ಸುಬ್ರಹ್ಮಣ್ಯ:ಜಿಲ್ಲೆಯ ಕೋಮು ಗಲಭೆಯ ಮಧ್ಯೆ ಗ್ರಾಮೀಣ ಭಾಗದಲ್ಲಿ ಸೌಹಾರ್ದತೆ!! ಪ್ರವಾಹದ ಸಂದರ್ಭ ಮುಸ್ಲಿಂ ಯುವಕನ ಪ್ರಾಣ ರಕ್ಷಿಸಿದ ಹಿಂದೂ ಯುವಕ

Share the Article

ಸುಬ್ರಹ್ಮಣ್ಯ: ಪ್ರವಾಹಕ್ಕೆ ತತ್ತರಿಸಿದ್ದ ಹರಿಹರ ಪಲ್ಲತಡ್ಕದಲ್ಲಿ ತೆರವು ಕಾರ್ಯ ನಡೆಸುತ್ತಿದ್ದ ಕ್ರೇನ್ ಚಾಲಕನೋರ್ವ ಆಕಸ್ಮಿಕವಾಗಿ ನೀರಿಗೆ ಬಿದ್ದ ಸಂದರ್ಭ ತನ್ನ ಪ್ರಾಣದ ಹಂಗನ್ನು ತೊರೆದು ಆತನನ್ನು ರಕ್ಷಿಸಿದ ಗ್ರಾಮೀಣ ಯುವಕನೊಬ್ಬನಿಗೆ ಸಾಲು ಸಾಲು ಅಭಿನಂದನೆ ಹರಿದುಬರುತ್ತಿದೆ.

ಜಿಲ್ಲೆಯಲ್ಲಿ ಕೋಮು ಸೂಕ್ಷ್ಮವಾದ ಸಂದರ್ಭದಲ್ಲಿ ಪ್ರವಾಹದಿಂದ ತತ್ತರಿಸಿದ ಪ್ರದೇಶದಲ್ಲಿ ಕಾರ್ಯಾಚರಣೆ ನಡೆಸಲು ಶರೀಫ್ ಎನ್ನುವ ವ್ಯಕ್ತಿಯೊಬ್ಬರು ಕ್ರೇನ್ ಚಾಲಕನಾಗಿ ಆಗಮಿಸಿದ್ದರು.ಕಾರ್ಯಾಚರಣೆಯಲ್ಲಿ ತೆರವು ಕಾರ್ಯ ನಡೆಯುತ್ತಿದ್ದ ಸಂದರ್ಭ ಆಕಸ್ಮಿಕವಾಗಿ ನೀರಿಗೆ ಬಿದ್ದರು ಎನ್ನಲಾಗಿದೆ.

ಇದೇ ವೇಳೆಗೆ ಅಲ್ಲೇ ಇದ್ದ ಸೋಮಶೇಖರ್ ಕಟ್ಟೆಮನೆ ಎನ್ನುವ ಯುವಕ ತನ್ನ ಪ್ರಾಣದ ಹಂಗನ್ನು ತೊರೆದು, ನೀರಿಗೆ ಹಾರಿ ಶರೀಫ್ ನನ್ನು ರಕ್ಷಿಸಿದ್ದಾರೆ. ಸದ್ಯ ರಕ್ಷಣೆ ನಡೆಸುತ್ತಿರುವ ತುಣುಕುಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ್ದು, ಕೋಮು ಗಲಭೆಯ ನಡುವೆ ಬೂದಿ ಮುಚ್ಚಿದ ಕೆಂಡದಂತಿರುವ ದಕ ಜಿಲ್ಲೆಯಲ್ಲಿ,ಗ್ರಾಮೀಣ ಭಾಗವೊಂದರ ಯುವಕನ ಕೋಮು ಸೌಹಾರ್ದತೆಗೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ಪ್ರಶಂಸೆ ವ್ಯಕ್ತವಾಗಿದೆ.

Leave A Reply

Your email address will not be published.