Breaking News | ದಕ್ಷಿಣ ಕನ್ನಡದ ಈ ತಾಲೂಕುಗಳ ಶಾಲಾ ಕಾಲೇಜುಗಳಿಗೆ ಇವತ್ತು ರಜೆ

Share the Article

ಪುತ್ತೂರು : ಭಾರಿ ಮಳೆ ದಕ್ಷಿಣ ಕನ್ನಡದ ಈ ತಾಲೂಕುಗಳ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ. ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ರಾಜೇಂದ್ರ ಕುಮಾರ್ ಅವರು ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಿದ್ದಾರೆ.

ನಿನ್ನೆ ಸಂಜೆಯಿಂದ ಸುರಿದ ಬೇಗ ಸ್ಫೋಟದ ರೀತಿಯ ಮಳೆಗೆ ಸುಬ್ರಹ್ಮಣ್ಯ ಆಸು ಪಾಸು ತತ್ತರಿಸಿ ಹೋಗಿತ್ತು. ಸುಳ್ಯದ ಹಲವು ಕಡೆ ಮಹಾಮಳೆ ಬಂದಿತ್ತು. ಸುಬ್ರಹ್ಮಣ್ಯ ಸುಳ್ಳದ ನದಿಗಳು ದೇವಸ್ಥಾನದ ಅಂಚಿಗೂ ನೀರು ಬಂದಿತ್ತು. ಒಂದು ಕಡೆ ಮಳೆಯಿಂದಾಗಿ ಮನೆಯೊಂದರ ಮೇಲೆ ಗುಡ್ಡ ಕುಸಿದು ಮೂವರು ನಾಪತ್ತೆಯಾಗಿದ್ದರು. ಹಳ್ಳ ಕೊಳ್ಳಗಳು ತುಂಬಿ ಹರಿಯುವ ಕಾರಣದಿಂದ ಎರಡು ತಾಲೂಕುಗಳಿಗೆ ರಜೆ ಘೋಷಣೆ ಮಾಡಲಾಗಿದೆ.

ಸುಳ್ಯ ಮತ್ತು ಕಡಬ ತಾಲೂಕಿನ ಎಲ್ಲ ಶಾಲಾ-ಕಾಲೇಜುಗಳಿಗೆ, ಇಂದು ಮಂಗಳವಾರ ರಜೆ ನೀಡಿ ಜಿಲ್ಲಾಧಿಕಾರಿಯವರು ಘೋಷಣೆ ಮಾಡಿದ್ದಾರೆ. ಅಲ್ಲದೆ ತಾಲೂಕಿನ ಎಲ್ಲಾ ಅಂಗನವಾಡಿಗಳು ಕೂಡಾ ಇವತ್ತು ಮುಚ್ಚಿರಲಿವೆ.

Leave A Reply