ಗೂಗಲ್ ಮ್ಯಾಪ್ ನೀಡುತ್ತೆ ದಂಡದಿಂದ ರಕ್ಷಣೆ!
ಇಂದು ಹೆಚ್ಚಿನವರು ಪ್ರಯಾಣಿಸುವಾಗ ಬಳಸುವ ಆಪ್ ಎಂದರೆ ಗೂಗಲ್ ಮ್ಯಾಪ್. ಹೆಚ್ಚಿನವರು ಮ್ಯಾಪ್ ಬಳಸಿಕೊಂಡೆ ಹೊಸ-ಹೊಸ ಪ್ರದೇಶಗಳಿಗೆ ಭೇಟಿ ನೀಡುತ್ತಾರೆ. ಇಂತಹ ಗೂಗಲ್ ಮ್ಯಾಪ್ ಹೊಸ ಯೋಜನೆಗಳನ್ನು ರೂಪಿಸುತ್ತಲೇ ಬಂದಿದೆ. ಮುಂಚಿತವಾಗಿ ರಸ್ತೆಯನ್ನು ವೀಕ್ಷಿಸಲು ಗೂಗಲ್ ಸ್ಟ್ರೀಟ್ ವ್ಯೂ ಆಪ್ ಅನ್ನು ಪರಿಚಯಿಸಿದೆ. ಇಂತಹ ಉತ್ತಮವಾದ ಆಪ್ ನಿಮ್ಮನ್ನು ದಂಡದಿಂದಲೂ ತಪ್ಪಿಸಲು ಸಹಾಯ ಮಾಡುತ್ತದೆ.
ಹೌದು. ಗೂಗಲ್ ಅಪ್ಲಿಕೇಶನ್ ತನ್ನ ಬಳಕೆದಾರರಿಗೆ ವೇಗ ಮಿತಿ ಎಚ್ಚರಿಕೆಗಳನ್ನು ಸಹ ಕಳುಹಿಸಬಹುದು. ಇದರಿಂದಾಗಿ ನಿಮ್ಮ ಪ್ರಯಾಣದ ವೇಗದ ಕುರಿತು ಎಚ್ಚರಿಕೆಯನ್ನು ಕೂಡ ನೀಡಬಹುದು. ಅತೀ ವೇಗದ ಸಂದರ್ಭದಲ್ಲಿ ಇದು ನೀಡುವ ಎಚ್ಚರಿಕೆಯಿಂದ ನೀವೂ ದಂಡದಿಂದ ಪಾರಾಗಬಹುದು. ಹಾಗಿದ್ರೆ ಈ ಗೂಗಲ್ ಮ್ಯಾಪ್ ಬಳಕೆ ಹೇಗೆ ಎಂಬುದನ್ನು ಇಲ್ಲಿ ನೋಡಿ..
*ವೇಗ ಮಿತಿ ಎಚ್ಚರಿಕೆ ಸೇವೆಯನ್ನು ಬಳಸಲು, ಮೊದಲು ನಿಮ್ಮ ಸಾಧನದಲ್ಲಿ ಗೂಗಲ್ ನಕ್ಷೆಗಳ ಅಪ್ಲಿಕೇಶನ್ ತೆರೆಯಿರಿ ಮತ್ತು ಮೇಲಿನ ಬಲ ಮೂಲೆಯಲ್ಲಿರುವ ಪ್ರೊಫೈಲ್ ಐಕಾನ್ ಮೇಲೆ ಟ್ಯಾಪ್ ಮಾಡಿ.
*ನಂತರ ಕೆಳಗೆ ಸ್ಕ್ರಾಲ್ ಮಾಡಿ ಮತ್ತು ನ್ಯಾವಿಗೇಶನ್ ಸೆಟ್ಟಿಂಗ್‌ಗಳನ್ನು ಟ್ಯಾಪ್ ಮಾಡಿ. ಈಗ ಇಲ್ಲಿ ವೇಗದ ಮಿತಿಗಾಗಿ ಟಾಗಲ್ ಅನ್ನು ಆನ್ ಮಾಡಿ ಮತ್ತು ನಂತರ ಸ್ಪೀಡೋಮೀಟರ್ಗಾಗಿ ಟಾಗಲ್ ಅನ್ನು ಆನ್ ಮಾಡಿ
*ಈಗ ನೀವು ಈ ಸೇವೆಯನ್ನು ಬಳಸಲು ಸಾಧ್ಯವಾಗುತ್ತದೆ ಮತ್ತು ನೀವು ನಿರ್ದಿಷ್ಟ ವೇಗದ ಮಿತಿಯನ್ನು ದಾಟಿದ ತಕ್ಷಣ, ಅಪ್ಲಿಕೇಶನ್ ನಿಮಗೆ ತಕ್ಷಣವೇ ಎಚ್ಚರಿಕೆಯನ್ನು ಕಳುಹಿಸುತ್ತದೆ.
ಕಂಪನಿಯ ಬ್ಲಾಗ್ ಪ್ರಕಾರ, ಗೂಗಲ್ ನಕ್ಷೆಗಳು ಈಗ ಬೆಂಗಳೂರು ಮತ್ತು ಚಂಡೀಗಢದಿಂದ ಪ್ರಾರಂಭಿಸಿ ಭಾರತದಲ್ಲಿ ಟ್ರಾಫಿಕ್ ಅಧಿಕಾರಿಗಳು ಹಂಚಿಕೊಳ್ಳುವ ವೇಗ ಮಿತಿಗಳನ್ನು ಒದಗಿಸುತ್ತದೆ. ಇದಲ್ಲದೆ, ಬೆಂಗಳೂರು ಟ್ರಾಫಿಕ್ ಪೊಲೀಸರ ಸಹಯೋಗದೊಂದಿಗೆ ಟ್ರಾಫಿಕ್ ಲೈಟ್‌ಗಳ ಸಮಯವನ್ನು ಅತ್ಯುತ್ತಮವಾಗಿಸಲು ಗೂಗಲ್ ಅವರಿಗೆ ಸಹಾಯ ಮಾಡಿದೆ. ಇದರ ಸೂಚನೆಯಿಂದ ದಂಡದಿಂದ ಸೇಫ್ ಆಗಬಹುದು.