ಹೆಣ್ಮಕ್ಕಳು ಒಳ ಉಡುಪನ್ನು ಎಷ್ಟು ತಿಂಗಳಿಗೊಮ್ಮೆ ಬದಲಾಯಿಸಿದರೆ ಉತ್ತಮ?

ಹೊಸ ಡ್ರೆಸ್ ತಗೋಳ್ಳೋಕೆ ಹೋಗಬೇಕು ಅನ್ನುವಾಗ ಎಲ್ಲರಿಗೂ ಒಮ್ಮೆಲೇ ಖುಷಿಯಾಗುವುದು ಸಹಜ. ಯಾರು ತಾನೇ ಇಷ್ಟ ಪಡಲ್ಲ ಹೇಳಿ ಹೊಸ ಬಟ್ಟೆ ಖರೀದಿಯನ್ನು. ಆದರೆ ಇಲ್ಲಿ ನಾವು ಹೊಸಬಟ್ಟೆ ಖರೀದಿ ಮಾತಾಡ್ತಾ ಇರೋದು ಒಳ ಉಡುಪುಗಳ ಬಗ್ಗೆ. ಯಾರಿಗೂ ಇದು ಕಾಣಲ್ಲ, ಹಾಗಾಗಿ ಇದರ ಖರೀದಿಯ ಬಗ್ಗೆ ಯಾರೂ ಅಷ್ಟೊಂದು ಗಮನಕೊಡಲ್ಲ.

ಆದರೆ ನಿಮಗೆ ಗೊತ್ತೇ ? ಪದೇ ಪದೇ ಹಳೆಯ ಒಳ ಉಡುಪು ಧರಿಸೋದು ಯೋನಿಯ ಆರೋಗ್ಯಕ್ಕೆ ಒಳ್ಳೆಯದಂತೂ ಅಲ್ಲ. ಹಾಗಾದರೆ ಒಳಉಡುಪನ್ನು ಎಷ್ಟು ತಿಂಗಳಿಗೊಮ್ಮೆ ಬದಲಾಯಿಸಬೇಕು, ಯಾವ ರೀತಿಯ ಒಳಉಡುಪು ಯೋನಿಯ ಆರೋಗ್ಯಕ್ಕೆ ಉತ್ತಮ? ಬನ್ನಿ ತಿಳಿಯೋಣ.


Ad Widget

Ad Widget

Ad Widget

Ad Widget

Ad Widget

Ad Widget

Ad Widget

ಒಳ ಉಡುಪು ಬಿಗಿಯಾಗಿರಬಾರದು : ತುಂಬಾ ಬಿಗಿಯಾದ ಒಳ ಉಡುಪುಗಳನ್ನು ಧರಿಸಿದರೆ ಮುಟ್ಟಿನ ಸಂದರ್ಭದಲ್ಲಿ ಯೋನಿಯ ನೋವಿಗೆ ಕಾರಣವಾಗಬಹುದು. ಯಾರಾದರೂ ಯೋನಿ ಸಮಸ್ಯೆಗಳನ್ನು ಹೊಂದಿದ್ದರೆ ಅಥವಾ ಅಂತಹ ಯಾವುದೇ ಸೋಂಕಿನಿಂದ ಬಳಲುತ್ತಿದ್ದರೆ, ಬಿಗಿಯಾದ ಒಳ ಉಡುಪು ಈ ಸಮಸ್ಯೆಯನ್ನು ಇನ್ನಷ್ಟು ಹೆಚ್ಚು ಮಾಡಿಸುತ್ತದೆ.

ಒಂದು ಒಳ ಉಡುಪು ಆರು ತಿಂಗಳಿಗಿಂತ ಹೆಚ್ಚು ಕಾಲ ಒಳ್ಳೆಯದಲ್ಲ : ಸಾಮಾನ್ಯವಾಗಿ ಒಂದು ಒಳ ಉಡುಪುಗಳನ್ನು ಆರು ತಿಂಗಳವರೆಗೆ ಮಾತ್ರ ಬಳಸಬಹುದು. ಅನಂತರ ಕೂಡಾ ಬಳಸಿದರೆ ತೇವಾಂಶ ಉಂಟಾಗಿ ಬ್ಯಾಕ್ಟಿರಿಯಾ ಮತ್ತು ಯೀಸ್ಟ್ ಸೋಂಕುಗಳು ಉಂಟಾಗಬಹುದು. ಚೆನ್ನಾಗಿ ಒಗೆದು ಒಣಗಿಸಿದ ನಂತರವೂ ಹಳತು ಒಳಉಡುಪುಗಳು ಯೀಸ್ಟ್ ಸೋಂಕಿಗೆ ಒಳಗಾಗುವ ಪ್ರಮಾಣ ಹೆಚ್ಚು. ಹೀಗಾಗಿ ಒಳಉಡುಪುಗಳನ್ನು ಆರು ತಿಂಗಳಿಗೊಮ್ಮೆ ಬದಲಾಯಿಸುವ ಅಭ್ಯಾಸ ಮಾಡಿದರೆ ಉತ್ತಮ

ಒಳ ಉಡುಪುಗಳ ಬಟ್ಟೆ ಒಳ್ಳೆಯದಾಗಿರಲಿ : ಯಾವ ಬಟ್ಟೆಯಿಂದ ಒಳ ಉಡುಪು ಮಾಡಲ್ಪಟ್ಟಿದೆ ಎಂಬುವುದು ಬಹಳ ಮುಖ್ಯ. ಹತ್ತಿ ಅಥವಾ ಹತ್ತಿ ಪ್ಯಾಡ್ ಆಧಾರಿತ ಒಳ ಉಡುಪುಗಳನ್ನು ಧರಿಸುವಂತೆ ಹೆಚ್ಚಿನ ತಜ್ಞರು ಸಲಹೆ ನೀಡುತ್ತಾರೆ. ಇವು ತೇವಾಂಶ ಪ್ರಕ್ರಿಯೆಯನ್ನು ತಡೆಯುತ್ತದೆ. ಇದಕ್ಕೆ ವಿರುದ್ಧವಾಗಿ, ನೈಲಾನ್ ಮತ್ತು ಸ್ಟ್ಯಾಂಡೆಕ್ಸ್‌ನಂತಹ ಮಾಡಿದ ಒಳ ಉಡುಪು ತೇವಾಂಶವನ್ನು ಹಿಡಿದಿಟ್ಟುಕೊಳ್ಳುವ ಪ್ರವೃತ್ತಿಯನ್ನು ಹೊಂದಿದೆ. ಇದು ಯೋನಿಯ ಆರೋಗ್ಯಕ್ಕೆ ಒಳ್ಳೆಯದಲ್ಲ. ಅಸ್ವಸ್ಥತೆ ಮತ್ತು ನೋವು ಎರಡನ್ನೂ ಉಂಟುಮಾಡಬಹುದು.

ಒಳ ಉಡುಪುಗಳನ್ನು ಖರೀದಿಸುವಾಗ ಎಚ್ಚರಿಕೆಯಿಂದ ಖರೀದಿಸಿ : ಹಾಳಾದ, ಮಾಸಿದ ಬಟ್ಟೆಯಿಂದ ಮಾಡಿದ ಪ್ಯಾಂಟಿಗಳನ್ನು ಧರಿಸ ಬಾರದು. ಬಳಸಿದ ಒಳ ಉಡುಪನ್ನು ಸ್ವಚ್ಛಗೊಳಿಸುವುದು ಬಹಳ ಮುಖ್ಯ. ಕೆಲವರು ಒಳಉಡುಪುಗಳನ್ನು ಸ್ವಚ್ಛಗೊಳಿಸಲು ಸೂಕ್ಷ್ಮಾಣು-ಕೊಲ್ಲುವ ಉತ್ಪನ್ನವನ್ನು ಬಳಸುತ್ತಾರೆ. ಆದರೆ ಇದು ಬೇಕಾಗಿಲ್ಲ. ಒಳ ಉಡುಪನ್ನು ಸಾಮಾನ್ಯ ಬಿಸಿನೀರಿನೊಂದಿಗೆ ತೊಳೆದರೂ ಸಾಕು.

ಹಾಗಾಗಿ ಎಲ್ಲಾ ಹೆಣ್ಣು ಮಕ್ಕಳು ತಮ್ಮ ಖಾಸಗಿ ಭಾಗಗಳ ನೈಮರ್ಲ್ಯಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು. ಇದು ಅತೀ ಮುಖ್ಯ ಕೂಡಾ. ಇದರಿಂದ ಉತ್ತಮ ಆರೋಗ್ಯ ನಿಮ್ಮದಾಗುತ್ತದೆ.

error: Content is protected !!
Scroll to Top
%d bloggers like this: