಿಸಿ, ಪ್ರಸ್ತುತ ತಿಂಗಳಿಗೆ 50,000 ರೂಪಾಯಿಗಳನ್ನು ಗಳಿಸುತ್ತಿದ್ದಾರೆ. ಪ್ರಕರಣದಲ್ಲಿ ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಮೂಲಗಳು ತಿಳಿಸಿವೆ.