‘ ಮುನಿಸಿಕೊಂಡು ಕೂತ ಪತ್ನಿಯನ್ನು ಒಲಿಸಿಕೊಳ್ಳಲು ರಜೆ ಕೊಡಿ ‘ ಬಾಸ್ ಗೆ ಸರ್ಕಾರಿ ನೌಕರ ಬರೆದ ಲೀವ್ ಲೆಟರ್ ಆಯ್ತು ವೈರಲ್ !

ಕಚೇರಿಯಿಂದ, ಕೆಲಸದ ಸ್ಥಳದಿಂದ ರಜೆ ಪಡೆಯುವುದು ಎಷ್ಟು ಕಷ್ಟದ ಕೆಲಸ ಎಂದು ಯಾರಿಗೂ ಹೇಳಬೇಕಿಲ್ಲ. ಕೆಲವರು ಸತ್ಯ ಹೇಳಿ ರಜೆ ಪಡೆದರೆ, ಮತ್ತೆ ಕೆಲವರು ಸಬೂಬುಗಳನ್ನು ಬಾಸ್ ನ ಮುಂದೆ ತೂರಿ ರಜೆ ಪಡೆದುಕೊಳ್ಳಬಲ್ಲ ಚಾಣಾಕ್ಷರು. ರಜ ಅನಿವಾರ್ಯವಾದಾಗ ಬದುಕಿಲ್ಲದ ಹಿರಿಯರನ್ನು ಮತ್ತೆ ಬದುಕಿಸಿ, ಮತ್ತೆ ಸಾಯಿಸಿ ರಜೆ ಕೇಳಿ, ‘ಶ್ಯೂರ್ ಶಾಟ್ ‘ ರಜೆ ಪಡೆಯುವ ಜನರಿಗೇನೂ ಕಮ್ಮಿ ಇಲ್ಲ.

ಆದರೆ ಇಲ್ಲೊಬ್ಬ ಸಾಚಾ ವ್ಯಕ್ತಿ ತನ್ನ ಪತ್ನಿಯನ್ನು ಒಲಿಸಿಕೊಳ್ಳಲು ರಜೆ ಬೇಕೆಂದು ಕೇಳಿದ್ದಾನೆ. ಹಾಗೆ ಆತ ಬರೆದ ಲೀವ್ ಲೆಟರ್ ಈಗ ವೈರಲ್ ಆಗಿದೆ. ಕಾನ್ಪುರದ ಸರ್ಕಾರಿ ನೌಕರರೊಬ್ಬರು ತಮ್ಮ ಮುನಿಸಿಕೊಂಡು ಪತ್ನಿಯೊಂದಿಗೆ ಮಾತನಾಡಿ ಮನೆಗೆ ಕರೆತರಲು ಎರಡು ದಿನಗಳ ರಜೆ ಕೋರಿ ಉನ್ನತ ಅಧಿಕಾರಿಗೆ ಪತ್ರ ಕಳುಹಿಸಿದ್ದಾರೆ. ನೌಕರ ಬರೆದಿರುವ ರಜೆ ಪತ್ರ ಇದೀಗ ವೈರಲ್ ಆಗಿದೆ.


Ad Widget

Ad Widget

Ad Widget

Ad Widget

Ad Widget

Ad Widget

ಕಾನ್ಪುರದ ಶಂಸಾದ್ ಅಹ್ಮದ್ ಅವರು ರಜಾ ಕೇಳಿದ ಅಧಿಕಾರಿ. ಆತ ಅಲ್ಲಿನ ಪ್ರೇಮ್ ನಗರದ ಬ್ಲಾಕ್ ಡೆವಲಪ್‌ ಮೆಂಟ್ ಅಧಿಕಾರಿ (ಬಿಡಿಒ)ಗೆ ಪತ್ರ ಬರೆದು ತನಗೆ ತುರ್ತು ರಜೆ ಬೇಕೆಂದು ಕೇಳಿದ್ದಾರೆ. ರಜೆ ಯಾಕೆ ಬೇಕೆಂದು ಎಂದು ವಿವರಿಸಿದ್ದಾರೆ.
ಅಹ್ಮದ್ ನ ಹೆಂಡತಿ ಆತನೊಂದಿಗೆ ಸಣ್ಣದಾಗಿ ಜಗಳವಾಡಿಕೊಂಡಿದ್ದಳು. ಸಣ್ಣ ಮುನಿಸನ್ನು ದೊಡ್ಡದು ಮಾಡಿಕೊಂಡು ಮುಖ ಉಬ್ಬಿಸಿಕೊಂಡ ಪತ್ನಿ ತಮ್ಮ ಮಕ್ಕಳನ್ನು ಕರೆದುಕೊಂಡು ತನ್ನ ತಾಯಿಯ ಮನೆಗೆ ಹೋಗಿದ್ದಳು. ಹೋಗುವಾಗ ದೊಡ್ಡ ಲಗ್ಗೇಜ್ ನ ಸಹಿತ ಸಾಗಿದ್ದಳು. ಇದರಿಂದ್ ಅಹ್ಮದ್ ಬೇಸರಿಸಿಕೊಂಡಿದ್ದ. ತನ್ನ ಪತ್ನಿಗೆ ತಿಳಿ ಹೇಳಿ ಆಕೆಯನ್ನು ಕರೆತರಲು ಆತನಿಗೆ ರಜೆ ಬೇಕಿತ್ತು. ಅದಕ್ಕಾಗಿ ಅಹ್ಮದ್ ರಜೆ ಚೀಟಿ ಬರೆದಿದ್ದ. ಅದರಲ್ಲಿ ಆತ ಸೂಚಿಸಿದ ಕಾರಣ ನೋಡಿದ ಆತನ ಬಾಸ್ ಮತ್ತು ಸಹೋದ್ಯೋಗಿಗಳು ಆತನ ಲೀವ್ ಲೆಟರ್ ಅನ್ನು ವೈರಲ್ ಮಾಡಿದ್ದಾರೆ.

ನನಗೆ ನೋವಾಗಿದೆ. ಅವಳ ಮನವೊಲಿಸಲು ನಾನು ಅವಳ ಗ್ರಾಮಕ್ಕೆ ಹೋಗಬೇಕಾಗಿದೆ. ದಯವಿಟ್ಟು ನನ್ನ ರಜೆ ಅರ್ಜಿಯನ್ನು ಸ್ವೀಕರಿಸಿ ಎಂದು ಹಿಂದಿಯಲ್ಲಿ ಪತ್ರ ಬರೆಯಲಾಗಿದೆ. ಈಗ ವೈರಲ್ ಆಗಿರುವ ರಜೆ ಅರ್ಜಿಯನ್ನು ಬಿಡಿಒ ಅನುಮೋದಿಸಿದ್ದಾರೆ. ಅಹ್ಮದ್ ಅವರು ಕೆಲಸದಿಂದ ವಿರಾಮ ತೆಗೆದುಕೊಂಡು ಅವರ ಪತ್ನಿಯೊಂದಿಗಿನ ವಿವಾದವನ್ನು ಪರಿಹರಿಸಿಕೊಳ್ಳಲಿ ಎಂದು ಬಹಳಷ್ಟು ಮಂದಿ ಆಶಿಸಿದ್ದಾರೆ. ನೀವು ಒಳ್ಳೆಯ ‘ ಲೀವ್ ಲೆಟರ್ ಬರೆದಿದ್ದೀರಿ. ರಜೆ ಪಡೆದು, ಪತ್ನಿಯನ್ನು ಭೇಟಿಯಾಗಿ ಒಳ್ಳೆಯ ಲವ್ ಲೆಟರ್ ಬರೀರಿ’ ಎಂದು ಸೋಷಿಯಲ್ ಮೀಡಿಯಾ ಪುಕ್ಕಟೆ ಸಲಹೆ ನೀಡಿದೆ.

error: Content is protected !!
Scroll to Top
%d bloggers like this: