ಹೇಳದೆ ಕೇಳದೆ ಕೆಲಸದಿಂದ ವಜಾ ಮಾಡಿದ ಬಾಸ್ ನ ಮನೆಯನ್ನು ಈ ಮಾಜಿ ಉದ್ಯೋಗಿ ಮಾಡಿದ್ದಾದರೂ ಏನು ? ವೀಡಿಯೋ ವೈರಲ್

ಕೆಲವೊಂದು ಕಂಪನಿಗಳು ಉದ್ಯೋಗಿಗಳಿಗೆ ಮೊದಲೇ ನೋಟಿಸ್ ಕೊಟ್ಟು ಕೆಲಸದಿಂದ ತೆಗೆಯುತ್ತದೆ. ಆದರೆ ಯಾವುದೇ ಮುನ್ಸೂಚನೆ ನೀಡದೇ ನೀವು ಕೆಲಸ ಮಾಡುವ ಸಂಸ್ಥೆ ನಿಮ್ಮನ್ನು ಕೆಲಸದಿಂದ ತೆಗೆದು ಹಾಕಿದರೆ ನಿಮಗೆ ಏನನಿಸುತ್ತದೆ ? ಹೇಳಿ… ತುಂಬಾ ಜನರಿಗೆ ಏನು ಮಾಡಬೇಕೆಂದು ಗೊತ್ತಾಗಲ್ಲ. ಹಾಗೆನೇ ಬಹುತೇಕರು ಯಾಕೆ ಈ ರೀತಿ ಮಾಡಿದರು ಎಂಬ ಚಿಂತೆಗೊಳಪಡುತ್ತಾರೆ. ಮನಸ್ಸಿಗೆ ಬಂದ ಹಾಗೇ ಬಾಸ್ ಗೆ ಬೈಯುತ್ತಾರೆ. ಇಷ್ಟೇ ಮಾಡೋಕೆ ಸಾಧ್ಯ.

 

ಆಮೇಲೆ ಇನ್ನೂ ಮುಂದೆ ಹೋಗುತ್ತಾ…ಇದೊಂದು ಬದುಕಿನ ಭಾಗ ಎಂದು ಭಾವಿಸಿಕೊಂಡು ಹೊಸ ಉದ್ಯೋಗ ಹುಡುಕುತ್ತಾ ಮುಂದಡಿ ಇಡುತ್ತಾರೆ. ಆದರೆ ಇಲ್ಲೊಬ್ಬ ಉದ್ಯೋಗಿ ಮಾಡಿದ ಕೆಲಸ ನೋಡಿದರೆ,ನೀವು ನಿಜಕ್ಕೂ ಆಶ್ಚರ್ಯ ಪಡುತ್ತೀರ. ಅಷ್ಟು ಮಾತ್ರವಲ್ಲದೇ ಬಾಸ್ ವಿರುದ್ಧ ತೀವ್ರವಾಗಿ ಸಿಟ್ಟುಗೊಂಡಿದ್ದು, ವಿಭಿನ್ನವಾಗಿ ಸೇಡು ತೀರಿಸಿಕೊಂಡಿದ್ದಾನೆ.

ಈ ಮಾಜಿ ಉದ್ಯೋಗಿ ಬಾಸ್‌ನ ಮನೆಗೆ ಬುಲ್ಡೋಜರ್ ತಂದಿದ್ದು, ಇಡೀ ಮನೆಯನ್ನು ಕೆಲ ನಿಮಿಷಗಳಲ್ಲಿ ಧರಾಶಾಯಿಯಾಗಿ ಮಾಡಿದ್ದಾನೆ. ಬುಲ್ಡೋಜರ್ ಮೂಲಕ ಮನೆ ಕೆಡವುತ್ತಿರುವ ದೃಶ್ಯ ಕ್ಯಾಮರಾದಲ್ಲಿ ಸೆರೆ ಆಗಿದ್ದು, ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಕೆನಡಾದಲ್ಲಿ ಈ ಆಘಾತಕಾರಿ ಘಟನೆ ನಡೆದಿದೆ.

ಕೆನಡಾದ ಒಂಟರಿಯೋದ ಮಸ್ಕೊಕಾದಲ್ಲಿರುವ ಬಾಸ್ ನ ಲೇಕ್ ಹೌಸ್‌ನ್ನು ಈತ ಬುಲ್ಡೋಜರ್ ಮೂಲಕ ಸಂಪೂರ್ಣವಾಗಿ ನೆಲಕ್ಕೆ ಕೆಡವಿ, ಸೇಡು ತೀರಿಸಿಕೊಂಡಿದ್ದಾನೆ. ಇದೇ ಪ್ರದೇಶದಲ್ಲಿ ಲೇಕ್ ಹೌಸ್ ಇನ್ನೊಬ್ಬ ವ್ಯಕ್ತಿ ಈ ದೃಶ್ಯವನ್ನು ಫೋನ್‌ನಲ್ಲಿ ಸೆರೆ ಹಿಡಿದು ಸಾಮಾಜಿಕ ಜಾಲತಾಣದಲ್ಲಿ ಹರಿ ಬಿಟ್ಟಿದ್ದಾನೆ.

Leave A Reply

Your email address will not be published.