ಪ್ರಾಕೃತಿಕ ವಿಕೋಪ ದ.ಕ.ಜಿಲ್ಲೆಗೆ ವಿಶೇಷ ಪ್ಯಾಕೇಜ್ ಘೋಷಣೆಗೆ ಮುಖ್ಯಮಂತ್ರಿಗಳಿಗೆ ಮನವಿ -ಸುನಿಲ್ ಕುಮಾರ್
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸುರಿದ ಭಾರೀ ಮಳೆಗೆ ಸುಬ್ರಹ್ಮಣ್ಯದಲ್ಲಿ ಗುಡ್ಡ ಕುಸಿದು ಇಬ್ಬರು ಬಾಲಕಿಯರ ಮೃತಪಟ್ಟ ಘಟನೆಯೊಂದು ನಡೆದಿತ್ತು. ಗುಡ್ಡ ಕುಸಿದು ಮಣ್ಣಿನಡಿಯಲ್ಲಿ ಸಿಲುಕಿದ್ದ ಶ್ರುತಿ (11) ಹಾಗೂ ಜ್ಞಾನ ಶ್ರೀ (6) ಎಂಬ ಬಾಲಕಿಯರು ಮೃತಪಟ್ಟಿದ್ದರು.
ಇಂದು ದ.ಕ.ಜಿಲ್ಲಾ ಉಸ್ತುವಾರಿ ಸಚಿವ ವಿ.ಸುನೀಲ್ ಕುಮಾರ್ ಹಾಗೂ ಜಿಲ್ಲಾಧಿಕಾರಿ ಅವರು ಸುಬ್ರಹ್ಮಣ್ಯ ಪರ್ವತಮುಖಿಯಲ್ಲಿ ಗುಡ್ಡ ಕುಸಿದು ಇಬ್ಬರು ಬಾಲಕಿಯರ ಮೃತಪಟ್ಟ ಮನೆಗೆ ಇಂದು ಭೇಟಿ ನೀಡಿದರು.
ಮನೆಗೆ ಹಾಗೂ ಹಾನಿಗೊಳಗಾದ ಪ್ರದೇಶಕ್ಕೆ ಭೇಟಿ ನೀಡಿದ ಸಚಿವರು ಮನೆಗೂ ಹಾಗೂ ಹಾನಿಗೊಳಗಾದ ಅಂಗಡಿಗಳಿಗೂ ಪರಿಹಾರಕ್ಕೆ ಮನವಿ ಮಾಡಲಾಗಿದೆ.
ಮುಖ್ಯಮಂತ್ರಿಗಳು ಸಕಾರಾತ್ಮಕವಾಗಿ ಇದಕ್ಕೆ ಸ್ಪಂದಿಸಿದ್ದಾರೆ ಎಂಬ ಭರವಸೆಯ ಮಾತನ್ನು ಹೇಳಿದ್ದಾರೆ.
ನಂತರ ಸುದ್ದಿಗಾರರೊಂದಿಗೆ ಮಾತನಾಡುತ್ತಾ, “ಮೊನ್ನೆ ರಾತ್ರಿ ಸುಬ್ರಹ್ಮಣ್ಯದ ಪರಿಸರದಲ್ಲಿ ಅನಿರೀಕ್ಷಿತವಾಗಿ 4 ಗಂಟೆಯೊಳಗೆ ಬಂದಂತಂಹ ವಿಪರೀತವಾದ ಮಳೆಯ ಪರಿಣಾಮ ಭಾರೀ ಪ್ರಮಾಣದ ನಷ್ಟ ಉಂಟಾಗಿರುವುದು ನಮ್ಮೆಲ್ಲರ ಗಮನಕ್ಕೆ ಬಂದಿದೆ. ವಿಷಯ ಗೊತ್ತಾದ ಕೂಡಲೇ ಜಿಲ್ಲಾಡಳಿತ ತಕ್ಷಣ ಆಗಬೇಕಾದ ಎಲ್ಲಾ ಮುಂಜಾಗ್ರತಾ ಕ್ರಮಗಳನ್ನು ತಗೊಂಡಿದೆ. ಎರಡು ಮಕ್ಕಳನ್ನು ನಮ್ಮ ಕೈಯಲ್ಲಿ ಉಳಿಸಿಕೊಳ್ಳೋಕೆ ಆಗಿಲ್ಲ. ಈ ರೀತಿಯ ಅನಾಹುತಗಳು ಬಹಳ ದೊಡ್ಡ ಮಟ್ಟದಲ್ಲಿ ಇಲ್ಲಿ ಆಗಿದೆ. ಆ ಎಲ್ಲಾ ಪ್ರದೇಶಗಳಿಗೆ ಇವತ್ತು ಬೆಳಗ್ಗಿನಿಂದ ಸಂಜೆ ತನಕ ನಾ ಭೇಟಿ ಕೊಡ್ತಾ ಇದ್ದೇನೆ. ನಿನ್ನೆ ಡಿ ಸಿಯವರು ಹಾಗೂ ಸ್ಥಳೀಯ ಶಾಸಕರಾದ ಅಂಗಾರರು ಕೂಡಾ ಸಾಕಷ್ಟು ಪ್ರದೇಶಗಳಿಗೆ ಭೇಟಿ ಕೊಟ್ಟಿದ್ದಾರೆ. ನಿನ್ನೆ ಸನ್ಮಾನ್ಯ ಮುಖ್ಯಮಂತ್ರಿಯವರು ಕೂಡಾ ವೀಡಿಯೋ ಕಾನ್ಫರೆನ್ಸ್ ಮೂಲಕ ಜಿಲ್ಲೆಯ ಎಲ್ಲಾ ಪರಿಸ್ಥಿತಿಗಳ ಅವಲೋಕನ ಮಾಡಿದ್ದಾರೆ. ತಕ್ಷಣಕ್ಕೆ ಕೊಡಬೇಕಾದ ಪರಿಹಾರದ ಕಾರ್ಯವನ್ನು ಕೂಡಾ ಕೊಟ್ಟಿದ್ದೇವೆ. ಈ ಭಾಗದಲ್ಲಿ ಅಂಗಡಿಗಳಿಗೆ ಕೂಡಾ ಭಾರೀ ಪ್ರಮಾಣದ ನೀರು ನುಗ್ಗಿದರಿಂದ ಭಾರೀ ಹಾನಿ ಉಂಟಾಗಿದೆ. ಅದಕ್ಕೂ ಸಣ್ಣ ಪ್ರಮಾಣದ ಸಹಾಯ ಮಾಡಲು ಮೌಖಿಕವಾಗಿ ಒಪ್ಕೊಂಡಿದ್ದಾರೆ. ಒಟ್ಟಾರೆ ಈ ಬಾರಿ ಏನು ಮಳೆಯಿಂದಾಗಿ ಏನು ಹಾನಿಯಾಗಿದೆ ಎಂಬುದನ್ನು ಗಮನದಲ್ಲಿಟ್ಟುಕೊಂಡು ವಿಶೇಷ ಪ್ಯಾಕೇಜನ್ನು ದಕ್ಷಿಣ ಕನ್ನಡ ಜಿಲ್ಲೆಗೆ ನೀಡಲು ಮನವಿ ಮಾಡಿದ್ದೇನೆ ಎಂದು ಹೇಳಿದರು.